ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಉಂಗುರ ಕಳೆದಾಗ ಮಾಡಿದ ಪ್ರಾರ್ಥನೆ) ಬೇಡಿಕೊ ಮೂಢಾ ಬೇಡಿಕೊ ಬೇಡಿಕೊ ಭಕ್ತವತ್ಸಲನಲ್ಲಿ ಭಕ್ತಿ ಮಾಡು ಪೂಜೆಯನು ಯಥಾಮತಿ ಶಕ್ತಿ ದೂಡುತ್ತ ದುರುಳರ ಕುಚಿತ್ತಯುಕ್ತಿ ರೂಢಿವಳಗೆ ಸಂಗ್ರಹಿಸು ವಿರಕ್ತಿ ಪ. ಲಾಭಾಲಾಭ ಜಯಾಪಜಂiÀiಗಳು ಸ್ವಾಭಾÀವಿಕವಾಗಿ ಬಹ ಹಗಲಿರುಳು ನಾ ಭಾಗಿ ವರದನ ಪದ ಪದ್ಮ ನೆರಳು ನೀ ಭಜಿಸಿದ ಮೇಲೆ ಬಾಯೊಳು ಬೆರಳು 1 ಯತ್ನವಿಲ್ಲದೆ ಬಹ ನಷ್ಟಗಳಂತೆ ರತ್ನ ಭಂಗಾರ ಸಿಕ್ಕುವುದ್ಯಾಕೆ ಚಿಂತೆ ನೂತ್ನವಾದ ಮೋಹವನು ಬಿಡು ಭ್ರಾಂತೆ ರತ್ನಗರ್ಭವ ನಂಬಿರುವುದೆ ನಿಶ್ಚಿಂತೆ 2 ಅರಿ ಮಿತ್ರೋದಾಸೀನರಿಲ್ಲವು ಹರಿಗೆ ಸರಿಯಾಗಿ ನಡೆಸುವ ಸರ್ವ ಜೀವರಿಗೆ ಪರ ವಸ್ತು ನೀನೆಂದು ಸೇವೆ ಮಾಳ್ಪರಿಗೆ ಸುರ ವೃಕ್ಷದಂತೆ ಕಾರಣವಾಹ ಸಿರಿಗೆ 3 ಋಣವಿಲ್ಲದೆ ವಸ್ತು ಕ್ಷಣವಾದರಿರದು ಉಣುವ ಭೋಗಗಳೆಂದು ತಪ್ಪವು ನೆರದು ಅಣು ಮಹತ್ತುಗಳಂತರಾತ್ಮನ ಬಿರುದು ಗಣನೆ ಮಾಳ್ಪರ ಕೂಡಿ ನೆನೆ ಮನವರಿದು 4 ಆಶಾ ಪಾಶದಿ ಸಿಕ್ಕಿ ಕೆಡದಿರು ವ್ಯರ್ಥ ಶ್ರೀಶನ ನೆನೆವುದೆ ಸಕಲ ವೇದಾರ್ಥ ಶೇಷಗಿರೀಶನು ಸತ್ಪುರುಷಾರ್ಥ ದಾಸಗೆ ತಾನಾಗಿ ಕೊಡಲು ಸಮರ್ಥ5
--------------
ತುಪಾಕಿ ವೆಂಕಟರಮಣಾಚಾರ್ಯ
