ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವ ದೇವ ದೇವ ದಿವಿಜರೊಡಿಯನೆ ಭಾವ ಪೂರ್ವಕ ವಿಧದಿ ಭಜಿಸುವೆನು ನಾನು ಪ ನಂದಗೋಪಿಯ ಕಂದನಾದ ಸುಂದರಾಂಗನೆ ಸಿಂಧುಶಯನ ಮಂದರಧರ ಇಂದಿರೇಶನೆ ಎಂದು ನಿನ್ನ ಪೊಂದಿದವರನಂದ ಪೊರೆವನೆ 1 ಹೆಂಗಳೆರ ಸಂಗವುಳ್ಳ ಮಂಗಳಾಂಗನೆ ಶೃಂಗಾರಾಂಗ ರಮಾಸಂಗವುಳ್ಳ ರಂಗನೆ ಗಂಗಾಜನಕ ನೀರಜಾಂಬಕ ಗಾನಲೋಲನೆ ಮಂಗಳಕರದಿಂದ ಲಭಯಂಗಳೀವನೆ 2 ರನ್ನೆ ಸೀತೆಯನ್ನು ವೈದವನ್ನ ತರಿದನೆ ನಿನ್ನವರಿವರೆನ್ನುವವರನ್ನು ಕಾಯ್ವನೆ ಪನ್ನಗಶಯನನಾದ ಚೆನ್ನ ನೀವನೆ ಘನ್ನ ' ಶ್ರೀ ಹೆನ್ನೆವಿಠಲ’ ನನ್ನ ಕಾರುಣಿ 3
--------------
ಹೆನ್ನೆರಂಗದಾಸರು