ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓಂ ನಮೋ ಸಕಲ ಮಂಗಲದಾಯಕ |ಘನ್ನ ಮಹಿಮ ಶ್ರೀ ಗಣನಾಯಕ |ನಿನ್ನ ಕೀರ್ತಿ ಪಾಠವ ಭಕ್ತರ |ಇನ್ನು ಮಾಡೋ ನಿರ್ವಿಘ್ನದಿ ಮುಕ್ತರ 1 ನಿರ್ಜರ ವಾಣಿ |ಬಂದು ಸನ್ಮತಿ ನೀಡುತ ಶಾರದಾ |ಇಂದು ವದನೆ ರಕ್ಷಿಸು ಶಾರದಾ 2 ನಿರ್ಜರ ರಂಜನಾ |ಕೃಪೆ ಯಲಿ ರಕ್ಷಿಸು ದೋರಿ ನಿರಂಜನಾ 3 ಸಚ್ಚಿದಾನಂದಾ ವಿಗೃಹ ಮೂರುತಿ |ಅಚ್ಯುತಾನಂತ ಮಂಗಲ ಕೀರುತಿ |ಎಚ್ಚರಿ ಸೆನಗೆ ಭಕ್ತಿಯ ಸ್ಪಾದವಾ |ನಿಚ್ಚ ರಕ್ಷಿಸು ತೋರುತ ಪಾದವಾ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕರುಣ ವಂದಿರೆ ಸಾಕಿನ್ನು ಪ. ಕರುಣ ವಂದಿರೆ ಸಾಕು ಸಿರಿಯರಸನೆ ನಾನಾ ಪರಿಯೊಳನ್ಯರ ಬೇಡಿ ತಿರುಗಲಾರೆನು ಕೃಷ್ಣ ಅ.ಪ. ಪರಮಾಣು ತ್ರುಟಿಲವ ನಿಮಿಷ ಮಾತ್ರ ಯುಗ ಗುರು ಪ್ರಾಣ ಒಳನಾಡಿ ಮುಹೂರ್ತ ಪ್ರಹರ ಮಾಸ ಋತ್ವಯನ ವ- ತ್ಸರಯುಗ ಮಾನವೆಂಬ ಉಪಾದಿಗ ಳಿರಿಸಿ ಭೋಗಗಳನುಂಬ ಮಹಾಕಾಲ ಧುರವಹ ತಾನೆಯೆಂಬಾ ಧೀರತೆಯಿಂದ ಲಿರುವಿ ಲೋಕದಲಿ ತುಂಬಾ ಪಾದ ಪದ್ಮ 1 ತೃಣತರು ಕ್ರಿಮಿಪಕ್ಷಿ ಪಶುನರ ದೇವಕ್ಕ ಳೆಣಿಕಿಯಿಲ್ಲದ ದಿತಿಜಾರಿ ಜೀವರನೆಲ್ಲ ಕುಣಿಸುವ ಬೊಂಬೆಯಂದದಲಾಡಿಸುತ ಲೇಶ ದಣಿವಿಲ್ಲದೆ ಭಕ್ತ ಜನರಿಗೆ ಸುಖಸಾರ ಉಣಿಸಿ ಮದಾಂಧರ ಹಣಿದು ಹಣಿದು ಕುಟ್ಟಿ ಒಣಗಿಸಿ ಬಿಸುಟು ತಿನ್ನುವತ್ತಿದುವಿ ಮೇಲಣ ದುರ್ಗಪತಿಗಳನು ಮನ್ನಣೆಯಿಂದ ತಣಿಸಿ ಕಾಪಾಡುವನು ನೀನಹುದೆಂದು ಮಣಿದು ಬೇಡುವೆ ನಿನ್ನ ಮುರಹರ ಸಲಹಿನ್ನು 2 ಮಾಧವ ಮಂಗಲದಾಯಕ ತವ ಪದ್ಮ ಪಾದ ಸೇವೆಯ ಮಾಡುವಲ್ಲಿಗೆ ಜಾಹ್ನವಿ ಗೋದಾವರಿ ತುಂಗ ಕಾವೇರಿ ಕಲುಷಾವ ನೋದದಿ ಕೃಷ್ಣ ಸರಸ್ವತಿ ಗೋಮತಿ ವೇದವತಿ ಮೊದಲಾದ ನದಿಗಳೆಲ್ಲ ಸಾದರದಲಿ ಸೇರುತ ಬಂದಿಹರೆಂಬ ಗಾಧವಚನ ನಂಬುತ ನಿಂದಿಹೆನು ಕ್ಷೀ ರೋದಧಿ ಗೃಹನಿರತ ಸಾಕಿದೆ ಮುಂದಿ- ನ್ಹಾದಿ ತೋರಿಸು ಸ್ವರತ ಶ್ರೀದ ವೆಂಕಟರಾಜ ಸೇವಕನಾನೆಂದು 3
--------------
ತುಪಾಕಿ ವೆಂಕಟರಮಣಾಚಾರ್ಯ