ಕಾಕು ದೇಹದ ಮೇಲೆ ಪ
ಲೋಕೇಶ ನಿಮ್ಮಯ ಶ್ರೀಪಾದಕಮಲಕ್ಕೆ
ಜೋಕೆ ಮಾಡೆನ್ನೆಂದು ಮರೆಹೊಕ್ಕೆ ಸ್ವಾಮಿ ಅ.ಪ
ಹೀನ ಬವಣೆಯ ಕಳೆದು ಜ್ಞಾನಪಾಲಿಸೆಂದು
ದೈನ್ಯಬಡುವೆನು ನಿನಗೆ ನಾನಾ ಪರಿಯಲಿಂದ
ಏನು ಕಾರಣ ನಿನಗೆ ದಯ ಬಾರದೆನ್ನೊಳು
ದೀನಜನರ ಬಂಧು ಧ್ಯಾನಿಸುವ ಪ್ರಾಣ 1
ರಿಣದಿ ಮುಕ್ತನ್ನ ಮಾಡೆಂದ್ವಿಧವಿಧ ಬೇಡುವೆ
ದಿನ ದಿನ ಮತ್ತಿಷ್ಟು ಘನವಾಗುತಿಹ್ಯದು
ಮನಸಿಜಪಿತ ನಿನಗಿನಿತು ಭಾರನೆ ನಾನು
ಕನಿಕರಬಡದಿಹಿ ಅನುಗನೋಳ್ವನಜಾಕ್ಷ 2
ಇಂತು ನಿರ್ದಯನಾಗಿ ಚಿಂತೆಯೆಂದೆಂಬುವ
ಚಿಂತೆಚಿತೆಯೊಳು ನೂಕಿ ಎನ್ನ ಭ್ರಾಂತಿಪಡಿಸಬೇಡೋ
ಅಂತ:ಕರಣದ ದೇವ ಅಂತ:ಕರುಣಿಸಿ ಎನ್ನ
ಅಂತರಂಗದೊಳಿಹ್ಯ ಚಿಂತೆಯಳಿ ಶ್ರೀರಾಮ 3