ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಸೋಜಿಗವಯ್ಯ ಪಂಪಾಪತೇ ಪ ನೀನೆ ಪರನೇಂಧ್ಹೇಳ್ವ | ದೀನ ಜನಗಳನೆರಹೀ ಅ.ಪ. ಹರಿಯಾಜ್ಞೆಯನುಸರಿಸಿ | ದುಶ್ಯಾಸ್ತ್ರ ಬಿತ್ತರಿಸಿಹರಿಪರನು ಎಂತೆಂಬ | ವರ ಜ್ಞಾನ ಮರೆಸೀ |ಸರ್ವ ತಮೋ ಯೋಗ್ಯ | ನರರಿಗ್ವರಗಳನಿತ್ತುಉರುತರೈಹಿಕ ಸುಖದಿ | ಮೆರೆಸುವಿಯೊ ಪರವಾ 1 ಜಂಗಮರು ಜೋಗಿಗಳು | ಲಿಂಗಗಳ ಧರಿಸಿಹರುಮಂಗಳಾತ್ಮಕ ನಿನ್ನ | ಅಂಗದೊಳಗೈಕ್ಯಾ |ಮಂಗನಂದದಿ ಬಯಸಿ | ಮಂಗಳವ ಕಳಕೊಂಡುಭಂಗ ಪಡುವರು ಪರದಿ | ಶೃಂಗಾರ ಮೂರ್ತೇ 2 ಹರಿಕಾರ್ಯ ಸಾಧಕರ5ಲೆರಡನೇ ಂiÀ5ನಾಗಿಪರಮ ವೈ5ವನೆನಿಸಿ | ಭೂ ಭುಜರಿಗೇಹರಿ ಪುರದ ದಾರಿಯನು | ತೋರಿಸುತ ಮೆರೆಯುತಿಹವಿರೂಪಾಕ್ಷ ನಿನಚರಣ | ಸರಸಿಜಕೆ ನಮಿಪೇ 3 ಮರುತಾತ್ಮ ಸಂಭೂತ | ವೈರಾಗ್ಯನಿಧಿ ಶಿವನೆಗಿರಿಜೆಯಳ ಪರಿಗ್ರಹಿಪ | ಕಾರ್ಯ ನಿರ್ವಹಿಸೀ |ಶರಣ ಜನ ಸಂದೋಹ | ನೆರಹಿ ವೈಭವದಿಂದಪರಮ ಮುದವನು ಈವೆ | ಹರಿಯ ಭಕುತರಿಗೆ 4 ಮಾಧವ ಗುರು | ಗೋವಿಂದ ವಿಠ್ಠಲನಸಂದರ್ಶನಾದಿಯಲಿ | ಛಂದದಲಿ ಗೈದೂ |ಬಂದು ನಿನ್ನಂಘ್ರಿಗಳ | ದ್ವಂದ್ವ ಕೆರಗುವ ಭಕ್ತವೃಂದಗಳಿಗೀವೆಯಾ | ನಂದ ಸಂದೋಹ 5
--------------
ಗುರುಗೋವಿಂದವಿಠಲರು
ನೋಡು ಎನ್ನೊಳು ಮಾಡು ದಯವನು ಬೇಡಿಕೊಂಬುವೆ ಮುರಹರ ಪ ರೂಢಿಯೊಳು ಎನ್ನ ಖೋಡಿಮಾಡದೆ ಕಾ ಪಾಡು ಬೇಗ ಭಕ್ತಹಿತಕರ ಅ.ಪ ಪಂಕಜಾಕ್ಷನೆ ಕಿಂಕರನ ಈ ಮಂಕುಗುಣಗಳ ಬಿಡಿಸಯ್ಯ ಶಂಖಸುರಹರ ಶಂಕೆಯಾತಕೆ ಕಿಂಕರನು ನಾಂ ಪಿಡಿ ಕೈಯ 1 ಹಿಂದು ಇಲ್ಲೆನ್ನ ಮುಂದು ಇಲ್ಲಯ್ಯ ತಂದೆ ನಿನ್ಹೊರತ್ಯಾರ್ಯಾರು ಮಂದಮತಿಯನು ಛಿಂದಿಸಿ ಬೇಗ ಕಂದನನು ಪೊರೆ ದಯಾಕರ 2 ತಂದೆ ನೀನೆ ತಾಯಿ ನೀನೆ ಬಂಧು ನೀನೆ ಶ್ರೀಕರ ಬಂದ ದುರಿತದಿಂದ ಕಾಯೊ ಸಿಂಧು ನೀನೆ ದೇವರೊ 3 ಉರಗನ ಬಾಯಲಿರುವ ಮಂಡೂಕ ಸ್ಮರಿಸಿ ನೋಣಕ್ಹವಣಿಸುವ ತೆರದಿ ಶರಧಿಸಂಸಾರ ಸ್ಥಿರವೆಂದರಿಯದೆ ಮರವಿನಿಂ ಬಿದ್ದೆ ದುರಿತದಿ 4 ಕಾಯಜೆಂಬುವ ಮಾಯಕೋರನು ಪಾಯಕೆ ಒಳಪಟ್ಟೆನು ತೋಯಜಾಕ್ಷೇರ ಮಾಯಮೋಹದಿ ಕಾಯದಂದಿಸಿ ಕೆಟ್ಟೆನು 5 ಕುಂಭಿನಿಯೊಳೆನಗಿಂಬುಗೊಟ್ಟು ಬಲು ನಂಬಿದವರಾಸ್ತ್ಯಳಿದೆನೊ ಜಂಬಬಡಿಯುತ ಶುಂಭಗುಣಗಳಿ ಗಿಂಬುಗೊಟ್ಟು ದಿನಗಳೆದೆನೊ 6 ಪ್ರಾಣತಗ್ಗಿಸಿ ದೀನತನದಲಿ ದೈನ್ಯಬಡುವರಿಗ್ಹಾನಿಮಾಡಿದೆ ದಾನಕೊಡುವರ ದಾನಕಡ್ಡಾಗಿ ನಾನಾ ದುರ್ಬೋಧವುಸುರಿದೆ 7 ಜಾನಕೀಶನ ಧ್ಯಾನಯುತರಿಗೆ ಹೀನ ಹಾಸ್ಯವ ಗೈದೆನೊ ಏನು ತಿಳಿಯದೆ ಗಾಣಕೆ ಬಿದ್ದ ಮೀನಿನಂತೆ ನಾನಾದೆನೊ 8 ಶ್ವಾನನಂದದಿ ಖೂನವಿಲ್ಲದೆ ನಾನಾಪಾಪವ ಗೈದೆನೊ ಮಾನವಜನುಮೇನು ಶ್ರೇಷ್ಠಿದ ಜ್ಞಾನದೋಳ್ಹೊತ್ತುಗಳೆದೆನೊ9 ಮಂಗನಂದದಿ ಹಂಗದೊರೆದು ಅಂಗಲಾಚಿ ಪರರನ್ನು ಬೇಡಿದೆ ಅಂಗಜಪಿತ ಮಂಗಳಾಂಗ ಶ್ರೀ ರಂಗ ನಿಮ್ಮ ಮಹಿಮ್ಯರಿಯದೆ 10 ದಾಸ ಮಾಡಿದ ದೋಷ ಮನ್ನಿಸಿ ಪೋಷಿಸು ಶ್ರೀರಾಮನೆ ಶ್ರೀಶ ಶ್ರೀನಿವಾಸ ಎನ್ನಂತ ರಾಸೆ ಪೂರೈಸು ಬೇಗನೆ 11
--------------
ರಾಮದಾಸರು
ಮನವೇ ಎಂದಿಗೆ ಇದು ಕೊನೆಯ ಕಾಣುವುದೊ ಪ ತನಗೆ ತಾನೆ ಚಿಂತೆಗೈಯ್ಯುತ ಜನರ ನೋಡಿ ಹಿಗ್ಗುತ ಅ.ಪ ಬಂಗಿತಿಂದ ಮಂಗನಂದದಿ ಭಂಗಕೆ ಒಳಗಾಗುವಿ 1 ಎಷ್ಟುದಿನಗಳಾದರೂ ಪುಟ್ಟುವುದಿಲ್ಲ ವಿರಕ್ತಿ ಭ್ರಷ್ಟನಾಗಿ ಕೆಟ್ಟು ಪೋಗುವೆ ಶ್ರೇಷ್ಠ ನೀನೆಂದು ಕೊಂಬುವೆ2 ಪ್ರೇಮದಿಂದಾ ಜಪಮಾಡದೆ ತಾಮಸರೊಳು ಸೇರಿದೆ 3
--------------
ಗುರುರಾಮವಿಠಲ