ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಡಿ ನೀರೇ ಪೋಪಾ ದೇವಿ ಇದ್ದೆಡೆಗೆ| ಕಡು ಕೋಪವ್ಯಾಕ ಶ್ರೀರಮೆ ಕೂಡ ಎನಗೆ ಪ ಫುಲ್ಲ ಲೋಚನೆ ಕುಂದರದನೆ ಸುಫಣಿ ವೇಣಿ| ಮಲ್ಲಿಕಾ ಮಂದಸ್ಮಿತೆ ಚಲ್ಪಕದಪು| ಬಿಲ್ಲು ಕಾಮನ ಸೋಲಿಪ ಭ್ರೂಲತೆಯುಳ್ಳ| ಸಲ್ಲಲಿತಾಂಗಿಯಾವಾಗ ಕಂಡೆಪೆನೆ 1 ಹುಣ್ಣಿಮೆ ಚಂದ್ರನ ಮಂಡಲ ಪೊಳೆವಾ|ಪೊಂ| ಬಣ್ಣವದನೆ ಮಹಾಸಿಂಹನ ಜರೆವಾ| ಸಣ್ಣ ನಡುವಿನಿಂದೊಪ್ಪುವ ಸಿರಿಯನು| ಕಣ್ಣಾರೆನೋಡಿ ಮತಾಡುವೆ-ನೇಳೆ 2 ಬರಬಾರದು ದೇವಿಯಗಲಿ ಬಂದರ| ಸ್ಥಿರವಾಗದು ಅರಫಳಿಗೆನ್ನ ಮನಸು| ಗುರುಮಹಿಪತಿ ಸುತ ವರದ ದೇವತೆಯಾಗಿ| ಧರೆಯೊಳು ಮೆರವಾ ಶ್ರೀ ಲಕ್ಷೀಯ ತೋರೆ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಲಿಸಯ್ಯ ಎನ್ನ ಪಾದಪದ್ಮದೋರಿ ನೀ| ಬಾಲಲೀಲೆ ದೋರ್ವೆ ಗೋಪಾಲ ಬಾಲರನ್ನನೇ ಪ ನಂದ ನಂದ ನಂದು ಓಡಿ ನಂದನೆಯಾ ಭಾವಕಾಗಿ| ಬಂದ ಬಂದು ದುರಿತವನು ಬಂದು ಬಂದು ಹರಿಸಿ| ಛಂದ ಛಂದದಿಂದ ಭಕ್ತರೈವರನು ಕಾಯ್ವೆ ಮು ಸಿಂಧು ವಾಸನೆ 1 ನಾಗನಾಗ ಶಯನ ಯನ್ನ ರಕ್ಷಿಸೆಂದು ಕರೆಯ ಕೇಳಿ| ನಾಗ ನಾಗದವನ ಬಿಟ್ಟು ಓರ್ವನೇ ಮಾರುತಿಯಾ| ವೇಗ ವೇಗದಿಂದ ಬಂದು ಪ್ರಾಣನುಳಹಿದೇ ನಿಗ| ಮಾಗ-ಮಾಗೋಚರ ಭೋಗ ಭೋಗಗನ ವ್ಯಾಪ್ತನೇ2 ಸುಂದ್ರ ಇಂದ್ರ ಚಾಪದಂತೆ ಪೊಳೆವ ಭ್ರೂಲತೆಯು|| ಪೇಂದ್ರ ಚಂದ್ರ ಧರನುತ ಮಂದ್ರಗಿರಿಧರ ಗುಣ| ಸಾಂದ್ರ ಚಂದ್ರಕುಲ ಸಿರೋಮಣೀ ವಾರಜಾಕ್ಷಯಾದ| ವೇಂದ್ರ ಇಂದ್ರನುತ ಮಹಿಪತಿ ನಂದ ನೋಡೆಯನೇ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಂದನಮ್ಮಾ ಬಂದನಮ್ಮಾ ನಮ್ಮ ರಂಗನು| ಇಂದು ನಮ್ಮ ಪೂರ್ವಾರ್ಜಿತಫಲ ವದಗಿ ಬಂದಿತೆಂದು ಪ ಬಿಸಜಾಸಖ ಶತಕೋಟಕಿ ಸಮತೇಜ ದೊಪ್ಪತಿಹನಖವು| ಅಂದುಗೆ ಗೆಜ್ಜೆಯಿಂದ ಘಲುಘಲುಕೆನುತಾ 1 ಉಟ್ಟ ಪೀತಾಂಬರದ ಮ್ಯಾಲ ವಡ್ಯಾಣವನಿಟ್ಟುಕೊಂಡು| ಕಟ್ಟಿದ ಸು ಕಿಂಕಿಣಿಗಳಿಂದ ಝಣ ಝಣ ಕೆನುತಾ2 ಕರ ಕಡಿಗ ವಂಕಿ ತೋಳ ತಾಯಿತ ಕೇಯೂರವನು| ಕೌಸ್ತುಭ ವನಮಾಲೆಯಿಂದ ಪೊಳವುತಾ 3 ಕುಂಡಲ ಕದಪು ಚಲ್ವಿನಿಂದಾ| ದಾಳಿಂಬ ದಶನಾ ಸುನಶಿಕದೆಸಳು ಕಣ್ಣಿಂದಾ 4 ಸ್ಮರನಾಥನು ಸೋಲಿಪ ಭ್ರೂಲತೆಯು ಫಣಿಯಲ್ಲಿಕ| ಸ್ತೂರಿಯನಿಟ್ಟು ಹರಿಮಯ ಕಿರೀಟಕಾವಳಿಮ್ಯಾಲಿರಿಸಿಕೊಂಡು5 ಪಿಡಿದು ಬಿಂಬಾಧರಕತಂದು| ಪರಿ ಪರಿಯಲೂದುತಾ ಮಹಿಪತಿ ನಂದನ್ನ ಪ್ರೀಯನಾ 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು