ಏತಕೆ ಸಂತತ ಚಿಂತಿಸುವೆ ಪ
ಕೋತಿಗೆ ಮದ್ದಿಕ್ಕಿದ ರೀತಿಲಿ ಮನವೆಅ.ಪ
ಹಾನಿ ವೃದ್ಧಿಗಳು ತಾನಾಗಿ ಬರುವುದು
ಏನೇನು ಮಾಡಲು ಬಿಡಲೊಲ್ಲದು
ಜ್ಞಾನವಿಲ್ಲದೆ ವೃಥಾ ಧೇನಿಸಿ ಧೇನಿಸಿ 1
ದೇಹಸಂಬಂಧಿಗಳ ಮೋಹ ಪಾಶಕ್ಕೆ ಸಿಕ್ಕಿ
ಸಾಹಸ ಮಾಡುವುದೇನು ಫಲ
ಊಹಿಸಿ ನೋಡಲು ಭ್ರಾಂತಿಯದಲ್ಲವೆ 2
ಪೂರ್ವ ಕರ್ಮಾನುಸಾರ ನಡೆಸುವನು ಗರ್ವವಿರಹಿತನು ಗುರುರಾಮವಿಠಲನು 3