ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೊಂದದಿರುವಿ ಯಾಕೆ ಮನವೆ ಇಂದಿರೇಶನ ಹಿಂದೆ ಮುಂದೆ ಸುಖವನೀವ ಮಂದರಾದ್ರಿಧರನ ಬೇಗ ಪ. ಸುತ್ತಿ ಬರುವಿ ನೀ ಮತ್ತೆ ವಿಷಯದಿ ಎತ್ತಲಾದರೀಶನಂಥ ವೃತ್ತಿ ದೊರೆವುದುಂಟೆ ನಿನಗೆ 1 ತೋಷಗೊಳುವೆನೆಂಬಾಸ್ಥೆ ತಾಳುವಿ ದೋಷಗಳಲಿ ಸಿಲುಕಿ ಬಹಳ ಘಾಸಿಯಾಗಿ ನೊಂದುಕೊಳುವಿ 2 ಅರಿಯದಾದಿ ನೀ ಹರಿಯ ಗುಣಗಳ ಚರಣಪದ್ಮ ಮಧುರ ರಸವ ಸುರಿವ ಸುಖವನೆಂದು ತಿಳಿವಿ 3 ಕೇಳು ನುಡಿಯನು ಕರುಣಾಳು ಒಡೆಯನು ತಾಳ ತನ್ನ ನಂಬಿದವರ ಗೋಳ ಬಿಡಿಸಿ ಸಲಹುತಿಹನು 4 ಭ್ರಾಂತಿಗೊಳದಿರು ಶ್ರೀಕಾಂತನಲ್ಲಿರುಕಂತುಜನಕ ವೆಂಕಟೇಶ ಚಿಂತಿತಾರ್ಥವಿತ್ತು ಕಾವ 5
--------------
ತುಪಾಕಿ ವೆಂಕಟರಮಣಾಚಾರ್ಯ