ಅಧ್ಯಾಯ ಮೂರು
ಪದ್ಯ
ಭಕ್ತರಭಿಮಾನಿ ಶಿವಶಕ್ತಿ ಎಂಬುವ ಸೂರ್ಯದೈತ್ಯವರ್ಯನು
ಎಂಬೊ ಕತ್ತತಿಯ ಸಂಹರಿಸಿ ಮತ್ತು ದಿತನಾಗಿರಲು
ಇತ್ತ ಅನುಭೂತಿಯಾಗುತ್ತಾದ ಮುಖಕಮಲ ಮತ್ತಳಿತಾಗೆ||
ಸತ್ಯವಂತಿಯು ದೇವಿ ಸತ್ಯದಿಂದನು ಭೂತಿಗಿತ್ತುತ ಬಾಯಂದು
ಮತ್ತೆ ಮುಂದಕೆ ಕರೆದು ಹೆತ್ತ ತಾಯಿಯಂತೆ ಅತ್ಯಂತ
ಸ್ನೇಹವ ಸುರಿಸಿ ಒತ್ತಿ ಮಾತಾಡಿದಳು ಮತ್ತೆ ಈ ಪರಿಯ|| 1
ಪದ ರಾಗ :ಶಂಕರಾಭರಣ ಅಟತಾಳ ಸ್ವರ ಷಡ್ಜ
ಮತ್ತೇನು ಬೇಕು ನೀಬೇಡಮ್ಮ|| ನಿನ್ನ ಚಿತ್ತದೊಳು
ಸಂಶಯ ಬೇಡಮ್ಮ|| ಪ
ದೈತ್ಯನ ಸಂಹಾರ ಮಾಡಿದೆ| ನಾ ಮತ್ತೆ ಬಂದು ನಿನ್ನಕೂಡಿದೆ||
ಅಂತಃ ಕರುಣದಿಂದ ನೋಡಿದೆ || ನಿನ್ನೊಳತ್ಯಂತ ಸ್ನೇಹವಮಾಡಿದೆ|| 1
ದಾರು ಧನ್ಯರೆನಿಸಿ ಲೋಕಮಾನ್ಯರು|| 2
ಮಿತ್ರಾನಂತಾದ್ರೀಶಹ್ನಿಡುವವರು||3
ಆರ್ಯಾ
ಪರಿ ಪರಿ ಅನುಭೂತಿ ತಿಳಿದಳು
ಎಂಬುವರು ಸುಖಸಾರ|| 1
ಸಂಶಯ ಬಿಟ್ಟಾಡಿದಳು ಹೀಗೆಂದೂ||2
ಪದ ರಾಗ:ಕಾಪಿ ತಾಳಬಿಲಂದಿ ಸ್ವರ:ಪಂಚಮ
ಇಂದು ತಾಯಿಯೆ||
ಇಂದು ಎಂದೆಂದೂ ದಯಾ ಒಂದೆ ಸಾಕು|| ಪ
ದಾವ ಕಾಲಕು ದೇವಿ ನಿನ್ನ ಸೇವೆ ಇರಲಿ|| 1
ನತಿಯು ಮಾಡುವೆ|| ಮತಿಯು ಬೇಡುವೆ|| ಮತಿಯಿಂದಲೆ
ಪತಿಯ ಸೇವಿಸಿ ಪತಿಯಿಂದಲೆ ಗತಿಯು ಆಗಲಿ|| 2
ಪ್ರಾತಗಾಣಿ ಸೆ || ಪಂಥಗೆಲ್ಲಿಸೆ || ಸಂತತಾನಂತಾ ಧ್ರೀಶನ
ಅಂತರಂಗದಿ ಚಿಂತಿಸುವೆನು||3
ಆರ್ಯಾ
ಅನುಭೂತಿಯ ಅನುಸರಿಸಿ || ಅನುಕೂಲ ಸ್ಥಾನ
ಅನುದಿನ ಕರದ್ಹೇಳಿದಳು ಹೀಗೆಂದೂ||
ಪದ ರಾಗ:ಕಾನಡಾ ಆದಿತಾಳ ಸ್ವರ ಪಂಚಮ
ಬಾರೋ ಬ್ಯಾಗನೆ ಭೈರವಾ|| ನೀ ಪೋಗೀ || ಬ್ಯಾ||
ಯಮುನಾ ತೀರಕೆಪೋಗಿ|| ಪ
