ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರಮ್ಮ ಲೋಕಮಾತೆ ಆನಂದಪ್ರದಾತೆ ಪ ಸಿಂಧುರಾಜತನಯೆ ಅರವಿಂದ ಮಂದಿರೆ ಸಿಂಧುಶಯನನ ಪ್ರಿಯೆ ಮುದದಿಂದೆಮ್ಮನು ಕಾಯೆ 1 ಕಮಲಸಂಭವನ ಮಾತೆ ಕಮಲಾಕ್ಷಗೆ ಪ್ರೀತೆ ಕಮಲಶರನ ಪೆತ್ತ ಕಮಲಾರಿ ಕೋಟಿಕಾಂತೆ 2 ರಂಗೇಶವಿಠಲನ ಉರದಲಿ ಮೆರೆಯುವ ಮಂಗಳದೇವತೆ ಸ್ಮಿತ ತಿಂಗಳ ಬೀರುತ್ತ 3
--------------
ರಂಗೇಶವಿಠಲದಾಸರು
ಬಿಜಯಂಗೈವುದು ಹಸೆಗೀಗಾ ಪ ಅಜಮುಖ ಸುರನುತೆ ಅಖಿಳಲೋಕೈಕ ಮಾತೆ ಅ.ಪ ಕೃಷ್ಣನ ಮೋಹದ ಪಟ್ಟದ ಜಾಯೆ ಅಷ್ಟ ಸೌಭಗ್ಯಗಳ ಅಮರರಿಗೀವಳೆ 1 ಶೃಂಗಾರ ಮಂಟಪದಿ ಅಂಗನೆಯರೆಲ್ಲರು ಸಂಗೀತವ ಪಾಡಿ ಸರಸದಲಿ ಮಂಗಳದೇವತೆ ಬಾರೆಂದು ಕರೆವರು 2 ಅರುಂಧತಿ ಶಚಿ ಮುಖರ್ನೆರದಿಹರು ಗುರುರಾಮವಿಠಲನ ತರುಣೀ ಮಣಿಯೆ ಬೇಗಾ 3
--------------
ಗುರುರಾಮವಿಠಲ
ಶರಧಿಸುತೆ ಮಾತೆ ಶರಧಿಸುತೆ ಮಾತೆ ಪ ಪೊರೆಯೇ ಜಗನ್ಮಾತೆ ಅ.ಪ ಸರಸಿಜಭವ ಶಿವ ಗರುಡ ಶೇಷ ಮುಖ ಸುಮನಸ ವಂದಿತ ಪದಯುಗಳೆ ಮನಸಿಜ ಜನಕನ ಕೋಮಲತಮ ಹೃತ್ಕಮಲದೊಳು ಸದಾ ನೆಲಸಿದ ಶುಭಗೆ 1 ವಂದಿಪೆ ನಿನ್ನಯ ಚರಣ ಕಮಲ ಎನಗೊಂದುಪಕಾರವ ದಯಮಾಡೆ ಒಂದನು ಅರಿಯದ ಭಕುತರೊಳಗೆ ಇವ ನೊಂದು ಎಂದು ಗೋವಿಂದನಿಗರುಹೆ 2 ತುಂಗಮಹಿಮನನು ಎಡಬಿಡದೆಲೆ ಅವ ನಿಂಗಿತವನು ನೀನರಿತಿರುವೆ ಮಂಗಳದೇವತೆ ಅದನರುಹಿ ಕೃಪಾ ಪಾಂಗವ ಬೀರೆ ಪ್ರಸನ್ನ ಸುವದನೇ 3
--------------
ವಿದ್ಯಾಪ್ರಸನ್ನತೀರ್ಥರು