ಮರಿಯಾದೆ ಅಲ್ಲವೊ ನಿನಗೆ ಮನವೆ ಪ
ಸರಿಯಾಗಿ ನಡೆಯದೆ ನೀ ಚಪಲ ಪಡುವದು ಅ.ಪ
ಪರಧನ ಪರಕಾಮಿನಿಯರ ನೋಡಿ
ಎರಗುತ ತನಗದು ಬೇಕೆಂಬದು 1
ಆಶೆಯಿಂದಲಿ ವೃಥಾಯಾಸವಲ್ಲದೆ ಏನು
ಲೇಸು ಕಾಣೆನು ಬಲು ಘಾಸಿಪಡುವೆ 2
ಮಾತು ಮಾತಿಗೆ ನಾನು ನನ್ನದೆಂಬೋದು 3
ನಿಂತಲ್ಲಿ ನಿಲ್ಲದೆ ಸಂತತ ದುರ್ವಿಷಯ
ಭ್ರಾಂತಿಯೊಳು ಮುಳುಗಿ ಚಿಂತಿಸುವದು4
ಗುರುರಾಮವಿಠಲನ ಸಿರಿನಾಮದ ರುಚಿ
ಸುರಿದು ತೃಪ್ತಿಗೊಳದೆ ಬರಿದೆ ಮರುಗುವೆ5