ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ವರಿತದಿ ಬಾರೆ ಸಖಿ ಸುನೇತ್ರೆ | ಹರುಷದಿ ಪೀಠಕೆ ಮಂಗಳಗೀತೆ ಪ ಮಿನುಗುವ ನಯನಾ ಕನಕಾಭರಣಾ | ಮಣಿಮುತ್ತಿನ ವನಮಾಲೆಯು ಧರಿಸುತ 1 ರತ್ನದಹಾರ ದಿವ್ಯಾಂಬರದಿ | ಮಿತ್ರಿ ನೀಶೋಭಿಸುತ ಪೀಠಕೆ ಮುದದಿ 2 ಕೋಮಲೆ ಬಾಲೆ ಸುಶೀಲೆ ಶಾಮಸುಂದರನ ನಾಮವ ಪಾಡುತ 3
--------------
ಶಾಮಸುಂದರ ವಿಠಲ
ಮಂಗಳಂ ಶ್ರೀ ಲಕ್ಷ್ಮೀದೇವಿಗೆ ಜಯ ಮಂಗಳಂ ಪಕ್ಷಿವಾಹನರಾಣಿಗೆ ಪ. ಮಂಗಳಂ ಮಂತ್ರಮೂರುತಿಗೆ ಶುಭ ಮಂಗಳಂ ಪರತಂತ್ರರೂಪಿಣಿಗೆ ಅ.ಪ. ಭಾರ್ಗವಿಗೆ ಭಾಗ್ಯದಾಯಿನಿಗೆ ಭಾಗವತರ ಪೂಜೆ ಕೈಗೊಂಬಳಿಗೆ ನಾಗವೇಣಿಗೆ ವರನಾಗಪೂಜಿತೆಗೆ ವರ ಭೋಗಿಭೂಷಣಸುತೆ ಯೋಗೇಶ್ವರಿಗೆ 1 ಸೀತೆಗೆ ಮಂಗಳಗೀತೆಗೆ ಭುವಿ ಜಾತೆಗೆ ಮಂಗಳಂ ಪವನಜಸೇವಿತೆಗೆ ಮಾತೆಗೆ ಸದ್ಗುಣ ಪೂತೆಗೆ ವರಪ್ರ ದಾತೆಗೆ ನಿತ್ಯನಿರ್ಮಲೆಗೆ 2 ವರಶೇಷಗಿರಿವರನ ಉರದಲ್ಲಿ ನೆಲೆಗೊಂಡು ಶರಣಾಗತರಂ ಪರಿಭಾವಿಸಿ ಪರತರ ಸುಖಸೌಭಾಗ್ಯವ ಕರುಣಿಸಿ ಪೊರೆವ ಕಾರುಣ್ಯಮೂರುತಿಗೆ 3
--------------
ನಂಜನಗೂಡು ತಿರುಮಲಾಂಬಾ