ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂತರೆನಬಹುದುದಯ್ಯ ಇಂತಿವರಿಗೆ ಅಂತರಂಗಲಿ ಹರಿಯ ಏಕಾಂತ ಭಕ್ತರಿಗೆ ಧ್ರುವ ಸುಖಕ ಮೈಯವ ಮರಿಯಾ ದು:ಖಗಳಿದಿರಿಡೆ ನೋಯಾ ಚಕಿತನಾಗನು ಕುಮತಿ ವಿಕಳ ನುಡಿಗೆ ಪ್ರಕಟಸ್ತೋತ್ರಕ ಹಿಗ್ಗ ನಿರಹಂಕೃತಿಯನ್ನುಳ್ಳರಿಗೆ 1 ಕ್ಲೇಶ ಕರ್ಮಗಳಿರಲು ಈ ಶಿರಿಯ ಸುಖದ ಮನದಾಶೆವಿರಲು ವಾಸುದೇವನ ಪದ ಧ್ಯಾಸದನುಭವ ದಿಟ ವೇಶ ಹರಿ ಸಂಸಾರ ಲೇಶದೋರ್ವರಿಗೆ 2 ಪರಮ ಭಾಗವತೆನಿಸಿ ಪರರ ಮನಗಳಿಗ್ಹೋಗಿ ಕರ ವಿಕರ ಪರಸತಿಯರಿಗೆ ಕೂರವು ಪರನಿಂದೆಗೆ ಮೂಕ ಪರವಶಾದರಿಗೆ 3 ಹರಿಯ ನಾಮವ ನೆನಿದು ಹರಿದು ಕೀರ್ತನೆಯಲ್ಲಿ ಹರುಷಗುಡಿಗಟ್ಟಿ ತನುಮರದು ನಿಂದು ಬರುದೆ ಪ್ರೇಮಾಂಜಲಿಗೆ ಭರಿತ ಲೋಚನನಾಗಿ ತರಿಸಿ ತಾರಿಸುವಂದ್ಯನ ಕರುಣವಂತರಿಗೆ 4 ಇಂತು ದುರ್ಗಮವಿರಲು ಸಂತರಾವು ನೀವೆಂದು ಸಿರಿತರವ ಹೋಗಿ ಜನ ಸಿಂತರಿಸುವಾ ಭ್ರಾಂತವೇಷಕ್ಕೆ ಸಿರಿಕಾಂತ ಮೆಚ್ಚನಲ್ಲಾ ಶಾಂತಗುಣ ಮಹಿಪತಿ ಸ್ವಂತಗೆಂದಾ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು