ಸುಲಲಿತ ಮಧುಕರ ಕೊಳಲನೂದುವುದನು
ಕಲಿಸಿದರಾರೇ ನಳಿನಮುಖೀ ರಾಧೇ ಪ
ಬಲಿಸಂಹಾರನು ಲೋಕದ ನಾರಿಯ
ರಲಸದೆ ಗಾನವ ಕಲಿಸಿದನೇನೇ ಅ.ಪ
ಕರು ತುರುಗಳ ಬಳಿ ಸರಸವನಾಡುತ
ಮುರಳಿಯನೂದುವ ಸರಸಿಜನಾಭ
ಕರೆಕರೆದು ನಿನ್ನ ಬೆರಳಿಗುಂಗುರವಿಟ್ಟು
ಸ್ವರಗಳ ಬೋಧಿಸಿ ನಲಿನಲಿದಿಹನೇನೇ 1
ಬೃಂದಾವನದಲಿ ನಂದಕುಮಾರನ
ವಂದಿಸೆ ನಾರದ ಬಂದುಹಾಡಿದನೇ
ಅಂದದ ಕಲಿಕೆಯ ತುಂಬುರ ನಿನಗಾ
ನಂದದಿ ಗಾನವ ಕಲಿಸಿದನೇನೆ 2
ಅಂಗಜಪಿತನಿಗೆ ಮಂಗಳಗಾನವ
ಅಂಗನೆ ಶಾರದೆ ಪಾಡಿದಳೇನೇ
ಮಾಂಗಿರಿರಂಗ ಮಾತಂಗವರದನಂತ
ರಂಗದರಾಣಿ ನೀ ಕಲಿಯೆಂದನೇನೇ 3