ನೃತ್ಯವನವಧರಿಸು ನಿರುಪಮ ನೃತ್ಯವನವಧರಿಸು ಪ
ನರ್ತನಕರ್ತುವು ನೀನೆಯಾಗಲು ಅ.ಪ
ಪ್ರಥಮದಿ ಸ್ವರವುಂ ಹೊರಡಲು ತಾಳವು
ಮಿಥುನದಿ ನಾಂದಿಯ ಮಾಡಲು ವಿಧಿಯಿಂ1
ಮರ್ದಳನಾದವು ಮೂಡಲು ಹಾಗೆ
ಮಾನಿನಿ ನಿಲಲು 2
ರಂಗವು ರಂಜಿಸಿ ರಾಗಗಳಿಂದಲು
ಮಂಗಳನಾಟ್ಯವು ಮುಂಗುಡಿಸಾಗಲು 3
ರಾಗದ ಭೇದಗಳ್ ರೂಢಿಗಳಾಗುತ
ಸಾಗಲು ಲಯಗತಿಸಹಿತದಿ ಬೆಳೆದು 4
ಆಡುವ ನೃತ್ಯವರ್ನರ್ಪಿಪೆ ತಿರುಪತಿನಾಡಿನ ವೆಂಕಟನಾಥನೆ ಲಾಲಿಸು 5