ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದ್ಧವನು ಯಮುನೆಗೆ ಪೋಗುವಾಗಗದ್ದಲವ ಕೇಳಿದನು ಗೋಪನಾರಿಯರ ಪ ಎದ್ದು ಗೋಪಿಯರೆಲ್ಲ ಮುದ್ದು ಮುಖವನೆ ತೊಳೆದುತಿದ್ದಿ ತಿಲ್ಕವನಿಟ್ಟು ಬಾಲ್ಯದಲ್ಲೆಶ್ರದ್ಧೆಪೂರ್ವಕ ಹರಿಯ ಪದ್ಮಂಗಳಿಗೆ ನಮಿಸಿಉದ್ಧಾರ ಮಾಡೆಂದು ಪ್ರಾರ್ಥಿಸಿದರು 1 ಅಂಗಳಕೆ ಥಳಿಹಾಕಿ ರಂಗವಾಲಿಯನಿಕ್ಕಿಮಂಗಳಾತ್ಮಕ ದೀಪ ಮನೆಯ ಮುಂದತೆಂಗುಬಾಳೆ ಸ್ತತ್ಥ ಫಲಂಗಳ್ಹೊಸ್ತಲಿಕಿಟ್ಟುರಂಗಗರ್ಪಿತವೆಂದು ನುಡಿದಲಾಗ 2 ವಾಲೆ ಸರಪಣಿಯಾ ಕಿವಿಯಲಿಟ್ಟುಮಂದಹಾಶ್ಯದಿ ಮುಖದಿ ಮುಖರೆನಿಟ್ಟು3 ಕಾಲಿಕಾಲ್ಕಡ್ಗ ರುಳಿಯು ಘಾಲು ಪೈಝಣಕಾಲುಂಗ್ರಗಳು ಪಿಲ್ಲೆ ಕಾಲಿನಲ್ಲೆಸಾಲುಗೆಜ್ಜೆಗಳುಳ್ಳ ಮೇಲೆ ಕಾಂಚಿಯನುಟ್ಟುಮುಕ್ತಮಾಲೆಗಳು ಕೊರಳಲ್ಲೆ ಲೋಲಪದಕ 4 ಕಂಕಣವು ಕರದಲ್ಲಿ ವಂಕಿ ತಾಯಿತ ಭುಜದಿಬಿಂಕದಿಂದಲೆ ಮಂಲಿ ಹೆರಳ್ಹಾಕಿಅಂಕೆಯಿಲ್ಲದ ಸರ್ವಲಂಕಾರಗಳನಿಟ್ಟುಪಂಕಜಾಕ್ಷನ ಮನದಿ ಸ್ಮರಿಸಿದ 5 ಲೋಲಾಕ್ಷಿ ಗೋಪಿಯರು ಭಾಳ ವಸ್ತ್ರಗಳಿಟ್ಟುಲೋಲ ಲತೆಯಂತೆ ಬಳುಕಾಡುತಮಾಲೆ ಹೆಗಲ್ಹಾಡುತಿರೆ ಮೇಲೆ ಸ್ವರಗಳನೆತ್ತಿನೀಲವರ್ಣನ ಮಹಿಮಿ ಪಾಡಿದರು 6 ಬಂಗಾರದ ತಬಕಿನಲಿ ಮಂಗಳಾರುತಿಯೆತ್ತಿಶೃಂಗಾರ ಪದಗಳನೆ ಪಾಡುತಲೆರಂಗು ನೀಲದ ರತ್ನದುಂಗುರವು ಬೆರಳಲ್ಲೆರಂಗಗಾರತಿ ಬೆಳಗಿ ಬೇಡಿದರು 7 ಕಂದರ್ಪ ಶರಾದರತಿ 8 ಘಿಲ್ಲು ಘಿಲುಕೆಂದು ಮೈಯ್ಯಲ್ಲಿ ವಸ್ತ್ರದ ಶಬ್ದಪುಲ್ಲಾಕ್ಷಿಯರು ಕಡಿದ ಮಥನ ಶಬ್ದನಲ್ಲೆರ್ಹಾಡುವ ಕಂಠದಲ್ಲೆ ಗಾಯನದ ಶಬ್ದಎಲ್ಲ ಶಬ್ದವು ಸ್ವರ್ಗ 9 ನಿಂತು ನಿಜಕರದಿಂದ ಮಂತಧಾಮವ ಪಿಡಿದುಕಂತುಪಿತ ಕೃಷ್ಣನ್ನ ಪಾಡುತಲೆಕಾಂತೆರೆಲ್ಲರು ಮಸರು ಕಡೆವ ಶಬ್ದವ ಕೇಳಿಭ್ರಾಂತಿಯಲಿ ಉದ್ಧವನು ನಿಂತನಲ್ಲೆ 10 ಅವರ ಭಕುತಿಯ ನೋಡಿ ಅನುದಿನದಿ ಉದ್ಧವನುಅವರ ಪಾದದ ಧೂಳಿ ಸ್ವೀಕರಿಸಿದಅವರರುಹದೊಳಗೆನ್ನ ಆಗಲುದಯವು ಎಂದಅವರೊಳಗೆ ಅವರಂತೆ ಅನುಕರಿಸಿದ 11 ಇಂಥ ಪರಿಯಲಿ ಗೋಪಕಾಂತೆ ಕಾಲಾಪಗಳುನಿಂತು ನೋಡುತ ತನ್ನ ಮೈಯ್ಯ ಮುರಿದಭ್ರಾಂತನಾಗುತಲೆ ಅವರಂತೆ ಮಥನವ ಮಾಡಿಅವರಂತೆ ಕರಗಳ ಮಾಡಿ ನಲಿದು ಕುಣಿವ 12 ಎರಡು ಸಾಲಲಿ ದೀಪ ಕರಗಳಂಬಾರಗಳುತುರವು ತರಿಸುವ ದನಿಯು ಮಥನ ಶಬ್ದಸರಸಿಜಾಕ್ಷಿಯರೆಲ್ಲ ಗಾಯನ ಮಾಡುವ ಶಬ್ದಬೆರಗಾಗಿ ಕೇಳಿದನು ಪರಿಹರುಷದಿ 13 ಮಂದ ಸುಗಂಧಡಗಿತು 14 ಸರಸಿಜಾಕ್ಷಿಯರೆಲ್ಲ ಪರಮಪುರುಷನ ಸ್ಮರಿಸಿಸುರಿಸುತಲಿ ಕಣ್ಣೀರು ಪರವಶದಲೇನೆರಗು ಬೀಳಲು ಹೊರದೆ ಹೆರಳ ಮಾಲೆಯ ಮರೆದುಬರೆದ ಚಿತ್ರಗಳಂತೆ ಪರಿಯಾದರು 15 ವಾರಿಜಾಕ್ಷಿಯರ್ಹರಿಯ ಧ್ಯಾನಮನದಲಿ ಕೃಷ್ಣಸಾರ ಸುಂದರ ಮೂರ್ತಿಯಳೆ ಕಾಣುತಮದ ಜಾನಕನ ಮಾತನಾಡುತ ಮನದಿಪಾರುಗಾಣದೆ ಸುಖದ ವಾರಿಧಿಯೊಳು 16 ಮನೆಯ ಹಂಬಲವಿಲ್ಲ ಮಾವನಂಕೆಯಿಲ್ಲಮೊದಲೆಯಿಲ್ಲ ಅತ್ತಿ ಪತಿಗಳಂಜಿಕೆಮಾರಜನಕನ ಕೂಡ ಮೈಯ್ಯಕೈಯನ ಮುರಿದುಮಾಧವನೆ ಪಾಲಿಸೆಂದೊದರಿದಾರು 17 ಮಂದಜಾಕ್ಷರು ಮಾಳ್ಪ ನಂದಬಾಲನ ಕಥೆಯಆನಂದದಲಿ ಕೇಳಿ ಉದ್ಧವನುಇಂದಿರೇಶನ ಚರಣ ದ್ವಂದ್ವ ಸ್ಮರಿಸುತಮಧುರೆಲ್ಹಿಂದ ಬಂದ್ಹೇಳಿದನು ನಂದಸುತಗೆ 18
--------------
ಇಂದಿರೇಶರು
ಶಾಂತಿಯೆಂಬುದು ಸಕಲ ಸದ್ಗುಣಂಗಳ ಮುಕುಟ ಶಾಂತಿಯೊಂದಿರಲು ಕೃತಾಂತನಂಜಿಕೆಯಿಲ್ಲ ಪ ಶಾಂತಿಯೆ ಪ್ರದ್ವೇಷ ಕಾಂತಾರ ಪಾವಕವು | ಶಾಂತಿ ಕಾಂತಿಯು ದುರಿತಧ್ವಾಂತ ಓಡಿಸುವದು ಚಾಪ | ಮೊದಲಾದ ದು | ರಂತ ಶಸ್ತ್ರಾಯುಧಗಳು ಶಾಂತಿ ಖಡ್ಗಕೆ ಶರಣು ಹೊಡೆಯುತಿಹವು 1 ಶಾಂತಿಗೊಪ್ಪದ ಕುರುಪ ಭ್ರಾಂತಿಯಲಿ ತನ್ನ ಸಂತತ ಸಹಿತವಾಗಿ ಸಂಗರದಿ ಹತನಾದ ಶಾಂತಿಯಿಂದಲಿ ಧರ್ಮ ಚಿಂತೆಯನು ನೀಗಿದನು ಶಾಂತಿಯಿಂದಲಿ ಸತ್ಯ ಹರಿಶ್ಚಂದ್ರಗಾಧಿಪ ಜನ ಪೌರುಷÀವೆಲ್ಲ ನಿಸ್ತೇಜಗೊಳಿಸಿದನು 2 ಶಾಂತಿಯಲಿ ಭಕ್ತಿ ಮುಕ್ತಿ ಇಂತೆಂದು ವೇದಗಳು ಅಂತ್ಯದಲಿ ತ್ರೈವಾರ ಘೋಷಿಸುತಲಿಹವು ಶಾಂತಮೂರುತಿಯಾದ ಶ್ರೀ ಶಾಮಸುಂದರನು ಶಾಂತಿಗೆ ಮೆಚ್ಚಿ ಅಚ್ಯುತಪದವೀವಾ 3
--------------
ಶಾಮಸುಂದರ ವಿಠಲ
ಸುಮ್ಮನೇಕೆ ಪರದಾಡುವೆಯೊ ಪರ ಬೊಮ್ಮನ ಚರಣಕೆ ಶರಣು ಹೊಡಿ ನಮ್ಮನು ಸೃಜಿಸುವ ಪೊರೆಯುವ ಕೊನೆಯಲಿ ನಮ್ಮನೇ ನುಂಗುವ ಗುಮ್ಮನಿವ ನಮ್ಮ ಶರೀರದೊಳಿರುವ ಯಂತ್ರಗಳು ನಮ್ಮಧೀನವೆ ಯೋಚಿಸೆಲೊ ವಾತ ನಮ್ಮಾಕಾಂಕ್ಷೆಯೆ ಯೋಚಿಸೆಲೊ 1 ಮೂರಂತಸ್ಥಿನ ನೂರು ಸದನಗಳು ನೂರು ರೂಪಗಳು ನಿನಗಳವೆ ಚಾರು ಮನೋಹರ ಸತಿಯಳಿರಲು ಮನ ಕೋರಿಕೆಯವಳಲಿ ಶಾಶ್ವತವೆ ನೂರು ಎಕರೆ ಹೊಲ ಗದ್ದೆ ತೋಟಗಳು ಮೂರು ಲಕ್ಷಗಳು ಬೆಲೆಯಿರಲು ಮೂರು ಚಟಾಕಿನ ಅನ್ನ ಹೊರತು ಅದ ಮೀರಿ ನುಂಗುವುದು ನಿನಗಳವೇ 2 ಶೂರನು ನಾ ಬಲುಧೀರನು ನಾ ಅಧಿ ಕಾರಿಯು ನಾ ಈ ಜಗದೊಳಗೆ ಕೋರಿದ ಜನರನು ಸದೆಬಡಿಯುವೆ ಎನ ಗಾರು ಸಮರು ಈ ಧರೆಯೊಳಗೆ ಕೋರುವ ಸುಖಗಳನನುಭವಿಸುವ ಮಮ ಕಾರದ ಗತಿಯನು ಯೋಚಿಸೆಲೊ ಹೇರಳ ಗಜತುರಗಾದಿ ವಾಹನಗ ಳೇರಿದ ನೀ ಹೆಗಲೇರಿ ಹೋಗುವಿಯೊ 3 ಸಾಸಿರ ಸಾಸಿರ ಬಡ್ಡಿ ಬಾಚಿಗಳ ಬೇಸರವಿಲ್ಲದೆ ಗಳಿಸಿದೆಯೊ ಕಾಸಿನ ಲೋಭಕೆ ಮೂಸಲು ಬಾರದ ಕಾಸಕ್ಕಿ ಅನ್ನವ ನುಂಗಿದೆಯೊ ಲೇಶವು ಗಮನಕೆ ತರಲಿಲ್ಲ ಈ ಸವಿನುಡಿ ಬಲು ಹಳೆಯದೆಂದು ಆಕ್ರೋಶವ ಮಾಡದೆ ಯೋಚಿಸೆಲೊ 4 ಮಾಯವು ತಾ ಈ ಜಗತ್ತಿನ ಜೀವನ ರುಚಿ ತೋರುವುದು ಕಾಯವು ಶಾಶ್ವತವೆಂಬ ಭ್ರಾಂತಿಯಲಿ ಹೇಯ ವಿಷಯಗಳನುಣಿಸುವುದು ಪ್ರಾಯಶರೆಲ್ಲರು ಬಲ್ಲರಿದನು ಬರಿ ಬಾಯಲಿ ನುಡಿಯುವರೊ ಸತತ ಕಾಯವಚನಮನದಿಂದ ಪ್ರಸನ್ನನ ಮಾಯವನರಿತಾಚರಿಪರು ವಿರಳ 5
--------------
ವಿದ್ಯಾಪ್ರಸನ್ನತೀರ್ಥರು
ನರರ ಪಾಡಲು ಬೇಡ ನಾಯಿ ಮನವೆಮುರಹರನ ಭಕುತಿನೆಲೆ ಹೊಂದು ಮನವೆ ಪ.ದಾರಿದ್ರ್ಯ ವ್ಯಸನದೊಳು ಮುಳುಗಿ ನರಧನಿಕರನುಆರಾಧನೆಯ ಮಾಡಿ ಬರಿದೆ ಕೆಡುವೆಘೋರನರಕದ ಭಯಗಳನು ನೋಡೈ ತಿಳಿದುನಾರಸಿಂಹನ ನಂಬು ದೃಢದಿ ಮನವೆ 1ಬಲ್ಲಿದರ ಬಳಿವಿಡಿದು ಪೋಗಿ ಭ್ರಮೆಗೊಳ್ಳದಿರುಭುಲ್ಲೈಸಿ ಬಳಲಿಮೃಗತೃಷೆಯಂದದಿಫುಲ್ಲಲೋಚನ ಹರಿಯ ದಾಸರನು ಅನುಸರಿಸಿಸೊಲ್ಲುಸೊಲ್ಲಿಗೆ ಸುಧೆಯ ಸವಿದುಣ್ಣು ಮನವೆ2ಮದದಿ ಮತ್ಸರದಿ ಪ್ರಜ್ವಲಿಸುತಿಹ ದೇಹದಲಿಕುದಿಯದಿರುತ್ರಿವಿಧತಾಪದಲಿ ಉಕ್ಕಿಹದಿನಾಲ್ಕು ಭುವನದೊಡೆಯನ ನಂಬಿದರೆ ನಿನಗೆಪದವಿತ್ತು ಪೊರೆಯನೆ ಪೇಳು ಮನವೆ 3ಮಂದಮತಿಯಾಗಿ ಬಹುವಿಷಯ ಭ್ರಾಂತಿಯಲಿ ಮದಾಂಧರನೋಲೈಸಿ ಕೃಶವಾದರೆಮುಂದುಗಾಣದೆ ಖಳರು ನೋಯಿಸಿ ನುಡಿದರೆಕಂದಿ ಕುಂದಿ ಬಳಲುವೆಯಲಾ ಮರುಳು ಮನವೆ 4ಮುನ್ನಸಂಚಿತಸುಕೃತವೆಂತುಟೊ ತಂದೆ ಪ್ರಸನ್ನವೆಂಕಟಪತಿಯ ಒಲುಮ್ಯಾಯಿತುಇನ್ನಾದರೆಚ್ಚರಿತು ವಿವಿಧ ಭಕುತಿಯ ಗಳಿಸಿಧನ್ಯ ನೀನೆನಿಸಿ ಸಾರ್ಥಕವಾಗು ಮನವೆ 5
--------------
ಪ್ರಸನ್ನವೆಂಕಟದಾಸರು
