ಹೆಂಗಳೆಯರು ನಾವು ರಂಗೈಯ್ಯ ಮಾನಂಗಳ ಕಾಯಬೇಕೋ
ಭಂಗ ಬಡುವೆವು
ಮಂಗಚೇತನದಂಬಿಗನು ವಾಸಂಗಳನು ನೆರೆ ಸೆಳೆದಿಹಾನು ಪ
ಗೋಪಿವೃಂದವು ಕೂಡಿ ಚಿತ್ತದ ಸಂತಾಪ ನೀಗಲು ಮಾಡಿ
ತೋಷಗೊಳಿಸಲು
ಪಾಪಿಯಂಬಿಗ 1
ಬಯಕೆಯಾ ಹಾರವನು ನಾವೆಲ್ಲರು ವಯನಾಗಿ ಕಟ್ಟಿದ್ದೆವೋ
ಮಾಡ್ದೆವು ಮತಿಯು ಪೋದುದು
ನಯನದಿಂದವುಗಳನೆ ನೋಡದೆ ಬಯಲುಮಾಡಿದೆವಿತ್ತೀಕಂಗೆ 2
ಎಷ್ಟು ಬಳಲುತಿಹೆವೊ ಶ್ರೀಕೃಷ್ಣ ನಿನ್ನಿಷ್ಟಕ್ಕೆ ಬಂದುದೇನೋ
ಇಷ್ಟು ಪರಿಯಲ್ಪರಿವುದೇತಕೆ ಇಷ್ಟ ಮೂರುತಿ ಕೃಷ್ಣನೀಗಲೆ
ದುಷ್ಟ ಅಂಬಿಗನಂಗ ತೊಲಗಿ ಶಿಷ್ಟ ನರಸಿಂಹ ವಿಠ್ಠಲಾದ 3