ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಿಪರಿ ಕೊಂಡಾಡೋ ಹರಿಯನ್ನು ಮರೆದು ನೀ ಕೆಡಬೇಡೋ ಮನವೆ ಪ ಮರವೆ ಮಾಯ ನೀಗಿ ಧರೆಭೋಗ ಮೆಚ್ಚದೆ ನಿರುತ ಭಜಿಪರ ಬಿಟ್ಟು ಅರಲವಗಲ ಹರಿ ಅ.ಪ ಕರುಣಸಾಗರನು ನರಹರಿ ಚರಣದಾಸರನ್ನು ತನ್ನಯ ಹರಣಸಮಾನ ಮಾಡಿ ಕರುಣದಿಂದವರ ಇರವ ಪೂರೈಸುತ ಪೊರೆವ ಪ್ರೇಮದಿಂದ 1 ಚಿಂತೆ ಭ್ರಾಂತಿಗಳನು ಬಿಡಿಸಿ ಸಂತಸ ಕರುಣಿಸಿ ಅವರ ಅಂತರಂಗದಿರ್ದು ಅಂತರ ತಿಳಿಯಿತು ಚಿಂತಿಸಿದ್ದನ್ನಿತ್ತು ಸಂತಸದಿಂ ಕಾಯ್ವ 2 ಸಾರಿಸಾರಿಗೆ ತನ್ನ ಚರಣಸೇರಿ ಭಜಿಪರನ್ನು ಬಿಡದೆ ಆರಭಾರ ಪೊತ್ತು ಸೇರಿ ಅವರ ಬಳಿಯ ಪಾರಸಂಭ್ರಮದಿಂ ಧೀರ ನಲೀತಿಹ್ಯ 3 ಅಮಲರೂಪ ತನ್ನ ನಿರುತ ವಿಮಲಚರಣವನ್ನು ನಂಬಿದ ಸುಮನಸರಹೃದಯಕಮಲದಿ ವಾಸಿಸಿ ನಿಮಿಷಬಿಟ್ಟಗಲದೆ ಕ್ರಮದಿ ಪಾಲಿಸುವ4 ಗೂಢದಿಂದ ಸ್ಮರಿಪ ಭಕುತರ ಗಾಢಮಹಿಮೆ ಕೃಪಾದೃಷ್ಟಿಯಿಂ ಬೇಡಿದ ವರಗಳ ಕಾಡದೆ ನೀಡುತ ರೂಢಿಯೋಳ್ ಬಿಡದೆ ಕಾಪಾಡುವ ಶ್ರೀರಾಮ 5
--------------
ರಾಮದಾಸರು