ದುಮು ದುಮು ಬಸವಂತನ ಹಬ್ಬಾ ಪ
ರಾಮಕೃಷ್ಣ ಗೋವಿಂದ ಮುರಾರಿ | ಶಾಮ ಸುಂದರ
ಸುರಜ ಸಹಕಾರಿ |
ಕಾಮಿತ ಫಲಗಳ ನೀವ ಉದಾರಿ | ಶ್ರೀ ಮಾಧವನೇ
ಕಾಯೋ ಚರಣವ ದೋರಿ 1
ಬನ್ನ ಬಡುತಲಿ ಬಲು
ಭವದಲಿ ಬಂದೆ |
ಮುನ್ನಿನ ತಪ್ಪವನೆಣಿಸದೆ ತಂದೆ | ಚೆನ್ನಾಗಿ ರಕ್ಷಿಸು
ನಮೋ ನಮೋ ಎಂದೆ 2
ಈ ರೀತಿಯಿಂದಲಿ ಹರಿಯ ಕೊಂಡಾಡಿ | ಆ ರಾಧಿಪ
ನವವಿಧದಲ್ಲಿ ಕೂಡಿ |
ನಾರಕ ಭಯಗಳುವನು ಮೂಲದೀಡ್ಯಾಡೀ | ಸೂರ್ಯಾಡು
ಸ್ವ ಸುಖ ಎಲೊ ಹುಚ್ಚು ಖೋಡಿ 3
ಮುನ್ನಿನ ಪುಣ್ಯದಿ ನರದೇಹ ತಾಳಿ | ಮಾನವನಾಗಿ
ಹರಿಕಥೆ ಕೇಳಿ | ಚೆನ್ನಾಗಿ ವಿಷಯದಲನುದಿನ ಬಾಳೀ |
ವೈರಿ ನೀನಾದೆ ಗೈಯ್ಯಾಳಿ 4
ಮೃಗಜಲ ಹೋಲುವ ವಿಷಯಾ ನಂದಾ | ಬಗೆದೆಲೋ
ಶಾಶ್ವತವೆಂದು ನಿನ್ನಿಂದಾ |
ಭಕುತಿಯ ಮಾರ್ಗವ ಬಿಟ್ಟೆಲೋ ಛಂದಾ | ಜಗ
ದೊಳಗಾದೆಲೋ ನೀ ಮತಿ ಮಂದಾ 5
ಹೆಂಡರು ಮಕ್ಕಳು ಮಮತೆಯ ಸ್ಥೂಲಾ | ಖಂಡದಿ
ಬಿದ್ದಿದೆ ಕಾಲಿಗೆ ಕೋಳಾ |
ಅಂಡಲೆವುತ ಹೊಟ್ಟೆಹೊರೆದೆಲೋ ಮೂಳಾ 6
ಸುಖವಿಲ್ಲ ಇದರೊಳಗಿಂದು |
ಪಾದ ಹೊಂದು 7
ತ್ವರಿತದಿ ಭಾವಭಕ್ತಿಗೆ ಗಮನವಿಟ್ಟು |
ತರಳನಾಗಿ ಹೋಗದಿರೆಲೋ ಕೆಟ್ಟು 8
ಚಿನುಮಯ ಗೆಚ್ಚರಗಳೆದೆಲೋ ಭ್ರಾಂತಾ |
ಕುಣಿಸ್ಯಾಡುತಿ ಹನು ಅಚ್ಯುತಾನಂತಾ 9
ಒಬ್ಬರು ಶಾಸ್ತ್ರದ ಮದದಲಿ ಬಿಗಿದು
ಉಬ್ಬುಬ್ಬಿ ಕುಣಿದರು ಹೇಳಲೇನಿಂದು 10
ಅಷ್ಟಮದದಿಂದ ಕಣ್ಣು ಮುಚ್ಚಿ |
ಕುಟ್ಟುವಾಗ ನೆಲ್ಲಿಕಾಲನು ಘಟ್ಟಿಸಿ 11
ಸಂತರ ಕಥೆ ಕಿವಿಯಲಿ ಕೇಳಲಿಲ್ಲಾ |
ಭ್ರಾಂತನೆ ನಾಳೆ ಮುರಿವನು ಹಲ್ಲಾ 12
ನೆರೆದಹಿಸುತ ದುರ್ಮದ ಬೂದಿ ಚೆಲ್ಲಿ |
ನರಜನ್ಮ ಸಾರ್ಥಕ ಮಾಡೆಲೊಹುಳ್ಳಿ 13
ಕಂದನು ಸಾರಿದಾ ಹೋಳಿಯಾ ವಂದಾ |
ಭವ ಬಂದಾ 14