ಪುಷ್ಟಿ ಎಲ್ಲಿಯದು ಪ
ದೃಷ್ಟಿ ಕಡಿಮೆಯು ಕಿವಿಯು ಕೇಳದು
ಶ್ರೇಷ್ಠ ನಾನೆಂದು ಕುಣಿವುದಕೆಅ.ಪ
ಪರಿವ್ರಾಜಕನಾಗಬೇಕೆಂ-
ದುರುತರಾಶ್ರಮ ಧರ್ಮಶಾಸ್ತ್ರಗ-
ಳೊರೆಯುತಿಹುದದರರ್ಥ ತಿಳಿಯದೆ 1
ಕಾಮ್ಯಕರ್ಮಳನು ತ್ಯಜಿಸಿ
ಭ್ರಾಮ್ಯಜನಗಳ ನಡತೆ ಬಿಟ್ಟು
ರಮ್ಯವೆಂದರಿಯುವುದು ಸೌಖ್ಯವು 2
ಎಮ್ಮೆಯೋಲ್ ತಿನ್ನುತಲಿ ಬಾಯಲಿ
ಹೆಮ್ಮೆ ಮಾತುಗಳಾಡುತಿರುತಿಹ
ಗ್ರಾಮ್ಯ ಜನಗಳ ಸಂಗವೆಂದಿಗು
ಗತಿವಿದೂರನ ಮಾಡದೆ ಬಿಡದು 3
ಗಣ್ಯತಾನೆಂದುಕೊಳ್ಳದೆ ದಾ-
ಅನ್ನಕೋಸುಗ ಪರರ ಪೊಗಳದೆ
ಧನ್ಯರಡಿಗಳ ಠಾವಿನಲಿ ನಲಿ ಸುಖ 4
ಪಾಮರರು ಪ್ರತಿದಿನವು ದುಸ್ತರ
ತಾಮಸ ನರಕದೊಳು ಮುಣುಗುತ್ತ
ಸ್ವಾಮಿಯಾಗಿ ಮೆರೆವ ಶ್ರೀಗುರು-
ರಾಮವಿಠಲನ ಮರೆತು ಕೆಡುವರು 5