ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರಾದೇವಿ ಕಾಯೆ ಕರುಣಾಂಬುಧಿಯೆ ಪ ಮಾಯೆ ನಾರಾಯಣನ್ನ ಜಾಯೆ ಸತತ ಜ್ಞಾನ | ವೀಯೆ ಭಕ್ತರ ಪ್ರೀಯೇಅಪ ಕನ್ನಾಮಣಿಯೆ ಕಾಮಿನಿ ಮಂಗಳವಾಣಿ | ಸನ್ನುತೆ ಲೋಕ ಜನನಿ | ನಿನ್ನ ಚರಣಯುಗ್ಮ | ವನ್ನೆ ನಂಬಿದೆ ಸುಪ್ರಸನ್ನೆ ಸರ್ವಜೀವರ | ಭಿನ್ನೆ ಭಾಗ್ಯಸಂಪನ್ನೆ || ಮನ್ನಿಸಿ ಮುದದಿಂದ | ಬಿನ್ನಪ ಲಾಲಿಸು | ಚನ್ನೆ ಚಕ್ರ ಪಾಂಚಜನ್ಯ ಧರಾದೇವಿ 1 ಅತಿದಯವಂತೆ ನೀನೆಂದು ಬೇಗದಿ ಬಂದು | ನುತಿಸಿದೆ ದೀನನಾಗಿಂದೂ | ಪತಿತರೊಳಿಡದಲೆ | ಗತಿಗೆ ಸಮ್ಮೊಗಮಾಡು | ತ್ಪತ್ತಿ ಸ್ಥಿತಿ ಲಯಕರ್ತೆ ಅತುಳ ಶೋಭನಮೂರ್ತೆ | ಪತಿಯಲಿ ಜನಿಸಿದೆ| ಪತಿಗೆ ಸತಿಯಾದೆ | ಪತಿಯ ಸಂಗಡ ಜ | ನಿತಳಾದ ಚರಿತೆ2 ಕುಂಕುವರತ ರಾಜಿತೆ ಧವಳಗೀತೆ | ಪಂಕಜಸದನೆ ಖ್ಯಾತೆ | ಲೆಂಕಾ ವತ್ಸಲೆ ಸರ್ವಾಲಂಕಾರ ಮಾಯೆ ರವಿ | ಸಂಕಾಸೆ ಬಹುಕಾಲ | ಸಂಕಟವ ವಿನಾಶೆ | ಕ | ಳಂಕವಾಗದಂತೆ3
--------------
ವಿಜಯದಾಸ
ಓಂಕಾರ ರೂಪಿಣಿ ಭದ್ರಾಣಿ ಕಲ್ಯಾಣಿ ಪಂಕೇಜದಳಲೋಚನೀ ಅಂಬಾ ಪ ಶಂಕರ ಪ್ರಿಯರಾಣಿ ಗೀರ್ವಾಣೆ ರುದ್ರಾಣಿ | ಸ ರ್ವ ಮಂಗಳವಾಣಿ | ಕರುಣಿ ಶುಶ್ರೋಣಿ ಅ.ಪ ಹೈಮವತೀ ಮಾತೆ | ಹಿಮಗಿರಿ ತನುಜಾತೆ ಭಾಮೆ ಸ್ವಯಂಜಾತೆ | ಸುರಮೌನಿಗೀತೆ ಪ್ರೇಮ ರಸಾನ್ವಿತೇ | ರಾಮಾಭಿನಂದಯುತೆ ಶ್ರೀಮಾಂಗಿರೀಶ | ರಂಗಸಹಜಾತೆ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀ ಲಕ್ಷ್ಮೀ ದೇವಿಯರು ಕಾಯೆ_ಕಾಯೆ _ ಶ್ರೀ ಹರಿಜಾಯೆ ಪ ಕಾಯೆ ಕಾಯೆ ಸಂತೋಷವೀಯೆ ಮೂರು ಜಗ ಕಾಯೆ ವಿಷ್ಣುಮನ ಛಾಯೆ ಭಕುತಿವರವೀಯೆ ನಿತ್ಯ ಎಳೆಕಾಯೆ ಸುಜನಗಣ ಧ್ಯೇಯೆ ನಿಗಮತತಿಗೇಯೆ ಮಾಯೆ ಅ.