ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೋಕನೀತಿ ಮಾನವ ಭ್ರಾಂತಿಸುಖವ ಪ. ನಂಬಲಾಗದು ಮಣ್ಣಬೊಂಬೆಯಂದದ ದೇಹ ಡಂಭ ಮೋಹಗಳಿಂದ ಮದಿಸುತ ಹಂಬಲಕ್ಕೀಡಾಗುವಂತಿದ ಅ.ಪ. ನೀರಮೇಲಣಗುಳ್ಳೆ ತೋರಿಹಾರುವ ಬಗೆ ಮಾರನಾಟಿದೊಳಾಡುತ ನಲಿಯುತಲಿಕೆ ಸಾರಿಬರೆ ತನಗಪಮೃತ್ಯುಕಾಲವು ಮೀರಿದುಬ್ಬುಸವಾಂತು ಮಿಡುಹುತ ಬೋರಿಡುತ ಬೊಬ್ಬರಿಸಿ ತರಳರ ಸಾರಿಕೂಗುವ ಕಾಯಧಿರವನು 1 ನಾನು ನನ್ನದಿದೆಂದಭಿಮಾನದಿಂ ಮತಿಗೆಟ್ಟು ಜ್ಞಾನವಿಲ್ಲದೆ ಭುವಿಯೊಳ್ ದೀನನಾಗಿ ನಾನಾಪರಿಯಿಂ ಸೊರಗಿ ನರಳುತಿಹ ನೀ ನಿಜವೆಂದು ನಂಬದೆ ಜ್ಞಾನ ಲಾಭದಿ ಮನುಜನೆನ್ನಿಸೆ 2 ಕಾಮಕ್ರೋಧವ ಬಿಟ್ಟು ರಾಮನೊಳ್ ಮನವಿಟ್ಟು ತಾಮಸಬುದ್ಧಿಯನೀಡಾಡುತೆ ಮತ್ತೆ ಶಮದಮಾದಿಗಳನಭ್ಯಸಿಸುತೆ ಕ್ಷಮೆಯನಾಶ್ರಯಿಸುತೆ ಸುಖದುಃಖದೊಳ್ ಕಮಲನಯನ ಶೇಷಾದ್ರಿನಾಥನ | ವಿಮಲ ಪದದೊಳೈಕ್ಯನಾಗಲು ಅಮಭಕ್ತಿಯೆ ಮುಖ್ಯ ಸಾಧನ ನಮಗೆ ಈ ಭ್ರಾಂತಿ ಸಲ್ಲದು 3
--------------
ನಂಜನಗೂಡು ತಿರುಮಲಾಂಬಾ