ದೊಡ್ಡದು|| ಶ್ಯಲವಾಗಿ ಈ ಕಾಲಕ ಅಲ್ಲೊಂದಾಲಯ
ನಿರ್ಮಿಸಿಕಾಲಗಳ್ಹಿಯದೆ|| 1
ಬರುವೆನು|| ನಿಂದಿರಲೆ ತ್ವರದಿಂದಲೆ ಪೋಗುತ ಇಂದ ಈ
ಕಾರ್ಯವ ಚಂದದಿ ಮಾಡಿ|| 2
ಯಮುನಾದ್ರಿಗೆ ಪೋಗಿ|| 3
ಆರ್ಯಾ
ಆ ದೇವಿಯ ಆಜ್ಞಾವನೂ|| ಆದರದಿಂದಲೇ ಧರಿಸಿ
ಹೋದಾತನು ಅಲ್ಲೇನಿಂತ ನಿತ್ಯದಲಿ|| 1
ಬರಲಿಲ್ಲಾಕೆಂತೆಂದು|| ತುಳುಜಾ ತಾನಾಗಿ ಅಲ್ಲಿಗೆ ಬಂದು ||
ಪರಮಾಜ್ಞಾಧಾರಕನಾ || ತ್ವರದಲಿ ನೋಡ್ಯಾಡಿದಳು ಈ ವಚನಾ|| 2
ಪದ ರಾಗ :ಶಂಕರಾಭರಣ ಅಟತಾಳ ಸ್ವರ ಪಂಚಮ
ಕಾರ್ಯವಂತಯಂದು ನಿನ್ನ ಉಳಸಿದೆ|| 1
ಇಲ್ಲಿಗೆ ಬಂದ್ಯೋನಿ ಕಾರ್ಯಾರ್ಥಿ|| ಬರದೆ ಇಲ್ಲೇ ನಿಂತಿ
ಪಡದಿ ನೀನು ಅಪಕೀರ್ತಿ||2
ಅನಂತಾದ್ರೀಶನ ಆಣೆ ನಿನಗುಂಟು|| 3
ಆರ್ಯಾ
ಈ ರೀತಿಯ ನುಡಿ ಕೇಳಿ || ಹೇರಿದ ಅಪರಾಧ ಭಾರವನು
ತಾಳಿ|| ಘೋರವು ಬಂತಿದು ಎಂದಾ|| ಭೈರವ ಮಾತಾಡಿದನು
ಭಯದಿಂದಾ|| 1
ಪದ ರಾಗ:ಆನಂದ ಭೈರವಿ ಆದಿತಾಳ ಸ್ವರ ಪಂಚಮ
ಎನ್ನ ಪರಾಧಾ ಹಿಡಿಬ್ಯಾಡಮ್ಮಾ|| ತಾಯಿಎನ್ನಾ ||ಅಂ||
ಬಹುಕಾಲ ನಿನ್ನವನಾದ ಮ್ಯಾಲೆ|| ಪ
ಮದದಿಂದೆ|| ಈಗ ನನ್ನ ಅಪರಾಧದಿಂದ ನಾನೊಂದೆ ||
ನಿನ್ನ ಹೊರತು ಎನಗಿನ್ಯಾರ್ಹಿತಕರುಂಟು|| 1
ಮಂಗಳಾಂಗನೆ ನಾನು ಮಂಗನಂತಲಿ ನಿಂತೆ|| 2
ಅಚ್ಯುತಾನಂತಾದ್ರೀಶನಿಚೆÀ್ಛಗೆ ಬಂತಿದೆ|| 3
ಪದ್ಯ
ಈ ರೀತಿ ನುಡಿಕೇಳಿ ಕಾರುಣ್ಯನಿಧಿ ದೇವಿ ತೋರಿಸ್ನೇಹವು
ನಗುತ ಭೈರವನ ಶಿರದಲ್ಲಿ ಚಾರುಹಸ್ನದಿ ಹೊಡೆದಳ್ಹಾರ್ಯ
ಭಾವದಲಿ ಆ ಭೈರವನು ಆ ಹಸ್ತಭಾರದಲಿ ವಟುಕಾದ
ಉರ್ವಿಯಲಿ ತಾ ಡೋಳ್ಹಭೈರವನು ಎನಿಸಿ || ಪಾರ್ವತಿಯು
ಚಾರು ಉರ್ವಿಯಲಿ ಜನರನುದ್ಧಾರ ಮಾಡುತ ಬಿಡದೆ ಸಾರಗಿರಿಯಲಿ