ಒಟ್ಟು 8 ಕಡೆಗಳಲ್ಲಿ , 5 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ಮೀರುವೆ ಮಾಯವಾ ಪ. ಮಾಯಾ ಕಂತು ಕಂತು ಜನಕ ಹರಿಯೆ ಸಂತತ ಗೃಹಧನ ಭ್ರಾಂತಿಗೆ ಸಿಲುಕುತಾ ತಂತ್ರವಾದೆನು ಸರ್ವತಂತ್ರ ನೀ ಕರುಣಿಸು ಅ.ಪ. ದೇಹವೆ ನಾನೆಂಬ ಮೋಹದಿ ಬಹು ವಿಧ ಮೋಹಗೊಂಡನುದಿನವು ಆಹಾರ ನಿದ್ರಾ ಮೈಥುನಗಳೆ ಗತಿ ಎಂಬ ಹಾಹಾಕಾರವು ಬಿಡದು ಇಹಪರಗಳ ಸನ್ನಾಹ ಒಂದನು ಕಾಣೆ ಗೇಹಾಂಧಕೂಪಮಹಾಹಿಮುಖದಿ ಸಿಕ್ಕಿ 1 ವೇದವಿಹಿತ ಕರ್ಮವಾದರು ಮಾಡದೆ ಸಾಧು ಮಾರ್ಗವ ಮೀರಿದೆ ಮಾದಿಗನಂತೆ ಮನಸಿನಲಿ ಬಹು ವಿಧ ಕಪಟ ತಾಳಿದೆ ವ್ಯಾಧಿ ಪೀಡಿತ ದೇಹ ಬಾಧೆಯ ಸಹಿಸದೆ ಶ್ರೀದ ನಿನ್ನಯ ಪದ್ಮ ಪಾದವೆ ಗತಿಯೆಂಬೆ 2 ಮತಿವಂತ ಜನರ ರಕ್ಷಿಪುದು ದುರ್ಘಟವೆ ಶ್ರೀ- ಪತಿ ನಿನಗುಸುರುವದೆ ಶತಕೋಟಿ ಮಿತ ಜನ್ಮಾರ್ಜಿತ ಪಾಪ ತತಿ ನೀ ಸಂ- ಸೃತನಾಗೆ ನಿಲುವುಂಟೆ ಪತಿತ ಪಾವನನೆಂಬ ಪರಮಾತ್ಮ ಶೇಷಾದ್ರಿ ಪತಿ ನೀನೆ ಗತಿಯೆಂದು ಸತತ ನಂಬಿದೆ ದೇವ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಮಲ ಪರ ಭವ ಬಂಧ ನಮಗೆಕುಹಕ ಬುದ್ಧಿಯಲಂದು ಬಯಲ ಭ್ರಾಂತಿಗೆ ಸಂದುಬಹು ದುಃಖಬಟ್ಟುದ ನೆನೆದು ನಾವಿಂದು 1ತನುವಿದನೆನಿತು ಪೋಸಲು ಮತ್ತೆವನಿತಾದಿ ಜನರ ನಂಬಿರಲುಧನ ತನ್ನದೆಂದು ಬಚ್ಚಿಡಲು ಭೋಗಕನುಕೂಲವಾುತೆಂದೆನಲುತನುವಳಿುತು ಜನ ಸಡಿಲಿತು ಗಳಿಸಿದಧನ ಹೋುತನುಮಾನವೇತಕಿನ್ನಿನಿತು 2ಸುಖವೆಂಬದು ದುಃಖ ತಿಳಿಯೆ ಮದಮುಖರಾಗದಿರಿ ಮನವೆಳೆಯೆಸುಖಪರಿಪೂರ್ಣನು ಹರಿಯೆ ುನ್ನುಸುಖವುಂಟು ನಮಗಾತನೊಲಿಯೆಸಕಲ ಲೋಕೇಶ ಶ್ರೀ ತಿರುಪತಿ ವೇಂಕಟೇಶನಕುಟಿಲ ಭಕುತರಿಗುಂಟು ಸಂತೋಷ 3ಓಂ ಶ್ರೀ ಹರಯೇ ನಮಃ
--------------
ತಿಮ್ಮಪ್ಪದಾಸರು
ನೋಡಿರೈ ಜನಾ ರಂಜನೆಯಲ್ಲಿ | ನೋಡಿರೈ ಜನಾ | ಮಾಡದೆ ಹಿರಿಗುರು ಭಕ್ತಿಯ ಶೀಲದಿ | ರೂಢಿಯ ಡಂಭಕ ಹರಿದಾಡುವದು ಪ ಸಾಧು ಸಂತರ ಮನೆಯಲ್ಲಿ | ಆದರವಿಲ್ಲಾ ಮನದಲ್ಲಿ | ಮೇದಿನಿಯಲಿ ನುಡಿಸಿದ್ಧಿಯ ಹೇಳಲು | ಸಾಧಿಸಿ ಹೋಗುತ ಬಾಗುತಲಿಹುದು 1 ಚಂದನವಿಡಿದು ತೆಯ್ವಲ್ಲಿ | ಒಂದು ಬಾರದು ನೊಣವಲ್ಲಿ | ಕುಂದದೆ ಎಂಜಲ ತೊಳೆವಾಸ್ಥಳದಲ್ಲಿ | ಸಂದಿಸಿ ಮುಕುರುವ ಸಂದಲಿ ಯಂದದಿ 2 ಪರಗತಿ ಸಾಧನ ವರಿಯರು | ಬರಿದೆ ಭ್ರಾಂತಿಗೆ ಬೆರೆವರು | ಗುರುಮಹಿಪತಿಸುತ ಪ್ರಭು ಕಲ್ಪತರು | ಸೇರದೆ ಬೊಬ್ಬುಲಿ ಮರಕೆಳಗಾಡುವ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡು ನೋಡು ನಿನ್ನ ಹಿತವಾ ಪ ಇಂದು ನರದೇಹದಲ್ಲಿ ಬಂದುದೇನೋ | ಒಂದು ಪಥವರಿಯದಾ ಛಂದವೇನೋ ಅ.ಪ ಗುರುವಿನಂಘ್ರಿಯ ಕಂಡ ಗುರುತ ಅನುಭವನುಂಡ ಸೈಸ್ಯೆ | ಕರುವೇ ಬಾರೆನ್ನುತಾ ಸೈಸ್ಯೆ | ಶರಣ ಬಾರೆನ್ನುತಾ ಸೈಸ್ಯೆ | ಹರಿಯ ಭಕ್ತ ನೆನ್ನುತಾ ಧರಿಯೊಳ್ಹೀಂಗ ಹಿರಿಯರಿಂದ | ಕರಿಸ ಕೊಳ್ಳಲಾಗದೇ | ಬರಿದೆ ಭ್ರಾಂತಿಗೆ ಬಿದ್ದು | ಬರಡ ಜನ್ಮ ಮಾಡ ಬ್ಯಾಡಾ 1 ನೀಗಿ ಕೇಳು ಕೇಳು | ಆದಿ ಸನ್ಮಾರ್ಗವ ಕೇಳು ಕೇಳು | ಸಾಧನವ ಬಲಿಯೋ ನೀ | ಕಂದ ಭೂಮಿಯ ಮೇಲೆ ಹನಿ ಮಾಡದೇ 2 ಗುರುಮಹಿಪತಿಸ್ವಾಮಿ ಅರ್ಹವಿನೊಳಗೆರಕವಾದ ಧೀರ ಧೀರ| ನೀರು ಪದ್ಮ ಹೋಲುವಾ ಎರಡು ಸಮನಿನಿಸಿ ಸುಖ | ಭರಿತರಾದ ಪರಿಯಲಿ ಹರಿಯ ಧ್ಯಾನ ಬಲಿಯೋ ಮೈಯ್ಯ | ಮರೆಯಬೇಡಾ ಮನವೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬರುದೆ ಭ್ರಮೆಯಗೊಂಡ್ಯೊ ಮರುಳ ಮನುಜ ನೀನು ಧ್ರುವ ಎರವ್ಹಿನ ಮನೆಯೊಳು ಮರಹು ಮರೆಯಗೊಂಡು ಗರವು ಹಿಡಿದು ನಿನ್ನ ಕುರುಹು ತಿಳಿಯಲಿಲ್ಲ ಹರೆದು ಭ್ರಾಂತಿಗೆ ಬಿದ್ದು ಸೊರಗಿ ದಣಿದೆಲ್ಲ 1 ಏನು ಮರುಳಗೊಂಡ್ಯೊ ಹೀನಯೋನಿಯ ಮುಖಕೆ ಕಾನನದೊಳು ಪೊಕ್ಕು ಖೂನ ತಿಳಿಯದೆ ನಿನ್ನ ಜನುಮಜನುಮ ಬಂದ್ಯೊ ಜ್ಞಾನಶೂನ್ಯದಲಿ 2 ನಾನು ನನ್ನದು ಎಂದು ಏನು ಗಳಿಸಿಕೊಂಡ್ಯೊ ಸ್ವಾನುಭವದ ಸುಖ ಅನುಭವಿಸದೆ ಹೋಗಿ ಸ್ವಾನ ಸೂಕರಯೋನಿ ಮುಖಸೋಸಿದೆಲ್ಲ 3 ಹೊನ್ನು ಹೆಣ್ಣಿನ ಸವಿಯು ಬಣ್ಣಿಸಿ ನೀ ಬಯಸಿದಲ್ಲ ಮಣ್ಣೇ ಮಾಣಿಕವೆಂದು ದಣ್ಣನೆ ದಣುವರೆ ಕಣ್ಣಗೆಟ್ಟರೆ ಬ್ಯಾಡೊ ತನ್ನೊಳರಿಯದೆ 4 ಮುತ್ತಿನಂಥ ಜನುಮ ವ್ಯರ್ಥಗಳಿಯಬ್ಯಾಡ ಪಾದ ಬೆರ್ತು ಮಹಿಪತಿ ಪೂರ್ಣ ಸಾರ್ಥಕ ಮಾಡಿಕೊಳ್ಳೊ ಗುರುತುವರಿತು ನೀ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವೇದಾಂತ ಸಾಮ್ರಾಜ್ಯ ರಾಜಾಧಿರಾಜ ತೇಜೋಮಯರ ಪಾದಾಬ್ಜನೇ ಶರಣಪ ರಾಜಾಧಿರಾಜ ಕರಾರ್ಚಿತ ಚರಣ ಪ್ರಾಜ್ಯಪ್ರಜ್ಞರ ಶುದ್ಧಕುಲ ದಿವ್ಯಾಭರಣ ಅ.ಪ ಭ್ರಾಂತಿಗೆ ನಿಧನ ಸುಖಶಾಂತಿಗೆ ಸದನವೇ ದಾಂತಿಯ ಮಾನಸ ಕಾಂತಿಗೆ ಸಾಧನ 1 ಇಂದಿರಾಪತಿಯ ಆನಂದಾದಿ ಸದ್ಗುಣ ವೃಂದ ತೋರಿದ ಶೇಷಚಂದ್ರಿಕಾಚಾರ್ಯ 2 ಹಿರಿದು ನಿಮ್ಮಯ ವ್ಯಾಪ್ತಿ ಕಿರಿದು ಎಮ್ಮಯ ಶಕ್ತಿ ಪರಮ ಪ್ರಸನ್ನ ಶ್ರೀಗುರು ಸಾರ್ವಭಾಮ 3
--------------
ವಿದ್ಯಾಪ್ರಸನ್ನತೀರ್ಥರು