ಮರತೆ ಮರತೆ ಪ್ರಪಂಚವ ಎನಗೆ ಈಗಹರಿಯಿತು ಅಜ್ಞಾನದ ಋಣವು ಅಯ್ಯಪಸುರಪತಿಕಲ್ಪವೃಕ್ಷವು ತಾನು ಈಗಸಿರಿಗಿರಿಯನೀಗ ಬಯಸೆನು ನಾನುಪರಮಬಗಳೆ ತಾನಾಗಿಹ ನಾಶವಹಮುರುಕಿ ದೇಹ ಭ್ರಾಂತಿಯಲಿರುವೆನೆ ಕೇಳಕ್ಕಯ್ಯ1ಸತ್ಯವಾದ ಕಾಮಧೇನುವು ಅದು ಈಗಬುತ್ತಿಗೆ ಕೈ ನೀಡುವುದೇ ಕೇಳಕ್ಕಯ್ಯನಿತ್ಯಮಂಗಳೆ ಬಗಳೆಯಾಗಿಹಳು ಸ್ವಪ್ನದಿ ತೆರದಿಮಿಥ್ಯಸಂಸಾರಕೆ ಆಸೆ ಮಾಡುವೆನೆ ಕೇಳಕ್ಕಯ್ಯ2ಚಿಂತೆ ದೂರ ಚಿಂತಾಮಣಿಯನುಕ್ಷುದ್ರ ದೂರ ಕಲ್ಪವೃಕ್ಷವನು ನೆನೆವೆ ಕೇಳಕ್ಕಯ್ಯಚಿಂತಾಯಕ ಚಿದಾನಂದನಾದ ಬಗಳೆ ಇರುವಾಗಎಂತು ಜನನ ಮರಣದ ಚಿಂತೆ ಕೇಳಕ್ಕಯ್ಯ3
--------------
ಚಿದಾನಂದ ಅವಧೂತರು
ಶ್ಲೋ||ಮಣಿಮಂತ್ರೌಷಧವೆಂಬ ಭ್ರಾಂತಿಯಲಿಮಾಯಾಮೋಹದೊಳ್ ಸಿಕ್ಕಿ ತಾಮಣಿಮಾದ್ಯಷ್ಟ ವಿಭೂತಿಯೆಂಬಯ ಸುಜ್ಞಾನಾಂಧರಾಗೆಲ್ಲಿಯುಂಎಣೆಯಾರಿಲ್ಲೆಮಗೆಂದು ಮೋಹಿಸುವ ಈ ಮೂಢಾತ್ಮರಂ ಬೇಗದಿಂಗುಣಮೂರೊಂದಕೊುದು ಪಾಲಿಸುಗೆ ಗೋಪಾಲ ಸಚ್ಚಿದಾನಂದಮಂಮತಿಹೀನನಾಗದಿರೊ ಓ ಜೀವಾಮತಿಹೀನನಾಗದಿರೊ ಪಸುತರ ತನುಧನಗಳ ಹಿತವೆಂದು ನಂಬಿ ನೀ ಅ.ಪಶೃತಿ ಮತಗಳ ಬಿಟ್ಟು ಪ್ರತಿದಿನ ವಿಷಯವೆಗತಿಯೆಂದು ನೆಚ್ಚದಿರೊ ರಾಗದ್ವೇಷಯುತರ ನೀ ಮೆಚ್ಚದಿರೊ ನಿನ್ನ ತೋರದವ್ರತದಿಂದ ಹೆಚ್ಚದಿರೊ ಓ ಜೀವಾ 1ಪರಿಭವವ ಮಾಡುವ ಪರಸೇವೆಗೆಳಸುವಸಿರಿಯ ನೀ ಬೇಡದಿರೊ ಕಾಮುಕನಾಗಿಪರಸತಿಯ ನೋಡದಿರೊ ಮುಂದುಗೆಡಿಪಪರಧರ್ಮವ ಕೂಡದಿರೊ ಓ ಜೀವಾ 2ಧೈರ್ಯವಿಲ್ಲದೆ ನಿನ್ನೊಳಾರ್ಯ ಸಂಗವ ಬಿಟ್ಟುಕಾರ್ಯದೊಳ್ಬೆರೆಯದಿರೊ ಮನದಿಮಾತ್ಸರ್ಯದೊಳ್ ಕೊರೆಯದಿರೊ ಶ್ರೀ ಗೋಪಾಲಾರ್ಯನ ಮರೆಯದಿರೊ ಓ ಜೀವಾ 3
--------------
ಗೋಪಾಲಾರ್ಯರು