ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಷ್ಟುದಯ ಮಾಡಿದ್ದೆ ಅತಿ ಸೋಜಿಗ ಶೀಷ್ಟೇಷ್ಟದಾತ ಭ್ರಷ್ಟಮಾನವನಲ್ಲಿ ಪ. ಉದಯಕಾಲದಲೆದ್ದು ಪದುಮಸಂಭವ ಪಿತನ ವದನದಲಿ ನೆನೆಯದಲೆ ಮಾನುನಿಯರ ಚದುರತೆಗೆ ಮೆಚ್ಚುತಲೆ ಉದರ ಪೊರೆದನ ಮೇಲೆ ಚದುರ ಶ್ರೀಕೃಷ್ಣ ಬದಿಗನಾಗಿದ್ದು 1 ಕರುಣಾಸಮುದ್ರನ ಸ್ಮರಣೆ ಸಾಲದೆ ಎಂಬ ಪರಮ ಗುರುಗಳ ವಚನ ಮರೆತು ನಿನ್ನ ಸ್ಮರಿಸದೆಲೆ ನಿರುತದಿ ಪರರ ಬಾಗಿಲಿಗ್ಹೋಗಿ ಚರಣ ಧಣಿವುತ ಮನದಿ ಮರುಗಿದೆನೋ ಕೃಷ್ಣಾ 2 ಇನ್ನಾದರೆನಮನದಿ ಪನ್ನಗಾದ್ರಿನಿವಾಸ ನಿನ್ನ ಸ್ಮರಣೆಯ ಕೊಟ್ಟು ಮನ್ನಿಸೆನ್ನ ಘನ್ನ ಅಪರಾಧಗಳ ವರ್ಣಿಸಲಳವಲ್ಲ ಚೆನ್ನಿಗ ಶ್ರೀ ಶ್ರೀನಿವಾಸ ಘನ್ನ ಸಂಪನ್ನ ಸರಿಯಾರೋ 3
--------------
ಸರಸ್ವತಿ ಬಾಯಿ