ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳು ಶ್ರೀ ಗುರುರಾಯ ಏಳು ಪರಮಪ್ರಿಯ ಏಳು ಮಂಗಳಕಾಯ ಭಕ್ತಜನಪ್ರಿಯ ಏಳಯ್ಯ ಬೆಳಗಾಯಿತು ಪ. ಬಳಲಿ ಬಂದಿರುವಂಥ ಬಾಲ ಶಿಷ್ಯಂದಿರನು ಸುಲಲಿತದ ಪ್ರಿಯ ವಾಕ್ಯದಿಂದ ಸಂತೈಸಿ ಮಲಿನ ಮನವನೆ ತಿದ್ದಿ ಸುಜ್ಞಾನ ಬೋಧಿಸಿ ನಳಿನನಾಭನ ಪಾದಕೊಪ್ಪಿಸಲಿಬೇಕು 1 ಶುದ್ಧಾಂತಃಕರಣದಿಂ ಪೊದ್ದಿರುವ ಶಿಷ್ಯರನು ಉದ್ಧಾರಗೈಯಲಂಕಿತಗಳಿತ್ತು ಸಾರ ತತ್ವಾಮೃತವನುಣಿಸಿ ಪದ್ಮನಾಭನ ದಾಸರೆಂದೆನಿಸಬೇಕು 2 ಎದ್ದು ಸ್ನಾನವಗೈದು ತಿದ್ದಿ ನಾಮವನ್ಹಚ್ಚಿ ಪದ್ಮಾಕ್ಷಿ ತುಳಸಿ ಮಾಲೆಗಳ ಧರಿಸಿ ಗದ್ದುಗೆಯೊಳು ಕುಳಿತು ಹೃದ್ವನಜಸ್ಥಾನ ಪದ್ಮಪಾದವ ಮನದಿ ಸ್ಮರಿಸಬೇಕು 3 ಹಿಂದ್ಯಾರು ಪೊರೆದರು ಮುಂದ್ಯಾರು ಕಾಯ್ದರು ತಂದೆ ನೀವಲ್ಲದಿರೆ ಪೊಂದಿದರಿಗೆ ತಂದೆ ಮುದ್ದುಮೋಹನದಾಸವರ ಎಮ್ಮೊಳು ಕುಂದನೆಣಿಸದೆ ಕಾಯೊ ಕರುಣಾಳು ಗುರುವೆ 4 ಆಪನ್ನ ರಕ್ಷಕನೆ ಗೋಪಾಲಕೃಷ್ಣವಿಠ್ಠಲನಂಘ್ರಿ ಕಮಲ ಕೃಪಾಳು ತೋರು ನೀ ಕೃಪೆಮಾಡು ಕಣ್ತೆರದುಶ್ರೀ ಪದ್ಮಜಾತರೊಂದಿತನ ದಾಸಾರ್ಯ 5
--------------
ಅಂಬಾಬಾಯಿ
ಮಂಗಳಂ ಜಯ ಮಂಗಳಂ ಪ ಇಂಗಡಲ ಕುವರಿಗೆ ಮಂಗಳಕಾಯೆಗೆ ಅ.ಪ. ನಿತ್ಯ ಪೂಜಿತದೇವಿಗೆರಾಜೀವ ನಯನೆಗೆ ಭಾಗ್ಯವೀವಳಿಗೆ 1 ಹಸಿರು ಸೀರೆಯನುಟ್ಟು ಹಳದಿ ಕುಪ್ಪುಸತೊಟ್ಟುಎಸೆವ ಚಿನ್ನಾಭರಣನಿಟ್ಟು ಮೆರೆವವಳಿಗೆ 2 ಪ್ರತ್ಯಕ್ಷಾಪ್ರತ್ಯಕ್ಷ ಶಕ್ತಿಯ ದೇವಿಗೆನಿತ್ಯ ಸಂಸಾರಿಗಗತ್ಯವಿರುವವಳಿಗೆ 3 ಕುಲಗೋತ್ರವೆಣಿಸದಲೊಲಿಯುವ ದೇವಿಗೆನೆಲೆಗೊಡದ ಚಂಚಲೆಮಾಲಕುಮಿದೇವಿಗೆ 4 ಮದನನ ಮಾತೆಗೆ ಪದುಮಲಯಳಿಗೆಗದುಗಿನ ವೀರನಾರಾಯಣನ ಸತಿಗೆ 5
--------------
ವೀರನಾರಾಯಣ
ಮೋಸಹೋದೆವೈ ಸಖಿ _ ವಾಸುದೇವನ ತಿಳಿಯದೆ ಪ ಮೋಸಹೋದೆವೈ ಸಖಿ _ ಮೂಸಿತು ಮನವಮ್ಮ ದೋಷದೂರ ಜಗದೀಶನ ಈ ಲೋಕಶಿಶುವೆಂದರಿಯುತ ಅ.ಪ. ಪುಟ್ಟಿದ ಶಿಶು ಮೊಲೆ ಕೊಟ್ಟವಳಳಿದನೆ ಸುಟ್ಟಾನು ದೈತ್ಯರ ಗೋಷ್ಠಿಗಳೆಲ್ಲವ ಬೆಟ್ಟವನೆತ್ತುತ ವೃಷ್ಟಿಯ ತಡೆದನೆ ಮೆಟ್ಟುತ ಕಾಳಿಯ ತುಷ್ಟಿಯ ನೀಡಿದನೆ ಇಷ್ಟಾದರುನಾವು ತಿಳಿಯದೇ ಸೃಷ್ಟಿಗೊಡೆಯ ಬಹು ದುಷ್ಟನು ಎಂದೇವೆ ಪಟ್ಟೆ ಪೀತಾಂಚರ ಕದ್ದವನೆಂದೇವೇ ಇಟ್ಟನು ಕಣ್ಣನು ನಮ್ಮಲೆಂದೇವೇ ಜೇಷ್ಠ ಶ್ರೇಷ್ಠ ಪರಾತ್ಪರ ಹರಿ ಸಂ- ತುಷ್ಟ ಗುಣಾರ್ಣವ ನಿರುಪಮ ಸುಖಿ ಜಗ- ಚೇಷ್ಟೆಯ ನಡೆಸುವ ಶಿಷ್ಯರ ಧೂರೆ ಪರ- ಮೇಷ್ಠಿಯ ಪಿತ ನೆಂದರಿಯದೆ ಕೃಷ್ಣನಾ 1 ಮೆಲ್ಲನೆ ಬಾಯಲಿ ಲೋಕವ ನೆಲ್ಲವ ತಾಯಿಗೆ ತೋರಿದನೆ ಬಲ್ಲಿದನಿವ ತಾ ಬೆಂಕಿ ಜ್ವಾಲೆಯನುಂಗುತ ತಾಪೊರೆದನೆ ಗೊಲ್ಲರಪತಿ ಮುಳುಗಲು ಪಾತಾಳದಿ ತಂದನೆ ತಂದೆಯನು ಬಾಲರ ಗುಂಪಿಗೆ ಲೋಕಗಳೆಲ್ಲವ ನೀರೋಳು ತೋರಿದನೆ ಮೆದ್ದನು ಎಂದೇವೇ ನಿಲ್ಲದೆ ನಿಶಿಯೊಳು ನಮ್ಮನು ಕೆಡಿಸಿದನೆಂದೇವೆ ಸುಳ್ಳನು ಹೇಳುವ ಜಾಣ ಗೋಪಾಲನು ಎಂದೇವೇ ಸಲ್ಲದ ನುಡಿಗಳ ನಾಡುತ ಕಾಲವ ಕಳೆದೇವೇ ಎಲ್ಲರ ಹೃದಯದಿ ಮತ್ತೆ ಬ್ರಹ್ಮಾಂಡದಿ ಒಳಹೊರ- ನೆಲ್ಲಿಯು ತುಂಬಿಹಏಕನು ಬಲ್ಲನು ಎಲ್ಲವ ಎಲ್ಲವ ಮಾಡುತ ಮಾಡಿಸಿ ಪೊರೆವನು ದೋಷಗಳಿಲ್ಲದ ಸ್ವರತ ರಮಾಧವ ಕೃಷ್ಣನು ಎನ್ನದೇ 2 ತಿಂಗಳ ಬೆಳಕಲಿ ರಂಗನು ಬಂದಾನೇ ಅಂಗಜತಾಪವ ಹರಿಸುವೆನೆಂದಾನೆ ಕಂಗಳಿಗ್ಹಬ್ಬವ ನೀಡುತ ಪೊರೆದಾನೇ ಹಿಂಗದೆ ತನುಮನ ಎಲ್ಲವ ಸೆಳೆದಾನೇ ಮಂಗಳಕಾಯನು ನೀಡಲು ನಮಗಾ ಲಿಂಗನ ಸುಖವನು ಬಹುಮುಡಿ ಆದಾನೇ ಅಂಗವ ಮರೆಸುತ ಮಹದಾನಂದ ತ- ರಂಗದಿ ಒಯ್ಯುತ ಚೆಲುವನು ಕೂಡಿದನೇ ಅಂಗನೆ ಬುದ್ಧಿಲಿ ಇವನನು ತಿಳಿಯದೇ ರಾಗ ವಿಹೀನನ ನಮ್ಮೊಡನಾಡಿಯು ಎಂದೇವೇ ಸಾಗುತ ಬಂದಿಹ ನಮ್ಮಯ ರೂಪಕೆ ಎಂದೇವೇ ನಮ್ಮನು ಕೂಡುತ ಭೋಗವ ಪಡೆಯುವನೆಂದೇವೇ ಗಾಗ್ರ್ಯರು ಮುಂಚೆಯೆ ಪೇಳಿದ ನುಡಿಗಳ ಮರೆತೇವೇ ಭೋಗಿಶಯನ ಜಗದೇಕವೀರ ಸಕಲಾಗಮ ವಂದಿತ ಸಾಗಿಸೆ ದಿತಿಜರ ಕೃಷ್ಣನು ಬಂದಿಹ ದೇವಕಿ ಜಠರದಿ ಬಾಗುತ ಜಯಮುನಿ ವಾಯ್ವಂತರ್ಗತ ಶ್ರೀ ಕೃಷ್ಣವಿಠಲನು ಭಾಗವತgಶ್ರಯ ಪೂರ್ಣಾನಂದನ ಲೀಲೆಯ ತಿಳಿಯದೇ 3
--------------
ಕೃಷ್ಣವಿಠಲದಾಸರು
ಸತ್ಯಪ್ರಿಯ ಗುರುರಾಯ ಮಂಗಳಕಾಯ ಭೃತ್ಯ ಸಹಾಯ ಪ ಮಧ್ವಮತಾಬ್ಧಿ ಚಂದ್ರ ಸದ್ಗುಣಸಾಂದ್ರ ಅದ್ವೈತಮದ್ರಿ ಇಂದ್ರ ಇದ್ಧರಿಯೊಳಗನಿ ರುದ್ಧನೆ ವರನೆಂದೆದ್ದು ನೆಗಹಿ ಕರ ಬದ್ಧ ಕಂಕಣರಾಗಿ ಸ್ಮರ ಮಾರ್ಗಣ ಗೆದ್ದ 1 ವಿತರಣದಲಿ ಬಲು ಶೂರಾ ಕೀರ್ತಿವಿಹಾರಾ ಸತತ ವೇದಾರ್ಥ ವಿಚಾರ ಮಿತಿ ಇಲ್ಲದೇ ಆ ಕಥಾಮೃತ ತತುವ ಮಾರ್ಗದಲಿ ವಿ ಹಿತ ಶಿಷ್ಯರಿಗೆ ನಗುತ ಪೇಳಿದ ಅ ದ್ಭುತ ಮಹಿಮಾ ಸಂಚರಿಸುತ ಆನಂದ ಭರಿತ 2 ನೆನೆಸಿದವರ ಸುರಧೇನು ನಿನಗೆಲ್ಲಿ ನಾನು ಎಣೆಗಾಣೆ ಎಣಿಸಲು ಮೇಣೂ ಮುನಿ ಸತ್ಯಭೋಧರ ಮನದಲ್ಲಿ ನಿಂದರ್ಚನೆಯನು ಮನದಲ್ಲಿ ಘನವಾಗಿ ಕೈಕೊಂಬ ಗುಣದಿ ವಿಜಯವಿಠ್ಠಲನ ಚರಣಾಂಬುಜ ಧ್ಯಾನ ಮಾಡುವ ತ್ರಾಣ3
--------------
ವಿಜಯದಾಸ