ತಿಳಿಯದೆ ಬೊಗಳುವದೆಲ್ಲಲ್ಲಲ್ಲ ನಿಜ
ತಿಳಿದರೆ ವಲಿತಾ ಬ್ಯಾರಿಲ್ಲ ಪ
ಮುಲ್ಲ ಶಾಸ್ತ್ರದ ಮೂಲವ ತಿಳಿಯದೆ
ಜೊಳ್ಳುಕೂಗಿಗೆ ಮುಕ್ತಿಲ್ಲಿಲ್ಲ ಅ.ಪ
ಭ್ರಷ್ಟತ್ವವಳಿಯುದೆ ಅಲ್ಲಲ್ಲ ಮುಂದೆ
ನಿಷ್ಠನಾಗಲು ಕಷ್ಟ ಇಲ್ಲಲ್ಲ
ದುಷ್ಟತನಳಿದುಳಿ ಬಿಸ್ಮಿಲ್ಲ ಸತ್ಯ
ಶಿಷ್ಟರೊಳಾಡ್ವುದೆ ಸೊಲ್ಲಲ್ಲ 1
ಕಾಲನ ಗೆಲುವದೆ ನಿಜಮೌಲ ವನ
ಮಾಲನ ಭಜನದೆ ತಿಳಿ ಲಾಯಿಲಾ
ನೀಲಶಾಮನ ಮಹದಾಲಯದಿಟ್ಟು ಸು
ಶೀಲನಾದವನೆ ಮಹದ್ದೌಲ 2
ಮಹಮ್ಮದನಾಗ್ವದೆ ಸೊಲ್ಲಲ್ಲ ತನ್ನ
ಅಹಮ್ಮದನಾಗ್ವದೇಕರ್ಬಲ
ಅಹಂ ವಹಂ ನೀಗಿ ರಾಮರಹೀಂ ನೆಲೆ ತಿಳಿ
ಭವಜನುಮ ಮುಂದಿಲ್ಲಲ್ಲ 3