ವ್ಯರ್ಥ ದೂರುವರೀಶನಾ ವ್ಯರ್ಥದೂರುವರೈಯ್ಯಾ ಮರ್ತು ತಮ್ಮವಗುಣ ಮರ್ತ್ಯಲಾಭಾ ಲಾಭಾ ಕರ್ತ ಮಾಡುವೆನೆಂದು ಪ ಕಣ್ಣು ಕಿವಿ ನಾಲಿಗಿನ್ನು ನಾಶಿಕಕೊಟ್ಟು ಸನ್ನುತ ಹರಿಕಥೆ ಕೇಳು ಯನ್ನಸ್ತುತಿ ಸುನಿರ್ಮಾಲ್ಲ್ಯುನ್ನತ ತುಳಸಿ ವಾಸನಾಘ್ರಾಣಿಸೆಂದು ಮುನ್ನೆಂದನಲ್ಲದೇ ಆನ್ಯದೈವ ನೋಡೆಂದನೇ ಪಿಶುನರ ಅನ್ಯಾಯವ ಕೇಳೆಂದನೇ ಉದರಕಾಗಿ ಮಾನವ ಹೊಗಳೆಂದನೇ ಭೋಗದ ತನ್ನಗೋಸುಗ ದ್ರವ್ಯ ಆಘ್ರಾಣಿಸೆಂದನೆ 1 ಮಂಡಿತ ಸಿರಸದೋರ್ದಂಡ ಕರಚರಣ ಚಂಡ ಮನಗಳಿಂದಾ ಖಂಡ ನಮಿಸಿ ಸೇವೆ ಪುಂಡಲೀಕದ ಪರಿಗಂಡು ನೃತ್ಯಾದಿಯ ಬೋಧ ಮನನ ಪಂಡುಂಡ ಮಾಡೆಂದ ಮಂಡಿ ಬಿಗಿದರೆಂದನೇ ಜನರಿಗು ದ್ವಂದದಿ ಹೊಡಿಯಂದನೇ ಧನಿಕರ ಕಂಡು ಭ್ರಾಂತಿಗೆ ಬಿದ್ದು ಚಿಂತಿಸುಯಂದನೆ 2 ನಿತ್ಯ ವರಿತು ಸತ್ಯಜ್ಞಾನೌಷದ ಉತ್ತಮ ರಸಾಯನ ಅತ್ತಿತ್ತಲಾಗದೇ ಕೊಂಡು ಇತ್ತ ಭವರೋಗ ವಿಪತ್ತದ ಕಳೆಯೆಂದ ಮತ್ತ ಮಹಿಪತಿ ಸುತ ಹೃತ್ತಾಪಹಾರಿ ಕು ಚಿತ್ತ ನೀನಾಗೆಂದನೇ ಸತ್ಸಂಗ ನಿತ್ಯ ಮಾಡಿರೆಂದನೇ ಬರಿದೆನೀ ಮೃತ್ಯು ದೇವತೆ ಬಾಯ ತುತ್ತಾಗುಯಂದನೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಿದ್ಧ ನೋಡಿರೋ ಸಾಕ್ಷಾತ್ಕಾರವ ಧ್ರುವ ಸಾಧುಕಾ ದಸ್ತ ಪಂಜ ಲೇಣಾ ಸಾಧುಕೆ ಸಂಗ ಕರನಾ ಸಾಧ್ಯವಾಗದು ಸದ್ಗುರು ಕರುಣಾನಿ ಧರಿಯೊ ಜಾಣಾ 1 ಬಾಹ್ಯಾಂತ್ರಿ ಜೋ ಪಾಹೆ ಗೋವಿಂದಾ ಇಹಪರ ಅವಗಾನಂದಾ ದೇಹಭ್ರಾಂತಿಗೆ ಸಿಲಕದೆಂದಾ ವಹೀ ಖುದಾಕಾ ಬಂದಾ 2 ಪಾಕದಿಲ್ಲಾ ಸುಜೀರ ಕರಣಾ ಯಕೀನ ಸಾಬೀತ ರಾಹಾಣಾ ಟಾಕ ತ್ಯಾಭವ ಮೀ ತೂ ಪಣಾ ಐಕ್ಯವಿದು ಭೂಷಣಾ 3 ನಿಸದಿನ ಕರಿಮಕ ಹೊಯಾರಾ ವಾಸುದೇವ ಸಾಹಕಾರಾ ವಿಶ್ವವ್ಯಾಪಕಾ ಮ್ಹಣುನಿ ಸ್ಮರಾ ಲೇಸು ಅವನ ಸಂಸಾರಾ 4 ಮೂವಿಧ ಪರಿಯಲಿ ಹೇಳಿದ ಭಾಷಾ ಮಹಾಗುರುವಿನ ಉಪದೇಶಾ ಮಹಿಪತಿಗಾಯಿತು ಭವ ಭಯ ನಾಶಾ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು