ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರಯ್ಯ ಸ್ವಾಮಿ ಬಾರಯ್ಯ ಪ ಬಾರಯ್ಯ ಮುಖವನ್ನು ತೋರಯ್ಯ ತವಪಾದ ವಾರಿಜನಂಬಿದೆ ಮಾರಜನಕ ಬೇಗ ಅ.ಪ ಎಷ್ಟಂತ ಬಳಲಲಿ ನಾನು ಸಂಸಾರ ಕಷ್ಟದ ಕಾಡಿನೊಳಿನ್ನು ಧ್ವಂಸಾಗಿ ಭ್ರಷ್ಟತನದಿ ಬಾಳುವೆನು ಕಂಸಾರಿ ಇಷ್ಟುದಯವು ಬರದೇನು ಆಹ ಶಿಷ್ಟಜನುಮವೆಂದು ಅಟ್ಟಿ ಎನ್ನನು ಇಂಥ ಕೆಟ್ಟ ಬವಣೆಗೆ ಬಲಿಗೊಟ್ಟು ಬಿಡುವರೆ ಈಶ 1 ಜನನಿಜಠರದಲಿ ಎನ್ನ ಏನೆಂ ದೆನುತ ನೂಕಿದಿ ಪೇಳು ಮುನ್ನ ಸಾನಂದನುಪಮನು ತವಚರಣ ಆನಂದನುಕೂಲವಾದಂದಿಲ್ಲೇನ ಆಹ ಅನುಚಿತ್ತವೇನಯ್ಯ ದಿನವು ಪೋಯಿತು ಅರ್ಧ ಮನಕೆತರದಲಿಹಿ ಜನಕನೆ ಕರುಣದಿ 2 ಭಕ್ತವತ್ಸಲನೆಂಬ ಬಿರುದು ಮಾಜ ದ್ಹೊತ್ತು ನಿಖಿಲ ನೀನೆ ಬೆರೆದು ತ್ರಿಜ ಗೆತ್ತಿ ಆಳುವಿ ಮನವರಿದು ನೈಜ ದಿತ್ತು ಪೊರೆವಿ ಭಯತರಿದು ಆಹ ಕರ್ತನೆ ತವಪಾದ ಮರ್ತಿರಲಾರಿನ್ನು ತುರ್ತು ದಯವಾಗೆನ್ನೊಳರ್ತಿಯಿಂ ಶ್ರೀರಾಮ 3
--------------
ರಾಮದಾಸರು
ಬಿನ್ನಪ ಕೇಳಯ್ಯಾ ಬಡವನ ಮನ್ನಿಸು ಮಹರಾಯ ಪ ಎನ್ನ ಭವಗುಣಗಳನ್ನು ಕಳೆದು ಪೊರೆ ಸನ್ನುತಾಂಗ ಹರಿ ಉನ್ನತ ಮಹಿಮ ಅ.ಪ ತೊಳಲಿಬಳಲಿ ಬಂದೆ ಸಂಸಾರದ್ಹೊಲಸಿ ನೊಳಗೆ ನಿಂದೆ ಅಳಿಯುವ ದೇಹಕೆ ಕಳವಳಿಸುವ ಮನ ಮಲಿನತೊಳೆದು ನಿರ್ಮಲ ಮಾಡು ತಂದೆ 1 ಹುಟ್ಟಿ ನೀ ಸಾಯ್ವುದಕೆ ಬಂದಿಲ್ಲ ಗಟ್ಟ್ಯಾಗಿರಲಿಕ್ಕೆ ಸಠೆ ಈ ಲೋಕವು ದಿಟವಲ್ಲೆನಗೆ ಬಟ್ಟೆ ತಪ್ಪಿಸು ತಂದೆ 2 ಇಷ್ಟುದಿನವು ಕಳೆದು ತಿಳಿಯದೆ ಭ್ರಷ್ಟತನದಿ ಬಾಳ್ವೆ ಇಷ್ಟು ದಿನ ದಿನಗಳ್ವ್ಯರ್ಥ ಕೆಟ್ಟಿದ್ದೆ ಸಾಕಯ್ಯ ಶಿಷ್ಟಗುಣವಕೊಟ್ಟು ಸಲಹೊ ಶ್ರೀರಾಮ3
--------------
ರಾಮದಾಸರು