ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಾಗುವುದು ತಾನಾಗಿದೆ ಜಗ ನೀನ್ಯಾಕದರೋಳ್ಪಾಲಿಡುವ್ಯೋ ಪ ಕಾಣುಕಾಣುತಲಿ ಶೂನ್ಯವೆನಿಪುದೆಲ್ಲ ಜಾಣನಾಗಿ ಭವಗೆಲಿಯೆಲವೋ ಅ.ಪ ಸತತದಿ ಸತಿಸುತರ್ಹಿತಕಾಗಿ ಬಲು ಮತಿಗೆಟ್ಟತಿಯಾಗ್ವ್ಯಥೆಬಡುವ್ಯೋ ಪೃಥಿವಿ ಮೇಲೆ ನಿನ್ನ ಮತಿಯಲಿಂದ ಮಣ್ಣು ಪ್ರತಿಮೆಮಾಡಿ ಸೃಷ್ಟಿಗೊಳಿಸಿದೆಯೋ 1 ಹಲವುವಿಧದಿ ನಾನೆ ದುಡಿದು ಧಾನ್ಯಧನ ಗಳಿಸಿದೆನೆಂದು ಬಲು ಭ್ರಮಿಸುವೆಯೋ ತಿಳಿದುನೋಡೆಲೆ ಬೀಜದೊಳಗೆ ಮೊಳಕೆ ತಿದ್ದಿ ಬೆಳೆಯ ಬೆಳೆಸಿ ಸ್ಥಿತಿಮಾಡಿದೆಯೋ 2 ಎಷ್ಟುದಿನಿರ್ದರು ಬಿಟ್ಟು ಹೋಗುವುದನು ಗಟ್ಟಿಮಾಡ್ಯಾಕೆ ಭ್ರಷ್ಟನಾಗುವೆಯೋ ಸೃಷ್ಟಿಸ್ಥಿತಿಲಯಕರ್ತ ಶ್ರೀರಾಮನ ನಿಷ್ಠೆಯಿಂ ಪಾಡಿ ಮುಕ್ತಿಸುಖ ಪಡೆಯೋ 3
--------------
ರಾಮದಾಸರು
ಗರುವವು ನಿನಗ್ಯಾಕೆಲೋ ಎಲೋ ಜರ ನಾಚಿಕೆ ಬಾರದೇನೆಲೋ ಎಲೋ ಪ ಮರುಳನೆ ನಿನಗೀಪರಿ ಗರುವ್ಯಾತಕೋ ಅರಿತು ನೋಡ್ಹಿರಿಯರನೆಲೋ ಎಲೋ ಅ.ಪ ಘನತೆಲೊಸಿಷ್ಠನೇನೆಲೋ ಎಲೋ ಜನಕ ಭಾಗ್ಯದೊಳೆಲೋ ಎಲೋ ಮನುಗಳಲ್ವ್ಯಾಸನೇನೆಲೋ ಎಲೋ ನೀ ಮುನಿಗಳೋಳ್ಯುಕನೇನೆಲೋ ಎಲೋ ಮನೆತನದಲಿ ಘನದಶರಥನೆ ದಿನಮಣಿಯೆ ನೀ ಪ್ರಭೆಯೋಳೆಲೋ ಎಲೋ 1 ಧುರದಿ ಕಾರ್ತರ್ವ್ಯನೇನೆಲೋ ಎಲೋ ನೀ ನರಿವಿನೋಳ್ಪ್ರಹ್ಲಾದನೇನೆಲೋ ಎಲೋ ವಿರಸದಿ ರಾವಣನೇನೆಲೋ ಎಲೋ ನೀ ಸ್ಥಿರತನದ್ವಿಭೀಷಣನೇನೆಲೋ ಎಲೋ ಹರಿ ಒಲುಮೆಲಿವರ ಅಗಸ್ತ್ಯನೇನು ಸುರ ಗುರುವೇ ನೀ ಮತಿಯೋಳೆಲೋ ಎಲೋ 2 ತ್ರಾಣದಿ ವಾಲಿಯೇನಲೋ ಎಲೋ ನೀ ಜಾಣರೋಳ್ಬಲಿಯೇನೆಲೋ ಎಲೋ ಜ್ಞಾನದಿ ವಾಲ್ಮೀಕಿಯೇನೆಲೋ ಎಲೋ ನೀ ಗಾನದಿ ನಾರದನೇನೆಲೋ ಎಲೋ ದಾನದೊಳಗೆ ಹರಿಶ್ಚಂದ್ರನೇನೋ ನಿ ಧಾನದಿ ನಳನೇನೆಲೋ ಎಲೋ 3 ಪದವಿಯೊಳ್ಧ್ರುವನೇನೆಲೋ ಎಲೋ ನೀ ನಿಧಿಯೋಳ್ಕುಬೇರನೆಲೋ ಎಲೋ ಮದನನೆ ಪುರುಷರೋಳೆಲೋ ಎಲೋ ವರ ಮದದಿ ಕಶ್ಯಪನೇನೆಲೋ ಎಲೋ ಸದಮಲ ಕುಲದಲಿ ಗೌತಮ ಮುನಿಯೇ ನೀ ಕದನದಿ ಕುರುಪನೇನಲೋ ಎಲೋ 4 ನುಡಿವಲಿ ನರನೇನೆಲೋ ಎಲೋ ನೀ ಕೊಡುವಲಿ ಕರ್ಣನೇನೆಲೋ ಎಲೋ ಇಡುವಲಿ ಧರ್ಮನೇನಲೋ ಎಲೋ ನೀ ಕೆಡುಕಲಿ ಶಕುನಿಯೇನೆಲೋ ಎಲೋ ಕಡುಗಲಿತನದಲಿ ಕಲಿಭೀಮನೇ ಸಡಗರದಿಂದ್ರನೇನೆಲೋ ಎಲೋ 5 ಯುಕ್ತಿಲಿ ದ್ರೋಣನೇನೆಲೋ ಎಲೋ ನೀ ಶಕ್ತಿಲಿ ನಕುಲನೇನೆಲೋ ಎಲೋ ಭಕ್ತಿಲ್ವಿದುರನೇನೆಲೋ ಎಲೋ ನೀ ವೃತ್ತಿಲಿ ಸಹದೇನವನೇನೆಲೋ ಎಲೋ ಚಿತ್ತಶುದ್ಧಿಯಲಿ ವೀರ ಸುಧನ್ವನೆ ತೃಪ್ತಿಲಿ ಭೀಷ್ಮನೇನೆಲೋ ಎಲೋ 6 ದಿಟ್ಟರೋಳ್ಗರುಡನೇ ನೆಲೋ ಎಲೋ ನೀ ಶಿಷ್ಟರೋಳ್ಹನುಮನೇನೆಲೋ ಎಲೋ ಸೃಷ್ಟಿಯೋಳಾರನ್ಹೋಲ್ವೆಲೋ ಎಲೋ ನೀ ಭ್ರಷ್ಟನಾಗುವಿ ಯಾಕೆಲೋ ಎಲೋ ಬಿಟ್ಟುಗರ್ವಮಂ ಶಿಷ್ಟಶ್ರೀರಾಮನ ಮುಟ್ಟಿಭಜಿಸಿ ಉಳಿಯೆಲೋ ಎಲೋ 7
--------------
ರಾಮದಾಸರು
ಗುರು ಸಂಕೀರ್ತನೆ 49 ಅರಿತ ಗುರುವಿನ ಪಾದ ಇಂದು ನರಕ ಮುಂದು ಪ ಒಳ್ಳೆ ನಾವೆಯೊಳು ಕಲ್ಲು ಹಾಕಿಸಿಡು ಅದು ದಾಟಿಸುವುದುಕಲ್ಲಿಗೆ ಕಲ್ಲು ಕಟ್ಟಿದರಲ್ಲೆ ಮುಳುಗುವುದು ಅದು ಮುಂದಕೆ ಹೋಗದು1 ಜಾರುವವನ ಕೈಯ ಹಿಡಿದರೆ ತಾನು ಜಾರುವ ಮೇಲೆ ಜಾರಿ ಬೀಳುವಘೋರ ಗುರುವಿನ ಸಂಗ ಹಿಡಿದು ಭ್ರಷ್ಟನಾಗುವ ಮುಂದೆ ಕೆಟ್ಟು ಹೋಗುವ 2 ತಾನು ಮೂರ್ಖ ಅವನು ಮೂರ್ಖ ಕೂಡಲೆಂದು ಮತ್ತೂ ಕೇಡು ಇಂದುಜ್ಞಾನಿ ಚಿದಾನಂದನ ಪಾದ ಇಂದು 3
--------------
ಚಿದಾನಂದ ಅವಧೂತರು
ಸುರ ಮುನಿಜನನುತಪಾದನಿನ್ನಶರಣು ಪೊಕ್ಕೆನೊ ಗೋವಿಂದ ನೀಚರಕೈಯಲಿ ಕೊಡದಿರೊ ಎನ್ನ ಮೇಲ್ಗಿರಿ ಶ್ರೀನಿವಾಸಪಾವನ್ನಪ.ದುಷ್ಟದೂಷಕ ಸಂಗದಿಂದೆ ನನ್ನನಿಷ್ಠೆ ಜಾರುತಲಿದೆ ತಂದೆ ಸಲೆಭ್ರಷ್ಟನಾಗುವುದೇನು ಚಂದೆ ಬಲುಕಷ್ಟಿಸಿ ಭವದಲಿ ನೊಂದೆ 1ಅಮಿತ ದುರ್ಗುಣ ದೋಷಹಾರಿಶುಭಅಮಲ ಮುಕ್ತಿದಾತ ಉದಾರಿ ಎನ್ನಭ್ರಮಣ ನೀಗಿಸು ಹೊರೆ ಸ್ವಾಮಿ ಹೃತ್ಕಮಲದಿ ಪ್ರಕಟಿಸು ಪ್ರೇಮಿ 2ಅರಿಯೆನರಿಯೆ ಅನ್ಯಮರೆಯೆ ನಿನ್ನಸ್ಮರಣೆಗೆಚ್ಚರವಿತ್ತು ಹೊರೆಯೊಸಿರಿಗುರು ಆನಂದಮುನಿ ದೊರೆಯೆನಿತ್ಯಪರಸನ್ನ ವೆಂಕಟ ಭಕ್ತರ ಸಿರಿಯೆ 3
--------------
ಪ್ರಸನ್ನವೆಂಕಟದಾಸರು