ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಜಯಾ ಶ್ರೀ ವೆಂಕಟೇಶ ಜೀಯ ಪ ಜಯ ಶ್ರೀ ವೆಂಕಟೇಶಜೀಯ ನೀನೆ ಭಯಪ್ರದಾಯಕನಯ್ಯ ||ಆಹಾ|| ಭಯಕೃದ್ಭಯನಾಶನ ನೀ ಎನ್ನ ಕೈಬಿಡದೆ ಕಾಯೊ ಎನ್ನೊಡೆಯನೆ ವೇಂಕಟರಾಯ ಅ.ಪ ಮಂಕುಮಾನವನಾದ ಎನ್ನ ಮನದ ಡೊಂಕು ತಿದ್ದಿದಿ ಸ್ವಪನವನ್ನ ನಿನ್ನ ಅಂಕಿತದಂತೆ ನುಡಿಸೆನ್ನ ಇನ್ನು ಮಂಕುಹರಿಸಿದೆ ಪ್ರಸನ್ನ ||ಆಹಾ|| ಬಿಂಕದಿಂದ ಇಹ ಶಂಕೆ ಹರಿಸಿ ನಿನ್ನ ಕಿಂಕರ ಕಿಂಕರ ಕಿಂಕರನೆನಿಸಿದೆ 1 ಹಿಂದನೇಕ ಪರಿಯಿಂದ ಮನ ಬಂದಂತೆ ನುಡಿಸಿದ್ದರಿಂದ ತಂದೆ ಮುದ್ದು ಮೋಹನ ವಿಠ್ಠಲಾನಂದ ಪೊಂದಿ ಸಂದೇಹ ಹರಿಸಿದ ಚಂದ ||ಆಹಾ|| ಇಂದು ಮುಂದು ಎಂದೆಂದಿಗೂ ನೀ ಭವ ಬಂಧ ಹರಿಸಿ ಕಾಯಬೇಕು ಇಂದಿರೆರಮಣ2 ತ್ವರಿತಾದಿ ದಯಮಾಡೋ ಹರಿಯೆ ನೀನೆ ನಿರುತ ಎನ್ನಯ ಕುಲದ ದೊರೆಯೇ ಭಕ್ತ ಪರಿಪಾಲ ಮೋಕ್ಷದ ಹರಿಯೇ ನಿನ್ನ ಹೊರತು ರಕ್ಷಕರ ನಾನರಿಯೆ ||ಆಹಾ|| ಪರಮಕರುಣಿ ಶ್ರೀ ವೇಂಕಟೇಶಾಭಿನ್ನ ಉರಗಾದ್ರಿವಾಸವಿಠಲ ಜಗದೀಶನೆ 3
--------------
ಉರಗಾದ್ರಿವಾಸವಿಠಲದಾಸರು
ನಾರಸಿಂಹ ಶ್ರೀ ನಾರಸಿಂಹ ಪಾರುಗಾಣಿಸಿ ದುರಿತೌಘಹರಿಸಿ ಕಾಯೊ ಪ ನರಹರಿ ಜ್ವರಹರ ಘೋರವ್ಯಾಧಿಯ ಪರಿಹಾರಗೈಸಿ ಪರಿಪಾಲಿಸಬೇಕಯ್ಯಾ ಅ.ಪ ಘುಡು ಘುಡಿಸುತ ಪಲ್ಕಡಿದು ಚೆಂಡಾಡುತ ಮೃಡನೆ ಪರನು ಎಂದು ನುಡಿದ ಕಶಿಪುವಿನ ಒಡನೆ ಕಂಭದಿ ಬಂದು ಒಡಲ ಬಗೆದು ನಿನ್ನ ಧೃಡ ಭಕುತಗೆ ಬಂದೆಡರ ಬಿಡಿಸಿದೆ1 ತುಷ್ಟಿಪಡಿಸೊ ಪರಮೇಷ್ಟಿಯ ಪಿತ ನಿನ್ನ ದೃಷ್ಟಿಯಿಂದ ಅನಿಷ್ಟ ನಿವಾರಣ ಅಷ್ಟಕರ್ತೃತ್ವದ ಪ್ರಭೋಕಷ್ಟಹರಿಸಿಭಕ್ತ- ರಿಷ್ಟ ಪಾಲಿಪ ಸರ್ವಸೃಷ್ಟಿಗೊಡೆಯ ದೇವ2 ಸಂಕಟ ಬಿಡಿಸೊ ಭವಸಂಕಟದಿಂದ ಶ್ರೀ ವೇಂಕಟೇಶಾತ್ಮಕ ಭೀಕರ ರೂಪ ಶಂಕರಾಂತರ್ಗತ ಸಂಕರುಷಣ ಮೂರ್ತೇ ಮಂಕುಹರಿಸಿ ಪಾದಪಂಕಜ ತೋರಯ್ಯ 3
--------------
ಉರಗಾದ್ರಿವಾಸವಿಠಲದಾಸರು