ತಾಯಿ ಪಾಲಿಸು ಎನ್ನ ದಯದಿ
ಗಾಯತ್ರಿದೇವಿ ಸಿದ್ಧಿಯನಿತ್ತು ಸಲಹಾ ಸಾವಿತ್ರಿ ಪ
ಪಾವನ ಸುಚರಿತ್ರೆ ಮಾಯೆ ತ್ರಿಜಗಸ್ತೋತ್ರೆ
ಕಾಯೆ ಸಿದ್ಧಿಸಿ ಎನ್ನ ಕಾಯಾ ಮಂಗಲಗಾತ್ರೆ ಅ.ಪ
ಸಾರಸಾಕ್ಷಿಯೆ ದಯಾಪಾರಾವಾರಳೆ ನಿನ್ನ
ಚಾರುಚರಿತಂಗಳು ಸಾರುವೆ ನಿಜಮಂತ್ರ
ಮೂರುಲೋಕದ ಸೂತ್ರಧಾರಿ ನೀ ನಿಜ ಓಂ
ಕಾರಿ ಕರುಣಿಸಿ ಸುತನ ಗಾರುಮಾಡದೆ ಪೊರೆ ಅ
ಪಾರ ಮಹಿಮಳೆ ಬಾರಿಬಾರಿಗೆ ಸೇರಿ ನಿನ್ನಪಾದ
ವಾರಿಜಕೆ ನಾ ಸಾರಿ ಬೇಡುವೆ ಧೀರಳೆ ಸುವಿ
ಚಾರಿ ನಿಜಸುಖ ತೋರು ಬೇಗನೆ 1
ಮನುಮುನಿಗಳಿಗೊಲಿದು ಘನಸುಖಸಾಮ್ರಾಜ್ಯ
ವನು ಕೊಟ್ಟು ಸಲಹಿದಿ ಕನಿಕರದೊಡನೆ
ಮಿನುಗುವ ಶತಕೋಟಿದಿನ ಕರಪ್ರಭಾಮಯೆ
ಅನುಪಮುನಿಜಜ್ಞಾನವನು ನೀಡು ಬೇಗನೆ
ಚಿನುಮಯಾತ್ಮಳೆ ಘನಕೆ ಘನ ನಿನ್ನ
ವರರುಹಂಘ್ರಿಯ ನೆನೆವೆನನುದಿನ ಜನನಿ ಅಣುಗನ
ಕೊನೆಯಜಿಹ್ವೆಯೊಳ್ ಪ್ರಣಮ ಬರಿಯಮೈ ಮಣಿವೆ ಕಲ್ಯಾಣೆ 2
ಪನ್ನಂಗಧರ ಸುರಸನುತ ಶ್ರೀರಾಮ
ಸುನ್ನತ ಮಹಿಮಂಗಳನ್ನು ಬಲ್ಲವಳೆ
ಅನ್ನ ಪೂರ್ಣೆಯೆ ಉಮೆ ಪನ್ನಂಗವೇಣಿಯೆ
ಮನ್ನಿಸು ಬಡವನ ಬಿನ್ನಪ ಕರುಣೆ
ಭಿನ್ನವಿಲ್ಲದೆ ನಿನ್ನ ಬೇಡುವೆ ಉನ್ನತೋನ್ನತ ಪದವನಿತ್ತು
ಧನ್ಯನೆನಿಸೌ ಎನ್ನ ಮನದಿಷ್ಟವನ್ನು ಪಾಲಿಸಿ ವಿಮಲ್ಹøದಯೆ 3