ವೆಂಕಟಪತೇಧೀರ | ಮಾಡೋಯನ್ನ ಸಂಕಟ ಪರಿಹಾರ ||
ಶಂಕರನ ವರ ಬಿಂಕರಕ್ಕಸಂ ಕಳೆದು ನಿ:ಶ್ಯಂಕನಾದ ಪ
ನಿಜಾಂಕ ಗುಣಪೂರ್ಣಾಂಕ ನಿನ್ನಯ ಕಿಂಕರರ ಕಿಂಕರನು ನಾನು |
ವರದ ಕೋಮಲ ಶುಭಾಂಗ| ಪಾವನಗಂಗ | ಬೆರಳಲಿಪಡೆದರಂಗ
ಉರಗಾದ್ರಿ ಸ್ಥಿರನಿವಾಸ ||
ಶಿರೆಯೆರಗುತಿರುವರು
ಮಹಿಮ ನಿನ್ನದು 1
ಅಂಡಜವಾಹನ ಧೋರೆ |
ಪುಂಡಲೀಕವರದನೆ | ಗೋಪಾಲನೇ | ಪಾಂಡವರಕ್ಷಕನೆ |
ಹಿಂಡು ದೈವರ ಗಂಡ | ವೀರ ಪ್ರಚಂಡ | ಜಗದುದ್ದಂಡ
ಮಂಡಲಾಧಿಪ ದೇವ ದೇವ 2
ಪಾಲಸಾಗರ ಶಯನ | ಪಾವನ್ನ | ಪಾಲಿಸೋ ದಾಸರನ್ನ |
ಜ್ವಾಲಾ ಹೆನ್ನೆವಿಠಲ | ಭಕ್ತವತ್ಸಲ | ಲಾಲಿತ ಗುಣಶೀಲ |
ಪಾಲಿತಾಮರ ಲÉೂೀಲಗೋಪಿ ಬಾಲಾ ಲೀಲಾ ವಿಶಾಲನಾಯಕ |
ಮಂಗಮನೋಹರ3