ನೋಡೆಲೊ ಎನ್ನ ಕರುಣದಿ ಹರಿ
ಮಾಡೊ ಉದ್ಧಾರ ಬೇಗದಿ ಪ
ರೂಢಿಯೊಳು ಮುಖ ಮಾಡಿ ಪರರನು
ಮಾಧವ ಅ.ಪ
ಸೃಷ್ಟಿಯೊಳೆನ್ನ ನೂಕಿ ಯಾತಕೆ
ಬಿಟ್ಟಿ ಬೇಸರ ಮಾಡುವಿ
ಕೆಟ್ಟಹೊಟ್ಟೆಯ ಕೊಟ್ಟು ವಿಧವಿಧ
ಭ್ರಷ್ಟನೆನಿಸುವುದೇನಿದಭವ 1
ಜ್ಞಾನಶೂನ್ಯನ ಮಾಡೀಭವಕೆ
ನೀನೆನೂಕಿದೆ ಮತ್ತಾರೆಲೊ
ಏನುಕಾರಣ ಪಾಪಿಯೆಂದೆನ್ನ
ಹೀನದೃಷ್ಟಿಲಿ ನೋಡ್ವೆ ದೇವ 2
ಏನು ಸ್ವಾಧೀನ ಕೊಟ್ಟದ್ದೆನ್ನಗೆ
ನೀನೆ ನ್ಯಾಯವು ಪೇಳಯ್ಯ
ನೀನೆ ಸಕಲ ಸ್ವತಂತ್ರ ಎನಗೆ
ಜ್ಞಾನ ಪಾಲಿಸಿ ಪೊರೆ ಶ್ರೀರಾಮ 3