ಎಂದಿಗೆ ದೊರಕುವನು ಶ್ರೀಗುರುವನ
ಗೆಂದಗೆ ದೊರಕುವನು ಪ
ಮಂದಮತಿಯ ಕಡೆಗ್ಹೊಂದಿಸಿ ಸಚ್ಚಿದಾ
ನಂದ ಬ್ರಹ್ಮನ ಕೃಪೆಯಿಂದ ಪಾಲಿಸಿದಾತಾ ಅ.ಪ.
ಕರುಣದಿ ಕರದು ತನ್ನಾ ತೊಡೆಯ ಮೇಲ್ಕು
ಳ್ಳಿರಿಸಿ ಶರಧಿಯೊಳೀಡಾಡಿ ಈಶ್ವರನ
ತೋರಿದ ಗುರು ಎಂದಿಗೆ 1
ತನ್ನ ತಾ ತಿಳಿವವೊಲು ತತ್ವನಸಾರ
ವನ್ನು ಸಾಧುಗಳಿಂದಲಿ ಚೆನ್ನಾಗಿ ಅರಿತುಕೊಳ್ಳೆಂದು
ಅಮೃತಪಾನವನ್ನು ಮಾಡಿಸಿದ
ಪ್ರಸನ್ನವದನ ಗುರು ಎಂದಿಗೆ 2
ಹುಟ್ಟಿಸಾಯದಂದದಿ ವಾಕ್ಯದ ಮದ್ದು
ಕೊಟ್ಟು ಜೀವನ್ಮುಕ್ತಿಯ ಪಟ್ಟವ
ಗಟ್ಟಿ ಫಣಿಗೆ ಮಂಗಲಾಕ್ಷತೆ
ಇಟ್ಟ ವಿಮಲಾನಂದ ಬಟ್ಟೆದೋರಿದ ಗುರು 3