ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿರಿ ಮನುಜಕೇಸರಿ ಧರಣಿ ಸುಮನಸಗೇಯ | ಮೊರೆಹೊಕ್ಕೆ ನಿನ್ನನು ತರಣಿ ಸನ್ನಿಭಗಾತ್ರ | ಕೀರಾಬ್ಧಿಶಯ್ಯ ಪ ಸರಸಿಜಾನನ ನಜಕ ತವಪದ ಮರೆದ ಪಾಮರನಾಗಿ ನಾ ಭವ ಶರಧಿಯೊಳು ಬಿದ್ದು ಪರಿದು ಪೋಗುವೆ ಎರಗರಿಪುಧ್ವಜನಾಗಿ ನೀ ಬಂದು ಸೂನು | ಸರ್ವೇಶ ರಾಘವ ಭಜಕಜನ ಸುರಧೇನು | ಸ್ವರತ ಸುಖಮಯ ಸುಜನ ವಾರಿಜ ಭಾನು ಖಳವನ ಕೃಶಾನು ತ್ರಿಜಗ ಪೋಷಕ ಪರಮ ಸುಲಭ ನೀ ನಿಜದಯದಿ ಹರಿಮದವ ಖಂಡ್ರಿಸಿ ವೃಜದ ತುರುಗಳ ಕಾಯ್ದ ಸಜನುತ ದ್ವಿಜಪ ಸುತೆ ಪತಿಧ್ವಜನ ಸುತನೆ 1 ಪತಿತ ಪಾವನ ರಂಗ | ಸಂತತದಿ ನಿನ್ನನು ಸ್ತುತಿಪ ಸುಜನರ ಸಂಗ | ನೀನಿತ್ತು ಪಾಲಿಸು ದಿಜ ತತಿ ಮಾತಂಕ ಮರಿಗಳಿಗೆ ಸಿಂಗ ಸಿತ ತುರಂಗನ ರಥದಿ ಶೋಭಿಪ ಅತುಳ ಮಹಿಮನ ಜನನಿ ಅನುಜನಿಗೆ ಹಿತದಿ ಭ್ರಾತದಿ ಭೀತಿ ಬಿಡಿಸಿದ ಶೃತಿಗೆ ನಿಲುಲದ ಚ್ಯುತ ವಿದೂರನೆ 2 ಸಾಮಗಾನ ವಿಲೋಲ ಸುರರಾಜ ಪೂಜಿತ ಕಾಲ | ಕರಿದನುಜ ಹರನುತ ಸ್ವಾಮಿ ಶ್ರೀವನಮಾಲಧರ ಸುಗುಣಶೀಲ ಕಾಮಪಿತ ಹಿಮಧಾಮ ವದನ ಸು ಧಾಮಸಖ ಸುರಸ್ತೋಮ ವಂದಿತ ಯಾಮಿನೀ ಚರವೈರಿ ವಾಮನ ಶ್ರೀಮನೋಹರ ಶಾಮಸುಂದರ 3
--------------
ಶಾಮಸುಂದರ ವಿಠಲ