ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾರಿ ದೋರೆನಗ ಮುಕುಂದಾ ಪ ದಾರಿ ತೋರೆನಗೆ ಶ್ರೀ ಹರಿ ನಿನ್ನ ಭಕುತಿಯಾ| ಸಾರಿದೆ ನಿನ್ನವನಾನು ಮುಕುಂದಾ ಅ.ಪ ಜನುಮಾನುಜನುಮದಲಿ|ನಾಮವಾ| ನೆನೆಯದ ತಪ್ಪಿನಲಿ|| ಜ್ಞಾನದೃಷ್ಟಿಯಲಂಧನಾದೆನು ಹರಿ ನಿಮ್ಮ| ಕಾಣದ ಕಂಗಳನಾ ಮುಕುಂದಾ1 ಭ್ರಾಂತತನವ ಬಿಡಿಸಿ|ವಿವೇಕ| ಶಾಂತಿಯ ನೆಲೆಗೊಳಿಸಿ| ಅಂತರಂಗದ ನಿಜ ಸುಖವ ಸೂರ್ಯಾಡುವ| ಸಂತರೊಳಗ ಕೂಡಿಸೋ ಮುಕುಂದಾ2 ಅರಹುನಯನ ದೆರಿಸಿ|ನಿಜರೂಪ| ಗುರುತದ ನೆಲೆ ತೋರಿಸೀ| ಗುರುವರ ಮಹಿಪತಿ ನಂದನ ಪ್ರಭು ನಂದನ ಪ್ರಭು ನಿಮ್ಮ| ಸ್ಮರಣೆ ಪಡೆಯ ನಡಿಸೋ ಮುಕುಂದಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿಂತು ಫುಗಡಿ ಹಾಕ ಭ್ರಾಂತತನವ್ಯಾಕ ಸಂತ ಜನನಿಯರು ನೋಡಿ ತಲೆಯ ದೂಗಬೇಕ ಪ ಆಶೆಯಲಿ ತಾನು ಕುಳಿತು ಹಾಕುದೇನು | ಘಾಸಿಯಾಗುವ ಆರುಮಂದಿಯಾ ಕೂಡಿದರೇ ನೀನು 1 ಗರುವ ತನ ಬಿಟ್ಟು ತಿರುಗಣೆಯಾ ನುಟ್ಟು | ಆರಹು ಶರಗಿನಿಂದ ಬಿಗಿದು ಹಾಕ ಮಲಕ ಗಂಟು 2 ಲಜ್ಜೆ ವಳಿದು ನೋಡೇ ಹರಿಯಸ್ತುತಿ ಮಾಡಿ | ಘಜ್ಜಿಗೆ ಬಂಡಮ್ಯಾಲ ಯಚ್ಚರ ಮೈಯ್ಯ ಮರೆಯಿಬ್ಯಾಡೇ 3 ಎರಡು ಸವೆ ನಿನೆಹಾ ಜ್ಞಾನ ಸಖೀ ಕೈಯ್ಯಾ | ಜರಿಯದಂತೆ ಹಿಡಿದು ತಿರುಗು ನಡವಿಧ ಪರಿಯಾ 4 ಫುಗಡಿ ಇದೇ ಆಡೀ ಪ್ರೇಮಭಾವ ಕೂಡೀ | ಮುಗುತಿ ಕೊಡುವ ತಂದೆ ಮಹಿಪತಿ ಸ್ವಾಮಿ ದಯಮಾಡಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಂತರಾ ಕೂಡ ಬಾರದೇ | ಏ ಮನುಜಾ ಪ ಸಂತರಾ ಕೂಡಲಾಗೀ | ಭ್ರಾಂತತನವು ಹೋಗಿ | ಅಂತರ ಸುಖದೋರದೇ 1 ಭೃಂಗಿ ಕೀಟಕ ಕೂಡೀ | ಸಂಗದಿ ಧ್ಯಾನ ಮಾಡಿ | ಭೃಂಗಿ ತಾನಾಗಿ ಹಾರದೇ 2 ಗುರು ಮಹಿಪತಿ ಪ್ರೀಯಾ | ದೊರೆವನು ನಿನ್ನಕೈಯ್ಯಾ | ಮರಳುತನವ ಸೇರದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಂತೆಯ ನೋಡಲು ಬಂದವನಾ | ಭ್ರಾಂತತನವ ನೋಡಿ ಮಾನವನಾ ಪ ಪರಿ ವಾಸನೆಕಾರರು ವಿಷಯದ | ಸರಕಿನ ಚಟ್ಟೆಯ ರಂಗಡಿಯು | ದುರುಳತ ನವಗುಣ ಭೂಸಿನ ರಾಶಿಯು | ನೆರೆದಿಹ ಸಂದಣಿ ಜನದೊಳಗ 1 ಇಂತಿಹ ನರದೇಹ ಪ್ಯಾಟೆಯ ಸಡಗರ | ಪ್ರಾಂತವ ಕಾಣದೆ ಮರುಳಾಗಿ | ನಿಂತಲ್ಲಿ ನಿಲ್ಲದೆ ನೋಡುತ ತಿರುಗುತ | ಕಂಥಿಯ ಕಳೆದನು ಹೆಗಲಿನಾ 2 ಗುರುಮಹೀಪತಿ ಸ್ವಾಮಿಯ ಗಡಚಿನ | ಶರಣಿರವಳಿಹುಗದೆವೆ ಮರೆದು | ಧರಿಯೊಳು ಉಣಲಿಲ್ಲ ಉಡಲಿಲ್ಲ ಬಂದಿವ | ಬರುದೆವೆ ಮುಮ್ಮಳಿ ಘಳಿಸಿದನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು