ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಲಿಧರ್ಮಮಾಡುತಿದ್ದ ಜಂಗಮಲಿಂಗಾ ಶಿವಪೂಜೆ ಮಾಡುತಿದ್ದ ಪ ಅಲ್ಲಿಗಲ್ಲಿಗೆ ಜಾಣ ಬಲ್ಲೆನೈವರಕೂಟ ಎಲ್ಲೆಲ್ಲಿ ನೋಡಲಿ ಕುಳ್ಳಯೆಂಬೆರುಮಾನೇರು ನಿಲ್ಲಾರು ನಿಜದಿಂದ ಬಲ್ಲವರದು ಕೇಳಿ ಕಳ್ಳಾರು ಕದಿವರಲ್ಲ ಜಂಗಮಲಿಂಗ ಸುಳ್ಳು ಹೇಳುವದಿಲ್ಲವೂ 1 ಯೆದುಶೈಲದೊಳು ಹೋಗಿ ಯಾಚಿಸೆಲ್ಲರ ಕಂಡೂ ಹದಿನೇಳು ತತ್ವಂಗಳಂಗಮಾಯಿತು ಯೆಂದು ಸುದಿಗಿರಿಭ್ರುಕುಟಿಗೆ ಜೀವತನುವ ತಂದೂ ಮದನಜನಕನೇಳಿದಾ 2 ನಾದಬಿಂದುವಿದೆಂಬೊ ನಾಡಿಕೊನೆಯೊಳು ನಿಂದೂ ವಾದಿಭೀಕರ ಮಾದ ವಜ್ರದುಂಗುರವೆಂದು ಬೋಧಾಯನದೊಳಿಹುದಾದಿ ತತ್ವವಿದೆಂದೂ ಸಾಧನೆಯನು ಮಾಡಿದಾ ಜಂಗಮಲಿಂಗಾ ವೇದಾವದನಮಾದುದ3 ಅಂಡಪಿಂಡವಿದೆ ಬ್ರಹ್ಮಾಂಡವಾಗಿಹುದೆಂದೂ ಕಂಡ ಪುಸ್ತಕವೆಲ್ಲಾ ಕಾಣಿಕೆಯನು ಮಾಡಿ ಕುಂಡಲಪುರದೊಳಿದ್ದ ಜಂಗಮಲಿಂಗಾ ಶಿವಪೂಜೆ ಮಾಡುತಿದ್ದಾ 4 ಕನಕಾಪುರೀಶ ತನುಮನಕಗೋಚರವಾದಾ- ಗಣಿತಾವೇಶನುಯೆಂದು ಗುಣಿಸುತಿರಲು ವೇದ ಅಣಿದು ಬರಲು ಗುರುವು ತುಲಸಿರಾಮನೆಯಾದ ಘಣಿಶಾಯಿ ಪರತತ್ವವು ಜಂಗಮಲಿಂಗ5
--------------
ಚನ್ನಪಟ್ಟಣದ ಅಹೋಬಲದಾಸರು
ಮಿಗೆ ಧನ್ಯ ನಾನಾದೆ ಜಗದ ವಳಗೆ ಅಘ ಕಳಿವ ಗುರುಪಾದಯುಗಳ ಕಣ್ಣಲ್ಲಿ ಕಂಡು ಪ ಮುಕುಟ ಮಂಡಿತ ದಿನಪ ಪ್ರಕರ ಸನ್ನಿಭ ಶಿರದಿ ಮಕರಂದ ಮಯವಾದ ಶಿಖದ ಸೊಬಗು ಅಕಳಂಕಮಾದ ಫಾಲಕೆ ವಪ್ಪುವ ತಿಲಕ ಭ್ರುಕುಟಿ ಮಧ್ಯದಿ ಪುಂಡ್ರ ಸುಖದ ದ್ವಯದ್ರಿಕ ಕಂಡು 1 ಹರಿನಾಮ ರವಿಯ ಕಂಡರಳುವೊ ಕರ್ಣಾಖ್ಯ ಸರಸಿರುಗ್ವಗಳು ಚಂದ್ರ ತೆರ ಶೋಭಿಪಾ ವರಕದಪಯುತ ವದನ ಕೊರಳು ಉರುಬಲದ ಭುಜ ಕರ ಹೃದಯ ಎರಡು ಘನ ಗೆರೆಯು ಉದರವ ಕಂಡು 2 ಧಿಟ ಕಟಿತ ಪಟರೋಮ ದಟಿತವಾಗಿಹ ಜಾನು ಚಟುಲಶಿರಿ ಗೋವಿಂದ ವಿಠಲ ನಾಮ ಪಠಿಸಿದಾಕ್ಷಣ ನಟಿಸುವ ಪಾದದ ಕಠಿಣ ಸಂಸಾರ ಸಂಕಟ ಕಳೆವ ರಜಕಂಡು 3
--------------
ಅಸ್ಕಿಹಾಳ ಗೋವಿಂದ