ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದ ನಂಬಿದೆ ಜನಕೆ ಪಾರುಗಾಣಿಪ ಪರಮ ಕರುಣಿ ಶ್ರೀ ಧೀರೇಂದ್ರವರ್ಯಾ ಪ ನಿತ್ಯ ಅನವರತ ಭಕ್ತಿಯನೆ ಇತ್ತೆನ್ನ ಕಾಯೆಯ್ಯ ಕರುಣಾನಿಧೆ ಅ.ಪ. ವಸುಧೀಂದ್ರ ಕರಕಮಲ ಸಂಜಾತ ವಸುಧೆಯೊಳು ವಾಸವಾಗಿಹ ಭಕ್ತ ಜನಕೆಲ್ಲಾ ವಾಸವಾನುಜ ಶ್ರೀ ವಾಸುದೇವನ ಸರ್ವಜಗಕೆಲ್ಲಾಪಾಯನೆಂಬಾ ವಾಸುದೇವನ ಮತವ ಬೋಧಿಸುತೆ ಸಾತಾರಾ ಪುನಯಾದಿ ನಗರದ ವಾದಿಗಳನೆಲ್ಲಾ ವಾದದಿಂದಲಿ ಗೆದ್ದು ಬಹುಮಾನವನೆ ಪಡೆದು ಮಹಿಯೊಳಗೆ ಬಹು ಖ್ಯಾತಿ ಪಡೆದ ಮಹಾಮಹಿಮ 1 ಭೂರಮಣ ಶ್ರೀಕಾಂತ ಬಹುಕೋಪದಿಂದಲಿ ಕೋದಂಡಪಾಣಿಯಾಗಿ ಭವಜನಕೆ ಮೋಹವನೆ ಬೀರುವಾ ಸಮಯದಲಿ ಬಹು ಭ್ರಾಂತಿಗೊಂಡು ಇರಲು ಭಾರತೀಶನ ದಯದಿ ಭಾಗೀರಥಿಯ ಕೂಡಿ ಬಹುಭಕ್ತಿಯಿಂದ ಒಲಿಸಿ ಭೂಮಿಜೆಯ ಕಳ್ಳನನೆ ಸಂಹರಿಪ ಕಾರ್ಯದಲಿ ಬಹುಸೇವೆಗೈದಂಥ ಪುಣ್ಯಶಾಲಿ 2 ಶ್ರೀರಮಣನಾಜ್ಞೆಯಲಿ ಭಜಿಪ ಭಕ್ತರಿಗೆಲ್ಲ ಬೇಡಿದಿಷ್ಟಾರ್ಥಗಳ ಸಲಿಸುತ್ತಲೀ ಶ್ರೀಕೃಷ್ಣಭಕ್ತರಿಗೆ ಕೃಷ್ಣವಾಗಿಹ ಮನವ ಉತ್ಕøಷ್ಟಗೈಯ್ಯುತ್ತಲೇ ಶ್ರೀಸುರಪನಾಯಕೆ ಸರಿಮಿಗಿಲು ಎಂದೆನಿಪ ಬಹುಭಾಗ್ಯವನ್ನೆ ಪಡೆದು ಶ್ರೀಗುರುತಂದೆವರದ-ಗೋಪಾಲ ಅಸಿ ಬಿಟ್ಟು ಬಿಡದಲೆ ಭಕ್ತಿಯಿಂ ಭಜಿಪ ಗುರುವರ್ಯ 3
--------------
ಸಿರಿಗುರುತಂದೆವರದವಿಠಲರು
ಭಾರ ನಮ್ಮಪ್ಪನಿಗೀ ಸಂಸಾರ ಉಪ್ಪಿನ ಹೇರಂತಿದು ಬಹುಕ್ಷಾರ ಕೈ- ತಪ್ಪಿದರೆ ಬಾರದು ಸಣ್ಣ ಚೂರಾ ಪ. ಅಗಳಿನಾಶೆಗೆ ಪೋಗಿ ನಿಗಳ ಕಂಠಗೆ ಸಿಲುಕಿ ನೆಗೆದು ಬೀಳ್ವ ಮಚ್ಛ್ಯಗಳಂದದಿ ಬಹು ಹಗರಣಗೊಳ್ಳುತ ಮರುಳಾಗಿಹೆನು 1 ಬಾಲಬುದ್ಧಿಯೊಳೆರಡು ಶಾಲೆ ಕೊಂಡರೆ ಪರರ ಮೇಲೊಡ್ಡುತ ಬಹು ಸಾಲಗಾರನೋಲೆ ಕೋಳುಗೊಂಬನು ಪಂಚಗೋಲ ಸುಖತಿಯಲಿ 2 ಪುಣ್ಯಕರ್ಮವ ಮಾಡಿ ತನ್ನದೆಂದರೆ ನಿಲದು ದಾನವರೊಯ್ವರು ಘನಪಾತಕಗಳು ಬೆನ್ನ ಬಿಡವು ಮಕ್ಷಿಕಾನ್ನದಂತಿಹವು 3 ಕರ್ಮಶಾಸ್ತ್ರವ ಗಹನ ಮರ್ಮವ ತಾಳದ ನರನಾ ನಿರ್ಮಲ ಮಾಡಲು ಚವರ್i ತೊಳಿಯೆ ದು- ಷ್ಕರ್ಮ ಕಲುಷವನು ನಿರ್ಮೂಲಗೊಳಿಸದೆ 4 ಹೇಸಿಕೆ ಜೊಲ್ಲಿನ ಮುಸುಡಾ ಹಾಸಿಕೆಯಿಂದೆತ್ತುತಲಿ ದೂಷಿಸುತನ್ಯರ ಮೀಸೆಯ ತಿರುಹುತ ಲೇಸಗಾಣದೆ ಬಹು ಮೋಸಗೊಂಡಿಹೆನು 5 ಹಸ್ತಪಾದಾದಿಗಳ ಮೃತ್ತಿಕೆಯಿಂದಲಿ ತೊಳೆವ ತತ್ವ ನೋಡಲು ಕಣ್ಣು ಕತ್ತಲೆ ಬರುವುದು ಕತ್ತೆಗೆ ಷಡ್ರಸವೆತ್ತಲು ದೊರೆಯದು 6 ಸ್ನಾನದ ರೀತಿಯನಿನ್ನೇನೆಂದು ವರ್ಣಿಪೆನು ಮಾನವರಿದಿರು ನಿಧಾನದಿ ನಡೆವುದು ಮಾನಸ ವೈಶಿಕಧಾನಿಯಾಗಿಹುದು 7 ಮಡಿಯೆಂದು ಕೂತಿರಲು ಮಡದಿ ಹತ್ತಿರ ಬರಲು ಒಡವೆಯ ನೋಡುತ ಅಡಿಗೆಯ ಪಣ್ಕೆಯ ನುಡಿಯಲ್ಲದೆ ಜಪಗೊಡವೆಯೇನಿರದು 8 ಪಾಕ ಪೂರಣವಾಗೆ ಈಗ ಸಾಕೆಂಬೆ ಹರಿಪೂಜೆ ಶಾಕಾದಿಗಳು ವಿವೇಕವಾಗದಿರೆ ಭೀಕರಿಸುತ ಅವಿವೇಕನಾಗುವೆನು 9 ತದನಂತರದಿ ಪರರ ಕದನವನೆಬ್ಬಿಸುತಲಿ ಒದಗುತ ನಾನಾ ವಿಧದಲಿ ಎನ್ನಯ ವದನ ತುಂಬುವ ಮಾರ್ಗದಿ ದಿನ ಕಳೆವೆನು 10 ಇಂತು ದಿವಾಯುಷವನ್ನು ಸಂತರಿಸುತ ನಿಶೆಯೊಳ್ ಕಂತು ಕಲಾಪದ ಭ್ರಾಂತಿಗೊಂಡು ಮರ ದಂತೆ ಬೀಳಲು ನಿಮಿಷಾಂತರ ದೊರೆಯದು 11 ಪಾರಾವಾರದಕಿಂತ ಘೋರವಾಗಿರುವೀ ಸಂ- ಸಾರದಿ ಸಿಲುಕಿದರ್ಯಾರು ಕಾವರಿಲ್ಲ ಶ್ರೀರಮಾಪತಿ ಚರಣಾರವಿಂದವೆ ಗತಿ 12 ಈ ವಿಧ ದುಷ್ಕøತದಿಂದ ಕಾವನು ನೀ ಗೋವಿಂದ ಪಾವನಾತ್ಮಕ ಶೇಷಾವತಾರ ಗಿರಿ ಭವ ನಾವ ಮುಕುಂದ 13
--------------
ತುಪಾಕಿ ವೆಂಕಟರಮಣಾಚಾರ್ಯ