ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದುಷ್ಟ ಮನುಜ ಕೇಳೊ ನೀ ಬಲು ಭ್ರಷ್ಟನಾದೆಯಲ್ಲೋ ಪ ಎಷ್ಟು ಪೇಳಿದರೇನು ನಿನಗೆಳ್ಳಿ- ನಷ್ಟಾದರು ಮತಿ ಬರಲಿಲ್ಲ ಅ.ಪ ಶುದ್ಧ ವೈಷ್ಣವನೆಂಬೀ ನೀನು ನಿ- ಷಿದ್ಧ ಕೂಳನು ತಿಂಬೀ ಬುದ್ಧಿಪೂರ್ವಕವಾಗಿ ನಮ್ಮ ಅನಿ ರುದ್ಧನ ನಾಮದ ನೆನೆಯದಲಿರುವಿ 1 ಬಾಯೊಳು ಬಹುನೀತಿ | ಬೊಗಳುವೆ ಹೇಯ ಕರ್ಮದಿ ಪ್ರೀತಿ ಮಾಯವಾದಿಯನುತವನು ಪೊಗಳುವೆ ಕಾಯಕ್ಲೇಶ ನಿನಗಾಗದಿರದು 2 ಭಂಗ ಹೋಗದೆ ಬಾಳೊ | ಮುಂದಕೆ ಭಂಗಿಕೋರನೆ ಕೇಳೊ ರಂಗೇಶವಿಠಲನ ಮೊರೆಹೊಗು ನಿನ ದುರಿ- ತಂಗಳು ಪೋಪವು ಮಂಗನಾಗಬೇಡ 3
--------------
ರಂಗೇಶವಿಠಲದಾಸರು