ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿಂತೆಮಾಡಲಿ ಬೇಡೋ ಮನವೇ ಭ್ರಾಂತಿಪಡಲಿ ಬೇಡೋ ಪ ಚಿಂತೆಭ್ರಾಂತಿಗಳೆಲ್ಲ ಕಂತುಜನಕಗೆಂದು ಸಂತಸವಹಿಸು ನಿನಗೆಲ್ಲಿದೆ ಕೇಡೋ ಅ.ಪ ಮಾನವಮಾನವೆಲ್ಲ ಮನವೆ ಹೀನಭಾಗ್ಯ ಸಕಲ ಧ್ಯಾನದಾಯಕ ಶ್ರೀವೇಣುಗೋಪಾಲಗೆಂದು ಆನಂದ ತಾಳುಮತ್ತ್ಹಾಳು ನಿನಗಿಲ್ಲೋ 1 ದು:ಖ ಸಂಕಟವೆಲ್ಲ ಮನವೆ ಮಿಕ್ಕ ಕಂಟಕವೆಲ್ಲ ಅಖಿಲವ್ಯಾಪಕ ಶ್ರೀಭಕುತಿದಾಯಕಗೆಂದು ಸುಖವಹೊಂದು ಮತ್ತು ದು:ಖ ನಿನಗಿಲ್ಲೋ 2 ಕುಂದು ನಿಂದೆಯೆಲ್ಲ ಮನವೆ ತಾಪ ನಿಖಿಲ ಸಿಂಧುನಿಲಯ ನಮ್ಮ ತಂದೆ ಶ್ರೀರಾಮನಿಗೆಂದು ನಂಬು ಭವಬಂಧ ನಿನಗಿಲ್ಲೋ 3
--------------
ರಾಮದಾಸರು
ಭವ ಬಿಡಿಸಯ್ಯ ಹರಿ ನಿನ್ನ ನಾಮ ದೃಢವಾಗಿ ನುಡಿಸಯ್ಯ ಬಿಡದೆ ಸನ್ಮಾರ್ಗದಿ ನಡೆಸಯ್ಯ ದೇವ ಗಡ ನಿನ್ನ ಕೃಪಾಕವಚ ತೊಡಿಸಯ್ಯ ಪ ಹಾಳು ಭ್ರಾಂತಿಗಳೆಲ್ಲ ಕೆಡಿಸಯ್ಯ ಎನ್ನ ಕೀಳುಯೋಚನೆ ಸರ್ವ ಕಡಿಸಯ್ಯ ಜಾಳು ಪ್ರಪಂಚದಾಸೆ ತಿಳಿಸಯ್ಯ ಸ್ವಾಮಿ ಮೂಳಮಾನವರ ಮಾತು ಮರೆಸಯ್ಯ 1 ನಿತ್ಯ ಸುಜನರೊಳಿರಿಸಯ್ಯ ಎನ್ನ ಸತ್ಯ ಶರಣರೊಳಾಡಿಸಯ್ಯ ಅರ್ತಿಯಿಂ ತತ್ವರ್ಥ ತಿಳಿಸಯ್ಯ ಎನ್ನ ಮಿಥ್ಯಗುಣಂಗಳನ್ನು ಹರಿಸಯ್ಯ 2 ಕೋಪತಾಪಂಗಳ ವಧಿಸಯ್ಯ ಎನ್ನ ಪಾಪ ಮಾಫಿಗೊಳಿಸೆನ್ನಯ್ಯ ಕೋಪಿ ಪಾಪಿಗಳಿಂದುಳಿಸಯ್ಯ ನಿನ್ನ ಗೌಪ್ಯದ ಧ್ಯಾನ ಮುನ್ನ ತಿಳಿಸಯ್ಯ 3 ಭೂತಪ್ರೇತದಂಜಿಕ್ಹರಿಸಯ್ಯ ತಂದೆ ಜಾತಿಭೀತಿ ಮೊದಲ್ಹಾರಿಸಯ್ಯ ನೀತಿಶಾಂತಿ ಸ್ಥಿರ ನಿಲ್ಲಿಸಯ್ಯ ಎನ್ನ ತಾತ ಮಾತೆ ನೀನೆ ನಿಜವಯ್ಯ 4 ನರರಿಗೆ ಎರಗಿಸದಿರಯ್ಯ ಎನ್ನ ಶಿರ ನಿನ್ನ ಚರಣದಿ ಇರಿಸಯ್ಯ ಪರಲೋಕಸಾಧನ ತೋರಿಸಯ್ಯ ಎನ್ನ ಶರಣ ನೀನಾಗು ಶ್ರೀರಾಮಯ್ಯ 5
--------------
ರಾಮದಾಸರು
ಶ್ರೀಶನು ತನ್ನಯ ದಾಸತ್ವ ಕೊಟ್ಟೆನ್ನ ಧ್ಯಾಸದಿ ಬಂದು ಸ್ಥಿರಮಾದ ಪ ಧ್ಯಾಸದೊಳಗೆ ಬಂದು ಸ್ಥಿರವಾಗಿ ನಿಂತಿನ್ನು ನಾಶನ ಜಗದಾಸೆ ಎನಗೇನೆ ಅ.ಪ ಸುಂದರಮಾದ ಸುಸಂಧಿಯೆನಗೆ ಫಲಿಸಿತು ಸುಕೃತ ಫಲದಿಂದೆ ಸುಕೃತ ಫಲದಿಂದ ಎನ್ನಗೆ ತಂದೆ ಗೋವಿಂದ ತಾನೆ ಗೋವಿಂದ 1 ಕೆಟ್ಟ ಬವಣೆಯಿಂದ ಕೆಟ್ಟು ಹೋಗುತಲಿರ್ದೆ ಸೃಷ್ಟೀಶ ದಯದಿ ನೋಡಿದ ಸೃಷ್ಟೀಶ ದಯದಿಂದ ನೋಡಿ ಮುಂದಕೆ ಕರೆದು ನೆಟ್ಟನ ಮಾರ್ಗಕೆ ಹಚ್ಚಿದ 2 ಸಾಧ್ಯವಲ್ಲಾರಿಗೀತಸಾಧ್ಯಮಾಗಿ ತಾನೆ ಸಾಧ್ಯವಿಲ್ಲದ ಸುದ್ದಿ ತಿಳಿಸಿದ ಸಾಧ್ಯವಿಲ್ಲದ ನಿಜ ಸುದ್ದಿ ತಿಳಿಸಿ ಪರಿ ಶುದ್ಧನ್ನ ಮಾಡಿ ನಿಲಿಸಿದ 3 ಮೂಲೆಗೆ ಬಿದ್ದ್ವೊಸ್ತು ಮೇಲಕ್ಕೆ ಎತ್ತಿ ತವ ಲೀಲೆ ನಾಲಗೆಮೇಲೆ ಬರೆದನೆ ಲೀಲೆ ನಾಲಗೆಮೇಲೆ ಬರೆದೆನ್ನಜ್ಞಾನ ಕಾಳೆಂಬ ಕತ್ತಲ ಕಳೆದನೆ 4 ಮಂತ್ರಮೂಲನು ಸರ್ವಾಂತರ್ಯಾಮಿಯು ಸ್ವ ತಂತ್ರ ತಾನೆಂಬ ನಿಜ ತಿಳಿಸಿದ ಸ್ವ ತಂತ್ರ ತಾನೆಂಬ ನಿಜ ತಿಳಿಸಿ ಎನಗನ್ಯ ಚಿಂತೆ ಭ್ರಾಂತಿಗಳೆಲ್ಲ ಬಿಡಿಸಿದ 5 ಮರವೆಯ ಹಾರಿಸಿ ಕರುಣಿಸಿ ಸ್ಥಿರಜ್ಞಾನ ಪರಿಭವ ದು:ಖ ಪರಿಹರಿಸಿದ ಪರಿಭವ ದು:ಖ ಪರಿಹರಿಸೆನಗೆ ಸ್ಥಿರವಾದ ಪರಲೋಕದರಿವು ನಿಲಿಸಿದ 6 ಆಶದಿ ಬಿದ್ದು ನಾ ದೇಶದೇಶವ ತಿರುಗಿ ಬೇಸತ್ತು ಬಾಯ ಬಿಡುತಿರ್ದೆ ಬೇಸತ್ತು ಬಾಯ ಬಿಡುತಿರ್ದೆ ಕಂಡೆನ್ನಯ್ಯ ಲೇಸಾದ ಪದವಿ ತೋರಿಸಿದ 7 ಜಗಸುಖಕೊಲತಿದ್ದೆ ಜಗದಾತ್ಮನು ಈಗ ಜಗದ್ಹಗರಣ ತೋರಿಸ ನಗಿಸಿದ ಹಗರಣ ತೋರಿಸಿ ನಗಿಸಿದಚಲಸೌಖ್ಯ ಬಗೆ ತೋರಿ ಜಗಸುಖ ಮರೆಸಿದ 8 ಏನೆಂದು ಪೇಳಲಿ ಸಾನಂದನುತ ಮಹ ದಾನಂದದಾಲಯ ಪೊಗಿಸಿದ ಆನಂದದಾಲಯ ಪೊಗಿಸೆನ್ನ ವದನದಿ ತಾ ನಿಂದು ನಿಖಿಲ ನುಡಿಸಿದ 9 ಭವಭಯಹರಿಸುವ ಸವಿನುಡಿಗಲಿಸಿದ ಭವರೋಗದ್ವೈದ್ಯ ಮಮಪಿತ ಭವರೋಗದ್ವೈದ್ಯ ಮಮಪಿತ ಮುಂದಿನ್ನು ಸಾವ್ಹುಟ್ಟೋಭೀತಿ ಎನಗಿಲ್ಲ 10 ಕರ್ತು ಸರ್ವೋತ್ತಮ ನಿತ್ಯನಿರ್ಮಲ ಎನ್ನ ಮತ್ರ್ಯದ ಗುಣವ ತೊಡೆದೆನ ಮತ್ರ್ಯದ ಗುಣ ತೊಡೆದು ಸತ್ಯ ಶ್ರೀರಾಮ ಎನ್ನ ಮುಕ್ತಿ ಸಾಮ್ರಾಜ್ಯ ತಖ್ತೆ ಏರಿಸಿದ 11
--------------
ರಾಮದಾಸರು
ಸಂತರಾ ಪದವಿಡಿಯೋ ಪ ಸಂತರಾ ಪದವಿಡಿಯೋ | ಭ್ರಾಂತಿಗಳೆಲ್ಲಾ ಕಡಿಯೋ | ಅಂತಭಾವನೆಯಿಂದ ತಂತುವಿಡಿದು ನಿಜ | ಶಾಂತಿಸುಖವ ಪಡಿಯೋ ಮನುಜಾ | ಶಾಂ | 1 ಡಾಂಭಿಕಾತನಗಳೆದು | ಬೆಂಬಲಗುಣವಳಿದು | ಹಂಬಲಿಸದೇ ಮನ ಸ್ತಂಭಪರಿಯ ಮಾಡಿ | ನಂಬುಗೆ ದೃಢ ತಳೆದು ಮನುಜಾ | ನಂ | 2 ನಾನಾರೆಂಬುದು ಮರೆದೀ | ಜ್ಞಾನದೆಚ್ಚರ ತೊರೆದೀ | ಕಾನನ ಹೊಕ್ಕಂತೆ ನಾನಾ ಸಾಧನದಿಂದ | ಏನ ಸುಖವ ಪಡೆದೀ ಮನುಜಾ | ಏ | 3 ಸುಲಭವೇ ಮಾನುಷ ಜನ್ಮ | ಮ್ಯಾಲ ಅಗ್ರಜ ಧರ್ಮಾ | ಚಲಿಸಲಿ ಪರಿಮತ್ತೆ ಇಳೆಯೊಳು ದೊರಕುದೇ | ತಿಳಿನಿಜಗತಿ ವರ್ಮಾ ಮನುಜಾ | ತಿ| 4 ಕೋಟಿ ಮಾತಿಗೆ ವಂದೇ | ನೀಟ ಸುಪಥವಿದೇ | ಧಾಟಿಲಿ ಮಹಿಪತಿ ಸುತ ಪ್ರಿಯನೊಲುಮೆಯಿಂದ | ಕೋಟಿಳಗಳಿನಿಳದೇ ಮನುಜಾ | ಕೋ | 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು