ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲ ಮೃತ್ಯು ಗೆಲಿಯಲಿಲ್ಲ ಕಾಲ ಪ ಪೃಥ್ವಿಯಮೇಲೆ ಕೃತಕೃತ್ಯನಾಗಲು ಬಂದ ವೃತ್ತಾಂತ ತಿಳಿಯಲಿಲ್ಲಅ.ಪ ನಂಬಿಕೊಂಡೆಯಲ್ಲ ಈ ಜಗ ಬೆಂಬಲ ಬರೋದಲ್ಲ ಜಂಬಬಡುವಿ ಸುಳ್ಳೆ ಮನದ ಡಂಬವ ಬಿಡಲಿಲ್ಲ ಕುಂಭಿನಿಸುಖದ ಹಂಬಲದಲಿ ದಿನ ಶುಂಭತನದಿಗಳೆದಿಂಬಿಲ್ಲದ್ಹೋಗುವಿ 1 ಕುಮತಿಯ ಬಿಡಲಿಲ್ಲ ಮಾಯಮಮತ ಕಡಿಯಲಿಲ್ಲ ನಮಿಸಿ ಬಿಡದೆ ಸದಾ ಸುಮನಸರೊಳಗಾಡಿ ಭ್ರಮೆಯನಳಯವಿಲ್ಲ ಬಂದ ಸಮಯ ತಿಳಿಯಲಿಲ್ಲ ವಿಮಲಸುಖದನಿಜ ಕ್ರಮವ ತಿಳಿಯಲಿಲ್ಲ 2 ಆಸೆ ನೀಗಲಿಲ್ಲ ವಿಷಯದ್ವಾಸನ್ಹಿಂಗಲಿಲ್ಲ ಕ್ಲೇಶ ತೊಡೆಯಲಿಲ್ಲ ಲಂಪಟ ಮೋಸದಿಂದುