ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಡು ಕೊಡು ಕೊಡು ಹರಿಯೆ ಕೆಡದಂಥ ಪದವಿಯ ಒಡನೆ ನಿಮ್ಮಂಘ್ರಿಯ ಕಡುದೃಢ ಭಕುತಿಯ ಪ ತ್ರಿಜಗ ಪರಿಪಾಲಕ ಭಜಿಸಿಬೇಡುವೆ ನಿಮ್ಮ ಭಜನೆಸವಿಸುಖಲಾಭ 1 ಪರಕೆ ಪರತರವೆನಿಪ ಪರಮಪಾವನ ನಿಮ್ಮ ಚರಿತ ಪೊಗಳಿ ಬಾಳ್ವ ಪರಮಾನಂದದ ಜೋಕು 2 ಯತಿತತಿಗಳು ಬಿಡದೆ ಅತಿ ಭಕ್ತಿಯಿಂ ಬೇಡ್ವ ಪತಿತ ತವಸೇವೆಯಭಿರುಚಿ ಎನ್ನೊಡಲಿಗೆ ಸತತ 3 ಪರಿಭವ ಶರಧಿಯ ಕಿರಿಯಾಗಿ ತೋರಿಪ ಪರಮಪುರುಷ ನಿಮ್ಮ ಕರುಣ ಚರಣ ಮೊರೆ 4 ದುಷ್ಟ ಭ್ರಷ್ಟತೆಯಳಿದು ಶಿಷ್ಟರೊಲುಮೆಯಿತ್ತು ಅಷ್ಟಮೂರುತಿ ನಿಮ್ಮ ಶಿಷ್ಟಪಾದದ ನಿಷ್ಠೆ 5 ಕನಸು ಮನಸಿನೊಳೆನ್ನ ಕೊನೆಯ ನಾಲಗೆ ಮೇಲೆ ನೆನಹು ನಿಲ್ಲಿಸಿ ನಿಮ್ಮ ಕರುಣಘನ ಕೃಪೆ 6 ನಾಶನಸಂಸಾರದಾಸೆಯಳಿದು ನಿಜ ಸಿರಿ 7 ಮೂರ್ಹತ್ತು ಮೂರುಕೋಟಿ ವಾರಿಜಾಸನ ಸುರರು ಸೇರಿ ಭಜಿಪ ನಿಮ್ಮ ಮೂರುಕಾಲದ ನೆನಪು 8 ಅಂತರ ಶೋಧಿಸಿ ಅಂತರಾತ್ಮನ ಕಂಡು ಸಂತಸದ್ಹಿಗ್ಗುವ ಸಂತರ ಮತವರ್ಣ 9 ಸರ್ವಜ್ಞರೆನಿಸಿದವರ ಶರಣರ ಸಂಗಕರುಣಿಸಿ ಕರುಣದಿ ಪರಮ ಜ್ಞಾನೆನುವ ಪದವಿ 10 ಮಿಗಿಲಾಗಿ ನಿರ್ಧರಿಸಿ ಸಿರಿವರನಂಘ್ರಿಯೇ ಜಗಮೂರಧಿಕೆಂಬ ಸುಗುಣಗುಣಾಶ್ರಮ11 ಧರೆಮೂರು ತಲೆಬಾಗಿ ಪರಮಾದರದಿ ಪಾಡ್ವ ಹರಿನಾಮ ಕೀರ್ತನೆ ಪರಮಾದರದಿ ಪಾಡ್ವ 12 ಶಮೆಶಾಂತಿದಯೆಭಕ್ತಿ ವಿಮಲಗುಣಭೂಷಣತೆ ಸುಮನಸಸಮನಿಷ್ಠೆ ಅಮಿತಮತಿವರ ಶ್ರೀ 13 ಮಿಥ್ಯೆವರ್ಜಿತವಖಿಲ ಸತ್ಯತೆ ಸದಮಲ ನಿತ್ಯ ನಿರ್ಮಲವೆನಿಪ ತತ್ವದರ್ಥದ ವಿವರ 14 ತನುನಿತ್ಯ ಸ್ವಸ್ಥತೆ ಘನಕೆ ಘನತರವಾಗಿಮಿನುಗುವ ಘನಮುಕ್ತಿ ಮನುಮುನಿಗಳ ಪ್ರೇಮ ಶ್ರೀರಾಮ15
--------------
ರಾಮದಾಸರು