ಒಟ್ಟು 5 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾರ್ವತಿರಮಣನಾ ನೋಡಿದೆನು | ನೋಡಿದೆನು | ಪರ್ವತ ಮಲ್ಲೇಶನಾ 1 ಆಟವಾಡುತ ಪಾಟ ಪಾಡುತ | ಕೋಟಿ ಜನರ ಸಹಿತಾಗಿ ಸಾಟಿಯಿಲ್ಲದ ಪರ್ವತ | ನಾಗಾ ಲೋಟಿಯನೆ ನಾ ನೋಡಿದೆ 2 ಅಲ್ಲಿದ್ದ ಜನರ ಸಹಿತಾಗಿ ಪೆದ್ದ ಚೆರುವನ್ನೆದಾಟಿದೆ | ಪುಟ್ಟ ಬೆಟ್ಟಗಳೇರಿ ಇಳಿಯುತ ಕೃಷ್ಣಧ್ಯಾನವ ಮಾಡುತ ದಿಟ್ಟ ಮಲ್ಲಿಕಾರ್ಜುನನ ಮನ ಮುಟ್ಟಿ ಸ್ನರಣೆಯ ಮಾಡುತ 3 ಶ್ರೀಭೌಮನ ಕೊಳ್ಳ ನೇಮದಿಂದಲಿ ದಾಟಿದೆ4 ಆ ಶೈಲ ಕೈಲಾಸ ಧಾಮರೆ | ಸೋಂಪಿನಿಂದಲಿ ಬಂದೆನೂ ಸಾಕ್ಷಿಗಣಪಗೆ ಕೈಯ ಮುಗಿದೂ | ಶ್ರೀ ಶೈಲಶಿಖರವ ಕಂಡೆನು5 ಭಂಗಾರ ಗೋಪುರದ ಮ್ಯಾಲೆ | ಶೃಂಗಾರವನು ನಾ ನೋಡಿದೆ ನಂದಿ ಭೃಂಗಿ ಮೊದಲು ಮಾಡಿ ಸಕಲ ತೀರ್ಥವ ನೋಡಿದೆ6 ಅಲ್ಲಿ ಸ್ನಾನವ ಮಾಡಿನಾನು | ಬಲ್ಲಿದನ ಬಲದಿಂದಲಿ ಎಲ್ಲ ಫಲ ಪುಷ್ಪಧರಿಸಿದ ಮಲ್ಲಿಕಾರ್ಜುನನ ನೋಡಿದೆ 7 ಪಂಚಾಮೃತವ ಮಾಡಿನಾನು | ಸಂಚಿತಾಗಮ ಕರ್ಮವು ವಂಚನಿಲ್ಲದೆ ಕರೆದು | ನಿಶ್ಚಿಂತೆ ಮನವನು ಮಾಡಿದೆ 8 ಜನಿತ ಪಾತಾಳಗಂಗಿ ಉದಕವು ತಂದು ಗಂಗಾಧರಗೆ ಎರೆದು ನಾನು | ಕಂಗಳಿಂದಲಿ ನೋಡಿದೆ 9 ಥೂಪ-ದೀಪ-ನೈವೇದ್ಯದಾರುತಿ | ಅನೇಕ ಭಕ್ತಿಲಿ ಮಾಡಿದೆ ಪ್ರೀತಿಯ ತೋರೆಂದು ಶಿವಗೆ | ಪ್ರೀತಿಲಿ ಕರಮುಗಿದೆನು 10 ಮುದ್ದು ಕೋಟಿಲಿಂಗಗೆ ನಾನು | ವಿಧ್ಯುಕ್ತದಿ ನಮಿಸಿದೆ ವೃದ್ಧ ಮಲ್ಲೇಶ್ವರನ ನೋಡಿ | ಅಲ್ಲಿದ್ದದೇವರ ಭಜಿಸಿದೆ 11 ಅಮರರಿಂದರ್ಚಿಸಿಗೊಂಬ | ಭ್ರಮರಾಂಬನ ನೋಡಿದೆ ಭ್ರಮೆಯು ಬ್ಯಾಡೆಂದು ಸಂಸಾರದ | ಬ್ಯಾಗದಿಂದಲಿ ಬೇಡಿದೆ 12 ಥಟ್ಟನೇ ಪಂಚಾ ಮಠವನೋಡಿ | ಅಟಕೇಶ್ವರಕೆ ಬಂದೆನು ಶಿಖರೇಶ್ವರನ ದರ್ಶನ ಮಾಡಿ | ಹಾಟಕೇಶ ಪುರ ನೋಡಿದೆ13 ಭಾರತಿಯ ಶೈಲಿ ವಿಸ್ತಾರ ಪತ್ರಿ ಪುಷ್ಪಗಳ ಫಲಗಳ ನಾರಸಿಂಹ ವಿಠಲಗರ್ಪಿಸಿ | ಧಾರೆ ಎರೆದು ಬಂದೆನು 14
--------------
ಓರಬಾಯಿ ಲಕ್ಷ್ಮೀದೇವಮ್ಮ
ಕಂ||ಮಂಗಳವಾರದ ಪೂಜೆಗೆಮಂಗಳ ನೈರುತ್ಯದಲ್ಲಿ ಶಿವನಪ್ಪಣೆುಂಮಂಗಳ ನಾಮವ ಜಪಿಸುತಮಂಗಳವನ್ನೀಯುತೆಮಗೆ ಶೋಭಿಸುತಿಪ್ಪಳ್‍ನಿನ್ನ ಚರಣವ ನಂಬಿ ಭಜಿಸುತಿಹ ಭಕ್ತನಿಗೆ ುನ್ನುಂಟೆ ಗ್ರಹಗತಿಗಳು ಕೃಷ್ಣಾ ಪಉನ್ನತದ ಚಕ್ರವರ್ತಿಯ ಹೊಂದಿ ಬದುಕುವನಿಗನ್ಯರಟ್ಟುಳಿ ಬರುವದೇ ಕೃಷ್ಣಾ ಅ.ಪನೀನೊಬ್ಬನೇ ದೇವನೆಂದು ಪೇಳುತಲಿಹುದುಸಾನುನಯವುಳ್ಳ ಶ್ರುತಿಯು ಕೃಷ್ಣಾಏನೊಂದು ರೂಪಾಗಿ ತೋರಿದರು ಸಕಲವೂನೀನಲ್ಲದನ್ಯವುಂಟೇ ಕೃಷ್ಣಾಏನೆಂಬೆ ಚಿನ್ನ ಹಲವಂದದಾಭರಣದಲಿಕಾಣಿಸಿದರದು ಭೇದವೇ ಕೃಷ್ಣಾನೀನೇ ದೇವಾತ್ಮಕನು ನೀನೆ ಗ್ರಹರೂಪಕನುನೀನೊಲಿದ ನರಗೆ ಭಯವೇ ಕೃಷ್ಣಾ 1ಉತ್ತವನು ಬಿತ್ತುವನು ಬಿತ್ತಿದವನುಂಬವನುಮತ್ತೊಬ್ಬನದಕೆ ಬಹನೇ ಕೃಷ್ಣಾಉತ್ತು ಬಿತ್ತಿದೆ ಮಾಯೆಯೆಂಬ ಕ್ಷೇತ್ರದಿ ನಿನ್ನಚಿತ್ತೊಂದು ಬೀಜವನ್ನು ಕೃಷ್ಣಾಬಿತ್ತು ವೃಕ್ಷಾಕಾರವಾದಂತೆ ಲೋಕವಿದುವಿಸ್ತರದಿ ಬಹುವಾುತು ಕೃಷ್ಣಾಬಿತ್ತಿ ಬೆಳೆದುಂಬಾತನುತ್ತಮನು ನೀನಿರಲುಮತ್ತೊಂದು ಭಯವದೇಕೆ ಕೃಷ್ಣಾ 2ಇಂದ್ರಾದಿ ದಿಕ್ಪಾಲಕರ ರೂಪನಾಗಿರುವೆಚಂದ್ರಾದಿ ಗ್ರಹರೂಪನು ಕೃಷ್ಣಾಇಂದ್ರ ಚಂದ್ರಾದಿತ್ಯ ವರುಣಾದ್ರಿ ಗಗನಾದಿಇಂದ್ರಿಯಾಧೀಶ ನೀನೆ ಕøಷ್ಣಾಇಂದ್ರಿಯಾಧೀನರಾಗಿರುವರರಿಯರು ನಿನ್ನಮಂದಬುದ್ಧಿಯ ಮೂಢರು ಕೃಷ್ಣಾತಂದ್ರಿಯನು ಪರಿಹರಿಸಿ ಹೊಂದಿ ನಿನ್ನನು ಭಜಿಪಛಂದವನು ನೀ ತೋರಿಸು ಕೃಷ್ಣಾ 3ಒಡೆಯನೊಬ್ಬನು ಜಗಕೆ ಬಳಿಕಾತನಾಜ್ಞೆಯಲಿನಡೆವರೆಲ್ಲರು ಮೀರದೆ ಕೃಷ್ಣಾನಡೆಯಲರಿಯದು ಹಲಬರೊಡೆಯರಾಗಲು ನೀತಿಕೆಡುವುದದು ಕದನಮುಖದಿ ಕೃಷ್ಣಾನುಡಿದು ಭೇದವ ನಿತ್ಯ ಕದನವನು ಮಾಡುತಿಹಜಡರ ಮಾತದು ಸತ್ಯವೇ ಕೃಷ್ಣಾಬಿಡಿಸಿ ಭೇದವನೊಬ್ಬನೊಡೆಯನೆಂದುರು ಸಾರ್ವಸಡಗರದ ಶ್ರುತಿ ನಿತ್ಯವು ಕೃಷ್ಣಾ 4ಬಿಡದೆ ನಿನ್ನಂಘ್ರಿಯನು ದೃಢವಾಗಿ ಭಜಿಸುವರುಜಡತೆಯಳಿದ ಮಹಾತ್ಮರು ಕೃಷ್ಣಾಬಿಡುವದವರಿಗೆ ಲೋಕ ನಡೆವ ನಡತೆಯ ಭ್ರಮೆಯುನಡತೆಯದು ನಿನ್ನ ನಿಜವು ಕೃಷ್ಣಾನಡೆದು ಬಳಿಕಾ ಮಾರ್ಗವನು ಹೊಂದಿದವ ನಿಪುಣಬಿಡಬೇಕು ಮೂಢಮತವ ಕೃಷ್ಣಾಪೊಡವಿಯೊಳು ತಿರುಪತಿಯ ವಾಸ ವೆಂಕಟರಮಣಕೊಡು ನಿನ್ನ ಭಜಿಪ ಮತಿಯ ಕೃಷ್ಣಾ 5ಓಂ ಅವ್ಯಕ್ತ ಗೀತಾಮೃತ ಮಹೋದಧಯೇ ನಮಃ
--------------
ತಿಮ್ಮಪ್ಪದಾಸರು
ಭ್ರಮಮೂಲಮಿದಂ ಜಗತು ನೇಮದ ನಿಜಮಾತು ಧ್ರುವ ಭ್ರಮೆಯಿಂದಲಿ ಭ್ರಮಣ್ಹತ್ಯದ ನೋಡಿ ಭ್ರಮೆ ನೆಲೆಗೊಳಿಸದು ಮನ ಸ್ಥಿರಮಾಡಿ ಭ್ರಮಿಸೇದನೇಕ ಜನ್ಮ ತಿರುಗಾಡಿ ಭ್ರಮಿಯಲಿ ಬಾರದು ನಿಜ ಕೈಗೊಡಿ 1 ಭ್ರಮೆಯಕ ಭ್ರಮೆ ಹತ್ತೇದ ಬಲು ಬಹಳ ಭ್ರಮಯು ಮಾಡೇದ ಸಂಸಾರದ ಮೇಳ ಭ್ರಮೆ ಇಲ್ಲದ್ಯಾತಕೆ ಏನ್ಹೇಳ ನೇಮದಿ ಹೊಳೆವುದು ವಸ್ತು ಅಚಲ 2 ನಾ ನೀನೆಂಬುದು ಭ್ರಮೆಯದ ಮೂಲ ಅನುದಿನ ಬೆನ್ನಟ್ಟಿದೆ ಬಹುಕಾಲ ಖೂನಕೆ ಬಾರದೆ ಆತ್ಮಾನುಕೂಲ ತಾನೆ ಮುಸುಕ್ಯದೆ ಭ್ರಮಿ ಸಕಲ 3 ನಿಶ್ಚಲವಾಗದೆ ಜ್ಞಾನದ ಉಗಮವು ಹೆಚ್ಚು ಕುಂದಿಗೆ ಹೊಡೆದಾಡುದು ಭ್ರಮೆಯು ಹುಚ್ಚುಮಾಡೇದ ವಿಷಯ ಭ್ರಮೆಯು ಎಚ್ಚರಿಸುವ ಸದ್ಗುರು ದಯಕ್ರಮವು 4 ನಾ ಮವನಿಷ್ಟರೊಳಾಡಿದ ಮಾತು ನಿಮಿಷಾರ್ಧದಲಿ ಭ್ರಮೆಯಗಳೆಯಿತು ಸ್ವಾಮಿಸದ್ಗುರು ಕೃಪೆಯಲಿ ತಿಳದೀತು ನೇಮಿಸಿ ತಿಳಿಕೊ ಮಹಿಪತಿನಿವಾಂತು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶೋಭನವೆನ್ನಿರೋ ಶೋಭನ ಬನ್ನಿರೆ ಶೋಭನ ಬನ್ನಿ ಸವ್ಯದಿಂದ ಧ್ರುವ ಶೋಭಾನವೆಂಬೋದು ಸೋಹಂಭಾವಗುಣ ಅಹಂಭಾವಿಗಳು ಅರಿಯವು ಅಹಂಭಾವಿಗಳು ಅರಿಯುವು ಅನಂಗನ ಅಹಂಭ್ರಮೆಯು ವಿಪರೀತ 1 ಶೋಭನವೆನ್ನಿರೇ ಸಿದ್ಧಾಂತನುಭವಿಗಳು ಕಾಮಿ ಕಾಮಣ್ಣನ ಮದುವಿಗೆ ಪ್ರಾಣಿ ಮಾತ್ರಗಳೆಲ್ಲ ಬರಬೇಕು 2 ಶೋಭನವೆನ್ನಿರೇ ಮದೂಣಿಗಾನಂಗಗೆ ಕಾಮಿತದಳಗಿತ್ತಿ ಅರಸಗ ಕಾಮಿತದಳಗಿತ್ತಿ ಅರಸ ಮೋಹನ್ನಗೆ ನೆರೆಯಿತು ಲೋಕ ಧರೆಯೊಳು 3 ಶೋಭನವೆನ್ನಿರೇ ಕಾಮಿ ಕಾಮಣ್ಣಗೆ ಕಾಯದೊಳೀಹ್ಯ ಕರುಣಿಗೆ ಕಾಯದೊಳಿದ್ದು ಮೆರೆವ ಅನಂಗನು ಚರ್ಮದಬೊಂಬಿ ಗುರುತಾಗಿ 4 ಶೋಭನವೆನ್ನಿರೇ ಸಜ್ಜನ ಸಾವಿತ್ರೇರು ಆನಿ ಮೊದಲೆ ಇರುಹು ಕಡಿಗೆಲ್ಲ ಆನಿಮೊದಲೆ ಇರುಹು ಕಡಿಗೆಲ್ಲ ಮಹಿಪತಿ ಶೋಭಾನಯೆಂದ ಸಬೂದಿಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು