ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದುವೆ ಕೈವಲ್ಯವು | ಸದ್ಗುರುವೇ | ನಿಮ್ಮಿಂದೆವೆ ಕೈವಲ್ಯವು | ನಂದನ ಕಂದ ಮುಕುಂದನ | ಛಂದದಿ ನೆನೆವುತಾನಂದದಲಿಪ್ಪರಾ ಪ ಭಂಗ ಬಡುವಾ ಭವದಾ | ಚಿರಳಿಯೆನಿಸ್ಸಂಗ ಶಸ್ತ್ರವ ವಿಡಿದಾ | ಹಂಗವಳಿದು ದೇಹದಾ ಪ್ರಪಂಚದ ರಂಗನೊಳಗ ಬೆರೆದಾ | ಅನುದಿನ | ಮಂಗಳ ಹರಿಚರಿತಂಗಳ ಕೇಳುವಗಿಂದೇ 1 ಕಂತು ಪಿತನ ಧ್ಯಾಯಿಸೀ ಮನಸಿನಿಂದಾ | ಅಂತರಂಗದಿಪೂಜಿಸೀ | ಶಾಂತಿಯ ಗುಣ ಧರಿಸೀ | ತಂತು ವಿಡಿದು ನಿಶ್ಚಿಂತದಿ ಇಹಪರ ಭ್ರಾಂತಿಯಳಿದು ವಿಶ್ರಾಂತಿಯ ಪಡೆದವಗಿದೇ2 ಮುಂದಾಗುವ ಮುಕ್ತಿಯನು ಗುರುದಯದಿ | ಇಂದೇಕಾಣುತ ಧನ್ಯನು | ಸಂದೇಹ ವಳಿದನು ತುರ್ಯಾತೀತಾ | ವಂದಿಸಿ ಭಾವದಿ ತಂದೆ ಮಹೀಪತಿ | ದ್ವಂದ್ವ ಚರಣವನು ಹೊಂದಿದ ನಂದನಗಿದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು