ಮಂಗಳ
ಮಂಗಳಾರತಿ| ಬೆಳಗುವೆನೀಗ|
ಶೃಂಗರಿಸುತ ಸುಮ| ಸಂದೋಹದಿ ಪ
ಮಂಗಲವನು ಹಾಡಿ| ಇಂಗಿತವನು ಬೇಡಿ|
ಮಂಗಳಾತ್ಮಕಿ ದೇವಿಯ ಪಾದಕೆ ಅ.ಪ
ಅಜಭವ ಸುರನರ| ತ್ರಿಜಗಪೂಜಿತ ಪಾದ|
ಭಜಿಸುತ ಮನದೊಳು| ಮೊದಲೊಂದಿಸಿ||
ಪಾದ ಪೂಜೆಯ ಮಾಡಿ|
ನಿಜಭಕ್ತಿಯಿಂದಲಿ| ಜಯ ಜಯವೆನ್ನುತ 1
ಮಂದರಧರ ನಿನ್ನ| ದ್ವಂದ್ವಪಾದಗಳನ್ನ|
ಚಂದದಿ ಪೂಜಿಸಿ| ಭಜಿಸುತಲಿ||
ಕಂದರ್ಪನಯ್ಯನೆ| ಸಿಂಧುಶಯನನೆ|
ಇಂದಿರೇಶನಿಗಾ| ನಂದದಿಂದಲಿ 2
ಮತ್ಸ್ಯವ ತಾರಿಗೆ| ಕೂರ್ಮಗೆ ವರಾಹಗೆ|
ನರಹರಿ ರೂಪಗೆ| ವಾಮನಗೆ||
ಯಾದವಕುಲದೀಪ| ಮುರಲಿ ಕೃಷ್ಣಗೆ3
ಕಲ್ಕಿಸ್ವರೂಪದಿ| ಮೆರೆವವಗೆ||
ದಶವಿಧರೂಪದಿ| ಧರೆಯನು ಪೊರೆದ|
ವಿಜಯವಿಠಲ ನಮ್ಮ| ಗುರುವೆಂಕಟೇಶಗೆ 4