ಶೌರಿ ಪ
ಬೃಂದಾರಕವರದಿಂದ ಶೌರಿಯಾನಂದವ ಸೇವಕ ಬೃಂದಕೆ ತೋರಿ ಅ.ಪ.
ಕುಂದಮುಕುಳದಿಂದಾ ಕುಮುದಸು ಗಂಧಿಯಗಳಿನಿಂದಾ
ರಚಿಸಿಸೊಗಸಿಂದಲಿ ಮೆರೆಯುವ 1
ಸುತ್ತಿರೆ ಹಸ್ತಿಗಳೂ-ಕೂರ್ಮನು ಪೊತ್ತಿರೆ ಮಧ್ಯದೊಳು
ಮತ್ತೆಫಣೀಂದ್ರನ ಮಸ್ತಕದಲ್ಲಿರೆ ಸ್ವಸ್ತಿಕಾದಿಬಹು ಚಿತ್ರದಿ ಶೋಭಿಪ 2
ಪಂಕಜ ಚಿಹ್ನೆಗಳಾ-ಸೂರ್ಯಶ-ಶಾಂಕ ಸುರೇಖೆಗಳಾ
ಬಹುಬಿಂಕದೊಳೆಸೆಯುವ3
ಕೋಟೆಯ ತೆನೆಗಳಲಿ ದಿವ್ಯವಧೂಟಿಯರೊಲವಿನಲಿ
ಬಹುದೀಟಿಲಿ ತೋರುವ 4
ಶಾರದಾಭ್ರನೀಲ-ಶರೀರದಿ- ಹೈರಣ್ಮಯಚೇಲಾ
ಜೀರಭೂಷಣೋದಾರ ವಿಹಾರ 5
ಮಂಗಳರವದೊಳಗೆ-ಶಂಖಮೃದಂಗ-ಧ್ವನಿಮೊಳಗೆ
ನಾಟ್ಯಂಗಳರಚಿಸಲು6
ವರ ವಿಪ್ರರು ಪೊಗಳೆ-ಛತ್ರಚಾಮರಗಳ ನೆಳಲೊಳಗೆ
ವರದವಿಠಲನು ವರಗಳ ಬೀರುತ 7