ಇಹಸುಖ ಮೊದಲೇಯಿಲ್ಲ | ಕೃಷ್ಣ
ಅಹಹ ಪರಸುಖವಾಗುವುದ್ಹ್ಯಾಗೊ ಪ
ಸಾಹಸಿನಾನೆನುತ ಜನರ ಮೆಚ್ಚಿಸುವೊಡೆ
ಕುಹಕ ಮಾತುಗಳ ಕೂಗಿ ಬಾಯಾರಿದೆ ಅ.ಪ
ಶ್ರವಣ ಮನನ ನಿಧಿ ಧ್ಯಾಸನ ವೊಂ-
ದೆವೆ ಮಾತ್ರವು ನಿಜವಾಗಿ ಕಾಣೆನುನಾ
ಬವನಾಶಿ ಧರಿಸಿ ದಾಸನೆಂದು ನಾ
ಬರಿದೆ ದೇಶಗಳ ತಿರುಗಿ ಬೆಂಡಾದೆನು 1
ಯಮನಿಯಮಾಸನ ಯೋಗ | ಗಳ
ಭ್ರಮೆಯ ಪಡುತ ಬಳಲುವೆಯಾವಾಗ
ಮಮಯೆಂಬುದರಿಂ ಬಂದಿತು ರೋಗ 2
ಶಂಕರ ಮುಖ ಸುರವಂದ್ಯ | ಅರಿ
ಶಂಖ ಗದಾಧರ ಶ್ರೀಶ ಮುಕುಂದ
ಸಂಕಟ ಬಂದಾಗ ವೆಂಕಟರಮಣೆಂದು
ಮಂಕುಜನರು ಪೇಳ್ವಗಾದೆಯಂತಾಯಿತು 3
ಕಾಸಿಗೆ ತಿರುಗಿದೆನಲ್ಲದೆ | ದಿವ್ಯ
ಕಾಶಿಗಯಾಯಾತ್ರೆಯ ಮಾಡಿದೆನೇ
ಘಾಶಿಪಟ್ಟಿ ಸಾಕು ಸಾಕಿದರ ಗೊಡವೇ 4
ಕೊಟ್ಟದ್ದರೆ ಹರಿಕೊಡುವ | ಯಂ
ಕೊಟ್ಟರುವದಕು ಕೊಡದಿರುವದಕೂ
ಕೃಷ್ಣ ನೀನರಿಯದೆ ನಾನು ಸ್ವತಂತ್ರನೇ 5
ಕಣ್ಣಿಲ್ಲದ ಚಿಂತೆವಂದು | ಸದಾ
ಬನ್ನ ಬಡುವದು ಯೋಚನೆಯೆರಡು
ನಿನ್ನವನೆನಿಸೀ ಕಷ್ಟ ಬಿಡಿಸಿ ಒಳ-
ಕಣ್ಣು ಕೊಟ್ಟು ನಿನ್ನ ಸೇವೆಯ ಪಾಲಿಸೋ 6
ಛಳಿ ಜ್ವರದ ಯಾತನೆ ಪಡುವೆ | ನಿನ್ನ
ಕರೆಕರೆ ಪಡಿಸುವುದು ನಿನಗೆ ತರವೇ 7
ಆರು ಜನರ ಸೇವೆ ಕೊಡಿಸೋ | ಯೀ
ಆರು ಜನರ ಸಂಘವ ಪರಿಹರಿಸೋ
ಮೂರು ಜನದ ಕೂಟ ಮೊದಲೇ ಬಿಡಿಸೋ
ತಾಳಲಾರೆಯಿವರು ಬಲು ಕ್ರೂರಾತ್ಮರು 8
ಆಸೆಯ ಪರಿಹರಿಸಯ್ಯಾ | ನಿಜ
ದಾಸನೆನಿಸಿ ನೀ ಪಿಡಿಯೆನ್ನ ಕೈಯ್ಯಾ
ಈಸಲಾರೆ ಗುರುರಾಮ ವಿಠ್ಠಲ ಜೀಯಾ 9