ಕರುಣದಿ ಕಾಯೋ ಎನ್ನ ಕಾರುಣ್ಯನಿಧಿ
ಕರುಣದಿ ಕಾಯೋ ಎನ್ನ ಪ
ಚರಣಸೇವಕಭಯಹರಣ ಶ್ರೀ ಕೌಸ್ತುಭಾಭರಣ ಸೌಖ್ಯವಿ
ತರಣ ನಿನ್ನಯ ಚರಣಯುಗಳವ ಶರಣುಹೊಕ್ಕೆನು ಅ.ಪ
ಕರ್ಮತಂತ್ರವನುಳಿದು ಕಾಮಿಸಿ ಮ£ವ
ನಿರ್ಮಲತ್ವವ ತೊರೆದು
ಹಮ್ಮಿನಿಂದಲೆ ಭಕ್ತಿಯುಮ್ಮಳಿಸದೆ ಕಾಮವು
ಹೊಮ್ಮುತಿದೆ ಪರಬೊಮ್ಮ ಮೂರುತಿ 1
ಸ್ನಾನ ಮೌನವ ತೊರೆದು ಸಂಧ್ಯಾದ್ಯನುಷ್ಠಾನ ನೇಮವ ಮರೆದು
ಮಾನಸಪೂಜಾ ವಿಧಾನವನರಿಯದೆ
ದೀನಜನಸುರಧೇನು ಭಕ್ತರಮಾನನಿಧಿಯಹ ಶ್ರೀನಿವಾಸನೆ2
ಶರಣಜನಾವನನೆ ಶಕ್ರಾದಿ ನಿರ್ಜರಕುಲಪಾಲಕನೆ
ಪುರಹರ ಸನ್ನುತ ಚರಿತಪೂರಿತ
ದುರಿತ ಸದ್ಗುಣ ಭರಿತ ಪುಲಿಗಿರಿ ವರದ ವಿಠಲ 3