ಭವ ಕೊಳ್ಳವ ಬೀಳದಿರೊ ಪ
ಹರುಷ ವಿಷಾದವು ಮನಸಿನದೆಂಬರೆ | ಮನಕೆ ತಗುಲಿತೆಂತಾ || ಸ್ಪರಿಶ ಶಬ್ದವು ರೂಪವು ರಸ ಗಂಧದಿ | ತೋರಿತು ಭ್ರಾಂತೀ1
ಹಸಿವು ತೃಷವು ಜೀವನದೆಂಬರೆ ಜೀವನಕದು ಉಂಟೇ || ವಿಷಯ ಸುಖವು ಕಳೆದಾನಂದದ ಬೋಧದೊಳಗುಂಟೇ 2
ಜರೆ ಮರಣವು ತನುವಿನದೆಂಬರೆ | ತನುವದು ಒಂದಲ್ಲಾ || ಚಿನುಮಯ ಭವತಾರಕನೊಲಿದರೆ ಶೇಡೋರ್ಮಿಗಳೇನಿಲ್ಲಾ 3