ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರು ಹೊಂದಿದವನೀಗ ಎಂದಿಗೂ ಕೆಡನುಮರಳಿ ಹುಟ್ಟಿದರೇನು ಗುರುವು ಕಾಯುವನು ಪ ಗುರು ಹೇಳಿದಂತಿರದೆ ಗುರು ಆಜ್ಞೆಯಂತಿರದೆಬರಿಯ ಪ್ರಾಪಂಚದ ನಡೆಯನೆ ನಡೆದುಮರೆತೆಯಾದರೇನು ಗುರು ಕರುಣ ತಾನದುವೆನರಕಕ್ಕೆ ಕಳುಹದೋ ಯಮನ ಸೇರಿಸದೋ 1 ತನ್ನ ಅವಗುಣದಿ ಜನ್ಮಗಳ ಸೇರಿದರೇನುಅನ್ಯಕೆ ಎಳಸದದು ಸೋಂಕಿನಲಿ ಮನವುಚೆನ್ನಾಗಿಯೇ ಗುರುದ್ವಾರವನು ಕಾದಿಹನುಭಿನ್ನಿಸದೆ ಪರತತ್ವ ಬೋಧೆ ಹೇಳುವನು 2 ಭ್ರಷ್ಟತ್ವದಿಂ ತನ್ನ ಪಾಪವನು ಉಣುತಲಿಹುಟ್ಟುತಿಹ ಹಂದಿ ಪಶುವಾಗಿ ತಾನುಘಟ್ಯಾಗಿ ನರಜನ್ಮ ಧರಿಸುತ್ತ ಕಡೆಯಲಿಶಿಷ್ಟ ಚಿದಾನಂದ ಬಗಳೆಯನು ಕೂಡುವನು 3
--------------
ಚಿದಾನಂದ ಅವಧೂತರು
ತಿಳಿಯದೆ ಬೊಗಳುವದೆಲ್ಲಲ್ಲಲ್ಲ ನಿಜ ತಿಳಿದರೆ ವಲಿತಾ ಬ್ಯಾರಿಲ್ಲ ಪ ಮುಲ್ಲ ಶಾಸ್ತ್ರದ ಮೂಲವ ತಿಳಿಯದೆ ಜೊಳ್ಳುಕೂಗಿಗೆ ಮುಕ್ತಿಲ್ಲಿಲ್ಲ ಅ.ಪ ಭ್ರಷ್ಟತ್ವವಳಿಯುದೆ ಅಲ್ಲಲ್ಲ ಮುಂದೆ ನಿಷ್ಠನಾಗಲು ಕಷ್ಟ ಇಲ್ಲಲ್ಲ ದುಷ್ಟತನಳಿದುಳಿ ಬಿಸ್ಮಿಲ್ಲ ಸತ್ಯ ಶಿಷ್ಟರೊಳಾಡ್ವುದೆ ಸೊಲ್ಲಲ್ಲ 1 ಕಾಲನ ಗೆಲುವದೆ ನಿಜಮೌಲ ವನ ಮಾಲನ ಭಜನದೆ ತಿಳಿ ಲಾಯಿಲಾ ನೀಲಶಾಮನ ಮಹದಾಲಯದಿಟ್ಟು ಸು ಶೀಲನಾದವನೆ ಮಹದ್ದೌಲ 2 ಮಹಮ್ಮದನಾಗ್ವದೆ ಸೊಲ್ಲಲ್ಲ ತನ್ನ ಅಹಮ್ಮದನಾಗ್ವದೇಕರ್ಬಲ ಅಹಂ ವಹಂ ನೀಗಿ ರಾಮರಹೀಂ ನೆಲೆ ತಿಳಿ ಭವಜನುಮ ಮುಂದಿಲ್ಲಲ್ಲ 3
--------------
ರಾಮದಾಸರು
ದೋಷನಾಶ ಜಗದೀಶ ಈಶ ಕೈ ಲಾಸವಾಸ ಸದಾನಂದ ಹರ ಜೈಜೈ ಪರಮಾನಂದ ಪ ದಂಡಧರನೆ ಹರ ರುಂಡಮಾಲ ರುದ್ರ ಕೆಂಡನಯನ ಸದಾನಂದ ಹರ ಜೈ ಜೈ ಪರಮಾನಂದ1 ಗೌರಿನಾಥ ಪ್ರಭು ಮಾರಮರ್ದನ ಮೃಡ ವಾರಿಧಿಧರ ಸದಾನಂದ ಹರ ಜೈ ಜೈ ಪರಮಾನಂದ 2 ಅಗಜಾವಲ್ಲಭ ನಿಗಮವಂದ್ಯ ಭಕ್ತ ರಘನಾಶನ ಸದಾನಂದ ಹರ ಜೈ ಜೈ ಪರಮಾನಂದ 3 ಗಜಚರ್ಮಾಂಬರ ಸುಜನರ ಪರಿಪಾಲ ತ್ರಿಜಗಪೂಜ್ಯ ಸದಾನಂದ ಹರ ಜೈ ಜೈ ಪರಮಾನಂದ 4 ತ್ರಿಪುರಸಂಹರ ನುತ ಸುಫಲದಾಯಕ ಮಹ ಕೃಪಾಕರ ಶಿವ ಸದಾನಂದ ಹರ ಜೈ ಜೈ ಪರಮಾನಂದ 5 ನೀಲಕಂಠ ಭವಮಾಲನಿವಾರ ತ್ರಿ ಶೂಲಧಾರಿ ಸದಾನಂದ ಹರ ಜೈ ಜೈ ಪರಮಾನಂದ 6 ಚಂದ್ರಚೂಡ ಶರಣೇಂದ್ರ ಮೃಕಂಡುಮುನಿ ಕಂದಗೊಲಿದ ಸದಾನಂದ ಹರ ಜೈ ಜೈ ಪರಮಾನಂದ 7 ಫಾಲನಯನ ಸುಖದಾಲಯ ನುತಜನ ಮೇಲುಮಂದಿರ ಸದಾನಂದ ಹರ ಜೈ ಜೈ ಪರಮಾನಂದ 8 ಭವ ಭೂತಿಖ್ಯಾತ ಜಗ ದಾತ ಸದಾನಂದ ಹರ ಜೈಜೈ ಪರಮಾನಂದ 9 ನಾದತೀತ ಅಮರಾದಿವಿನುತ ಮಹ ದಾದಿದೇವ ಸದಾನಂದ ಹರ ಜೈ ಜೈ ಪರಮಾನಂದ 10 ನತಜನ ಸುಖದಾಶ್ರಿತ ಹಿತಮತಿ ದೇ ನುತಿಪೆ ಸತತ ಸದಾನಂದ ಹರ ಜೈಜೈ ಪರಮಾನಂದ 11 ಭಾಗವತರ ಪ್ರಿಯ ಭಗವತ್ಶಿಖಾಮಣಿ ನಾಗಭೂಷ ಸದಾನಂದ ಹರ ಜೈ ಜೈ ಪರಮಾನಂದ 12 ಖೊಟ್ಟಿಲೋಹ ಸುಟ್ಟು ಕಿಟ್ಟತೆಗೆವಂತೆನ್ನ ಭ್ರಷ್ಟತ್ವಕಳಿ ಸದಾನಂದ ಹರ ಜೈ ಜೈ ಪರಮಾನಂದ 13 ಹರಣಪೋದರು ಹರಿಚರಣಸ್ಮರಣೆಬಿಡ ದ್ವರವ ಪಾಲಿಸು ಸದಾನಂದ ಹರ ಜೈ ಜೈ ಪರಮಾನಂದ 14 ಲಿಂಗಪುರೇಶ ಶಿವಲಿಂಗರೂಪ ಭವ ಭಂಗಸಂಗ ಸದಾನಂದ ಹರ ಜೈ ಜೈ ಪರಮಾನಂದ 15 ಮಂದರಧರನಡಿ ಚಂದದೊಲಿಸಿ ಎನಗಾ ನಂದಕೊಡು ಸದಾನಂದ ಹರ ಜೈ ಜೈ ಪರಮಾನಂದ 16 ಮಂಗಳಮೂರುತಿ ತುಂಗವಿಕ್ರಮ ಶ್ರೀ ರಂಗ ರಾಮ ಭಕ್ತಾನಂದ ಹರ ಜೈ ಜೈ ಪರಮಾನಂದ 17
--------------
ರಾಮದಾಸರು
ಬಲ್ಲೆ ಬಲ್ಲೆನು ಕೃಷ್ಣ ನಿನ್ನ ಮಹಿಮೇ ಪ ಗುಲ್ಲು ಮಾಡದೆ ಬೇಗ ನಿಲ್ಲೈಯ ಮನದಲಿ ಅ.ಪ ತಿರುಪೆ ಬೇಡಿದೆ ಯಾಕೆ ಪರಮ ಪುರುಷನು ಎನಿಸಿ ತುರುವ ಕಾಯ್ದೇಕೆ ಪರಿವಾರ ಸುರರಿರಲು ಕರಡಿಕಪಿಗಳ ಸೈನ್ಯ ನೆರವು ಯಾತಕೆ ನಿನಗೆ ಚರಿತೆ ಸೋಜಿಗವಯ್ಯಾ 1 ಅಷ್ಟಕರ್ತನಿಗೇಕೆ ಸಂತತವು ಜಪತಪವು ಪಟ್ಟ ಮಹಿಷಿಯರಿರಲು ಕುಬ್ಜೆಕೂಡಿದೆ ಯಾಕೆ ಉಟ್ಟು ಸೀರೆಯ ಖಳರ ವಂಚಿಸಿದ ಬಹು ಶೂರ ನಿಷ್ಟೆಯಿಂದಲಿ ಬಲಿಯ ಬಾಗಿಲನು ಕಾಯುವನೆ 2 ಬೆಣ್ಣೆ ಕಳ್ಳರ ಗುರುವೆ ಹೆಣ್ಣು ಕದ್ದವ ನೀನು ಮಣ್ಣು ಮಾಡಿದೆ ಕುಲವ ಯೆಂಜಲುಂಡವ ದೊರೆಯೆ ಅಣ್ಣ ತಮ್ಮಂದಿರಲಿ ಕಲಹವನು ವÀಡ್ಡುತಲಿ ನುಣ್ಣ ಗೆಲ್ಲರ ಮಾಡಿ ನಿಷ್ಕಪಟಿಯೆನಿಸಿದೆಯೊ 3 ಅನ್ಯರಿಗೆ ಉಪಕಾರಿ ಅನನ್ಯರಾ ಶತ್ರುವು ಭವ ಭ್ರಷ್ಟತ್ವ ನೀಡುವೆಯೊ ನಿನ್ನಾಳ ನಿಖಿಳರಿಗು ತೊರ್ಗೊಡದ ಬಹುಗೂಢ ಕಣ್ಣು ಕೈ ಕಾಲೆಲ್ಲ ಸಮವೇನೆ ನಿನಗಯ್ಯ 4 ದೊಡ್ಡ ದೇವನು ಎನಿಸಿ ಗುಡ್ಡವೇತಕೆ ಹೊಕ್ಕೆ ಗಿಡ್ಡರೂಪವ ತೋರಿ ದೊಡ್ಡದಾಗುತ ಎಂದು ಅಡ್ಡಿಯಿಲ್ಲದೆ ಬಲಿಯ ಹೆಡ್ಡನೆನಿಸಲು ಬಹುದೆ ಗುಡ್ಡೆಯಿಲ್ಲದೆ ಚರಿಪ ವಡಲು ಬಗೆದಾ ಘೋರ 5 ಪೂಡವಿಗೊಡೆಯನು ಎನಿಸಿ ಹಡೆದ ಮಾತೆಯ ಕಡಿದೆ ಅಡವಿ ಬೇರನು ತಿಂದೆ ಕಡಲೊಳಗೆ ಸಂಚರಿಪೆ ಮಡದಿಯನು ಕಳಕೊಂಡು ಹುಡುಕುತಲಿ ತಿರುಗಿದೆಯೋ ಸಡಗರದಿ ಹಯವೇರಿ ಕೆಡುಕು ಕಡಿಯುವೆಯಂತೆ 6 ನಾಮಕುಲಗೋತ್ರಗಳ ನೆಲೆಯಕಂಡವರಿಲ್ಲ ಸಾಮಸರಿ ನಿರ್ಗುಣವು ಪೂರ್ಣಗುಣ ನೀನಂತೆ ವಾಮನೀನಾವರಿಸಿ ವಳ ಹೊರಗೆ ಲೋಕಗಳ ನೇಮದಿಂ ಕಾಯುವನು ಪುಡುಕಿದರು ಸಿಗೆಯೇಕೇ 7 ಮಂಗಳಾಂಗನು ಅಂತೆ ಲಿಂಗವರ್ಜಿತನಂತೆ ಶೃಂಗಾರರಸನಂತೆ ಭಂಗರಹಿತನು ಅಂತೆ ಲಿಂಗವೆರಡೂ ಅಂತೆ ಸಿಸ್ಸಂಗ ನೀನಾಗಿ ಅಂಗದಲಿ ಅಂಗನೆಯ ಧರಿಸಿ ಮೆರೆಯುವೆಯೇಕೆ 8 ವೇದ ಬೋಧೆಯನಿತ್ತಗಾಧ ವರ್ಜಿತ ಮಹಿಮ ಮೋದ ಮಯ ನೀ ನಿನ್ನ ನಾದಿನಿಯ ಬೆರೆದೇಕೆ ಸಾಧುಗುಣಪೂರ್ಣ ಭಾನುವನು ಮರೆ ಮಾಡಿ ಮೈದುನನ ಸಲಹಿದ್ದು ಬಹುನ್ಯಾಯ ವೇನೈಯ್ಯ 9 ಹಾಲು ಕೊಟ್ಟವಳನ್ನು ಲೀಲೆಯಿಂದಲಿ ಕೊಂದೆ ಶೀಲಸತಿಯಳ ಬೆರದು ವ್ರತವಳಿದು ಪರವಿತ್ತೆ ಕಾಲನಾಮಕನಾಗಿ ಜಗವೆಲ್ಲ ನುಂಗುವನೆ ಹೇಳುವರು ಕೇಳುವರು ನಿನಗಿಲ್ಲವೇನೈಯ್ಯಾ 10 ಏನೆಂದು ವರ್ಣಿಸಲಿ ನಿನ್ನಯ ವಗತನವ ಸತಿ ಚಂಚಲೆಯು ಮಗಳ ಮಾರ್ಗವುಡೊಂಕು ಮಾನಾಭಿಮಾನಗಳ ಬಿಟ್ಟವರೆ ಪರಿವಾರ ನೀನಿರದಠಾವಿಲ್ಲ ನಿನಗಿಲ್ಲ ತುದಿಮೊದಲು 11 ಸರ್ವಜ್ಞನಾದವಗೆ ಸಾಂದೀಪ ಗುರುವೇಕೆ ಸರ್ವ ನಾಮವು ಕೂಡೆ ನಾಮಕರಣವು ಏಕೆ ಸರ್ವಸ್ವಾಮಿಯು ಎನಿಸಿ ಸಾರಥಿಯು ಆದೇಕೆ ಸರ್ವ ತೋಮುಖ ನೀನು ಜಗವಿಲಕ್ಷಣ ನೈಯ್ಯಾ12 ಒಬ್ಬರಲಿ ನೀಜನಿಸಿ ಮತ್ತೊಬ್ಬರಲಿ ನೀ ಬೆಳೆದೆ ತಬ್ಬಲಿಯೆ ವಾಸ್ತವದಿ ಉಬ್ಬಿಳಿತವರ್ಜಿತವೆ ಅಬ್ಬಬ್ಬ ಬ್ರಹ್ಮಾಂಡ ಹಬ್ಬಿ ನಡೆಸುವ ಧೀರ ಕೊಬ್ಬಿದಾ ಖಳಗಂಜಿ ಮಧುರೆಯನು ತೊರೆದೇಕೊ 13 ಮೇದಿನಿಗೆ ನೀ ಸ್ವಾಮಿ ಮದುವಾದೆ ಮಗಳನ್ನು ಬೈದವಗೆ ಗತಿಯಿತ್ತೆ ಭಕ್ತರಿಗೆ ಕೂಳಿಲ್ಲ ಮೋದ ಮಯ ನುಂಡುಣಿಸಿ ನಿರ್ಲೇಪನೀ ನಿರ್ಪೆ ವಿದುರ ನೌತಣ ಕೊಂಡೆ ಕನ್ಯೆಯಲಿ ನೀ ಬಂದೆ 14 ಜಯ ಮುನಿ ಹೃದಯದಲಿ ವಾಯುವಿನಂತರ ದಿರ್ಪ ಶ್ರೀಯರಸ ತಾಂಡವ ಕೃಷ್ಣವಿಠಲನೆ ನೀನು ಮಾಯಾವಿ ತೋರಗೊಡೆ ನಿಜಮರ್ಮಖಳಜನಕೆ ಜೀಯನೆ ಮೊರೆಹೊಕ್ಕೆ ನಿನ್ನಿರವ ತೋರೈಯ್ಯಾ 15
--------------
ಕೃಷ್ಣವಿಠಲದಾಸರು
ಹರಿಯ ನೆನೆವಲ್ಲಿ ಮನವೆ ನೀ ಪ ಅರಿವು ತಿಳಿವಲ್ಲಿ ಹರಿದುಹೋಗುವ ದುರುಳ ಸಂಸಾರಕೆ ಮರುಳನಾಗಿ ನೀ ನರಕಕ್ಹೋಗುವಿಯಲ್ಲೋ ಅ.ಪ ಖೊಟ್ಟಿಗುಣಳಿವಲ್ಲಿ ಮನಸಿನ ಭ್ರಷ್ಟತ್ವ ಕಳಿವಲ್ಲಿ ಶಿಷ್ಟರಲ್ಲಿ ಮನವಿಟ್ಟು ಉಳಿಯದೆ ನೀ ಕಷ್ಟದೊಳಗೆ ಬಿದ್ದು ಕೆಟ್ಟು ಹೋಗುವಿಯಲ್ಲೋ 1 ಮರವೆ ಮಾಯವನ್ನು ಮರುಳೆ ನೀ ತರಿಯವಲ್ಲಿ ಇನ್ನು ಪರಿ ವಿಚಾರಿಸದೆ ದುರಿತದೊಳಗೆ ಬಿದ್ದು ಮರುಗುವಿಯಲ್ಲೋ 2 ಅಸೆ ನೀಗುವಲ್ಲಿ ಸಂಸಾರ ದ್ವಾಸನೆ ಕಡಿವಲ್ಲಿ ದಾಸರ ನಡೆನುಡಿ ಸೋಸಿಲಿಂ ತಿಳಿಯದೆ ನಾಶನಾಗುವಿ ಯಮಪಾಶದೊಳಗೆ ಬಿದ್ದು 3 ಸತಿಸುತರ ಮಾಯಮೋಹದಿ ಗತಿಸಿ ಪೋಗ್ವುದು ವಯ ಕೃತ್ರಿಮನೆ ಅತಿ ಮಂದಮತಿಯೊಳು ಬಿದ್ದು ಘನ ವ್ಯಥೆಯ ಬಡುವಿ ಮಹಗತಿಮೋಕ್ಷ ಪಡೆಯದೆ 4 ಮಂದಿ ಮಕ್ಕಳ್ಯಾರು ನಿನಗೀ ಬಂಧು ಬಳಗ ಯಾರು ಕುಂದುವ ಜಗಮಾಯದಂದ ತಿಳಿದು ಮಮ ತಂದೆ ಶ್ರೀರಾಮನ ಹೊಂದಿಕೊಳ್ಳವಲ್ಲಿ 5
--------------
ರಾಮದಾಸರು