ಪ. ಶರಣು-ಶರಣು-ಶರಣು ಗುಣಭರಣಿ ಭವ ತರಣೀ ಶರಣು ತ್ರಿಗುಣ ಧಣಿ ಶರಣು ಸೊಬಗು ಖಣಿ ಶರಣು ನಿಗಮಧ್ವನಿ ಮಣಿ ಸಿರಿ 1 ಅಂಬೇ-ಅಂಬೇ-ಅಂಬೇ-ಅಂಬೇ ನಿರುತಹರಿ ಕಾಂಬೆ ಉರದಲಿಹೆ ಎಂಬೆ ಪಡೆದೆ ಜಗ- ವೆಂಬೆ ಭಕುತಿ ಜನಸ್ತಂಭೆ ಅಮಿತಶಶಿ ವಿಧಿ ಯಿಂಬೆ ತ್ರಿಗುಣ ಹರಿ ಕೃತಿ 2 ರಾಣೀ_ರಾಣೀ-ಶ್ರೀ ಅನಿರುದ್ಧನ ರಾಣಿ ಲಕ್ಷಣ ಶ್ರೇಣಿ ಪಂಕಜಪಾಣಿ ಭುಜಂಗ ಸು- ನಿತ್ಯ ಕಲ್ಯಾಣಿ ಮಂಗಳವಾಣಿ ದುಃಖವ ಕಾಣಿ ನೀ ಬಹು ಜಾಣಿ ವಲಿದಿಹ ಹರಿ 3 ಅಮ್ಮ-ಅಮ್ಮ-ನೀಜಗದಮ್ಮ ಅಮ್ಮ ಕಣ್ ತೆಗೆಯಮ್ಮ ಸಿರಿಸುರಿಸಮ್ಮ ಉರಿಹರಿಸಮ್ಮ ದಯಮಾಡಮ್ಮ ವಿಧಿಗುರುವಮ್ಮ ಭುಜಿಸೊಸೆಯಮ್ಮ ಹರಿಗ್ಹೇಳಮ್ಮ ದಕ್ಷಣೆ 4 ಶೀಲೆ-ಶೀಲೆ- ನಿರುತ ಹರಿಯ ಜಪ ಶೀಲೆ ಕುಂಕುಮ ವಾಲೆ ಇಟ್ಟಹೆ ಬಾಲೇ, ಚಂಚಲ ಲೀಲೆ ನತಜನ ಪಾಲೆ ಖಳರೆದೆಶೂಲೆ ಹರಿಗಿಹೆಮಾಲೆ 5 ಹೇತು-ಹೇತು-ಕಾರ್ಯ ಕಾರಣ ನೀ ಒಡವೆಗಳಾಗಿ ವಸ್ತ್ರಗಳಾಗಿ ಶಸ್ತ್ರಗಳಾಗಿ ಚರಣದಿ ಬಾಗಿ ಹರಿಗನುವಾಗಿ ಸಾಧಕಳಾಗಿ ಧೊರೆವಶಳಾಗಿ ಗಂಡನ ಭಜಿಪೆ 6 ಇಲ್ಲ-ಇಲ್ಲ-ಹರಿಯಗಲಿಕೆ ನಿನಗಿಲ್ಲ ಕ್ಲೇಶವು ಇಲ್ಲ ದೋಷಗಳಿಲ್ಲ ಪಾಶಗಳಿಲ್ಲ ಹರಿ ಬಿಡನಲ್ಲ ಸರಿಯಾರಿಲ್ಲ ಮುಕ್ತರಿಗೆಲ್ಲ ಒಡೆಯಳೆ ಚೆಲ್ವೆ ನೀ ಆಕಾಶೆ7 ನೀರೆ-ನೀರೆ-ಹರಿ ಸಮಾಸಮನೀರೆ ಘನ ಗಂಭೀರೆ-ಶ್ರುತಿಗಳ ಮೇರೆ ಮೀರುತ ಧೀರೆ ಹರಿಮನಸಾರೆ-ಪೊಗಳುವೆ ಬೇರೆ ಸಾಟಿಯು ಯಾರೆ-ಹರಿಪುರ ತೋರೆ ಕರುಣದಿ 8 ಕಂದ-ಕಂದ-ನಾನಿಹೆ ನಿನ್ನ ನಂದದ ಶ್ರೀ ಕೃಷ್ಣವಿಠಲನ ರಾಣಿ ಇಂದಿರೆಸಲಹೆ ಕುಂದುಗಳಳಿಸೆ ತಂದೆಯ ತೋರೆ ಚೆಂದದ ಭಕುತಿ ಮುಂದಕೆ ತಂದೂ 9
--------------
ಕೃಷ್ಣವಿಠಲದಾಸರು