ಯಾತಕೀಪರಿ ಚಿಂತೆ ಮನದೊಳಗೆ ಭ್ರಾಂತೆ ಪ ನಡಿಯ ಕಲಿಸಿದರ್ಯಾರು ನುಡಿಗಲಿಸಿ ನಿನಗೆ ಒಡಲಿಗಿಕ್ಕಿದರ್ಯಾರು ಷಡುರಸದÀ ಅನ್ನವ ಕಡುಮಮತೆಯೊಳು ಶಿಲ್ಪ ಬಿನ್ನಣಪ್ಪುದು 1 ಪಂಡಜಗೊಲಿದುಗತಿಯಿತ್ತರಿಯು ಸಲಹುವನು ಭಕುತರ ತಲೆಯಮೇಲಿಟ್ಟಮೃತ ಕರವನು ಶ್ರೀನಿಲಯನಿರುತಿರೆ2 ಪಿಂತೆ ರಾವಣನಳಿದಾನಂತ ಮಹಿಮಳ ಚಿಂತೆಯನು ತಾ ಕಳಿದಾ ಚಿಂತಿಪರ ಮನದೊಳು ಸಂತಸದಿ ತಾನುಳಿದಾ ಅಂತರಿಯೆನಿವನ ಸಂತ ಜನರಿಗೆ ಅಂತಕನ ಭಯವೆಂತು ಒಪ್ಪುದು ಹರಿಯ ನೆನೆಯಲು ನಿಂತು ಶ್ರೀ ನರಸಿಂಹವಿಠಲನಂತರಂಗದಿ ಜಪಿಸುವಾತ್ಮಗೆ 3
--------------
ನರಸಿಂಹವಿಠಲರು
ಸರ್ವವು ಹರಿಗೊಪ್ಪಿಸಿದರೆ ನಿಶ್ಚಿಂತೆ ಗರ್ವದಿಂದಲಿ ವ್ಯರ್ಥ ಕೆಡದಿರು ಭ್ರಾಂತೆ ಪ. ಲೇಶ ಸ್ವತಂತ್ರವನಿತ್ತದ ನಂಬೀ ಶಾಭಿಮಾನದಿ ಮಾಡುವ ಡೊಂಬಿ ದೋಷಗಳಿಂದಾಹ ಫಲವೆ ನೀನುಂಬಿ ವಾಸುದೇವನ ಮೂರ್ತಿಯನೆಂತು ಕಾಂಬಿ 1 ಹಸುತೃಷೆ ನಿದ್ರೆ ತಡೆಯಲೊಲ್ಲಿ ಯಾಕೆ ದಶಕರಣಗಳು ದುರ್ವಿಷಯದಿ ನೂಕೆ ವಶವಿಲ್ಲದಲೆ ಬಿದ್ದು ಬಳಲುವಿ ಯಾಕೆ ವಸುದೇವ ಸುತನ ಮರೆಯದಿರು ಜೋಕೆ 2 ಸತ್ಯ ಸಂಕಲ್ಪನಲ್ಲದೆ ಕರ್ತನಾವ ತತ್ವೇಶರರಿತು ಕರ್ಮವ ಮಾಳ್ಪ ಸೋವ ನಿತ್ಯ ನೀ ವರಿತ ಹಮ್ಮಮತೆಯ ಭಾವ ಹತ್ತದಂತಿರೆ ಕಾವ ಕರುಣಾಳು ದೇವ 3 ಒಡೆಯರಿಲ್ಲದೆ ಪೋದ ವೃಕ್ಷದ ಫಲವ ಬಡಿದು ತಿಂಬುವರು ಕಂಡವರೆಲ್ಲ ನೋಡು ಕರ್ಮ ಮಡದಿ ಮೊದಲುಗೊಂಡು ಕಡಲಶಯನಗರ್ಪಿಸುತ ಕಷ್ಟ ದೂಡು 4 ವಹಿಸು ಭಾರವ ಲಕ್ಷ್ಮೀಕಾಂತನ ಮೇಲೆ ಇಹರಹರಾದರದಿಂದ ತಲ್ಲೀಲೆ ಮಹಿಮೆಯ ಪೊಗಳಿ ತೂಗಾತನೂಯ್ಯಾಲೆ ಅಹಿಪತಿ ಗಿರಿರಾಜ ಎತ್ತುವ ಮೇಲೆ 5
--------------
ತುಪಾಕಿ ವೆಂಕಟರಮಣಾಚಾರ್ಯ