ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಂಗೇ ಜನನೀ ಮಂಗಳರೂಪಿಣಿ ತುಂಗ ಮಹಿಮನ ಪಾದಾಂಗುಳಿಜಾತೆ ಪ ಸಂಗತಿಯರುಹಲು ಬಂದಿರುವೆವು ಕೃಪಾ ಪಾಂಗವ ತೋರೆಲೆ ಇಂಗಿತವರಿತು ಅ.ಪ ನಾಲ್ಕು ಮೊಗನು ಹರಿ ಕಾಲಿಗೆ ಕೆಡುಹಲು ಶೂಲಧರನ ಶಿರ ಆಲಯ ಮಾಡಿದೆ ಶೈಲದಂತಿಹ ಪಾಪ ಜಾಲಿಸಿ ಕಳೆಯುವೆ ಪೇಳಲಳವೆ ನಿನ್ನ ಶೀಲವ ಸುಲಭದಿ 1 ಚಾರು ನದಿಗಳು ಹೇರಳವಿದ್ದರು ಭಾರತ ದೇಶದಿ ಭಾಗ್ಯದೇವತೆ ನೀ ದೂರ ದೂರ ದೇಶಗಳಲಿ ನೆಲೆಸಿಹ ಧೀರರು ನಿನ್ನಯ ಕೋರುತಲಿರುವರು 2 ಅಂಗಳದಲಿ ಬಿದ್ದು ಹರಿವ ಜಲವು ನಿನ್ನ ಸಂಗದಿ ಪರಮಮಂಗಲ್ಯವ ಪಡೆವುದು ಶೃಂಗಾರದ ನಿಧಿ ರಂಗನ ಸೇವೆಗೆ ಗಂಗೇ ಎನ್ನಂತರಂಗವ ಶೋಧಿಸೆ 3 ಭೂಮಿಯ ಭೇದಿಸಿ ಸುಂದರ ರೂಪದಿ ಸ್ವಾಮಿ ಶ್ರೀಮಧ್ವರ ಚರಣಕೆ ನಮಿಸಿ ಆ ಮಹಾತ್ಮರ ದರುಶನದಿ ಪ್ರಸನ್ನಳೇ ಕಾಮಿತ ಕರುಣಿಸೇ ತ್ರಿಕರಣ ಶುದ್ಧಿಯ 4
--------------
ವಿದ್ಯಾಪ್ರಸನ್ನತೀರ್ಥರು
ದೇವೀ ಶ್ರೀ ತುಳಸೀ ದುರಿತೌಘವಿನಾಶಿ ಪ ಶ್ರೀ ವರನಾನಂದಾಶ್ರು ಸುಜಾತೆ ಕೃ ಪಾವ ಲೋಕೆ ಜಗಪಾವನಿ ಜನನಿ ಅ.ಪ ತುಂಗ ಮಂಗಳರೂಪಿಣಿ ಸುಗುಣ ತ ರಂಗೆ ಪರಮ ಕಲ್ಯಾಣಿ ನಿತ್ಯ ಮಂಗಳರೂಪ, ನೃ ಸಿಂಗ ಕರಿಗೀಶನು ಸುಖಪೂರ್ಣನು ಮಂಗಳಕರುಣಾಪಾಂಗದಿ ನಿನ್ನನ ರ್ಧಾಂಗಿಯೆಂದಂಗೀಕರಿಸುತಲೆಮ್ಮಂತ ರಂಗಕೆ ಸಂತಸ ಕಂಗಳಿಗುತ್ಸವ ಹಿಂಗದೆ ತರಲೆಂದು ಭಿನ್ನಪಗೈವೆವು
--------------
ವರಾವಾಣಿರಾಮರಾಯದಾಸರು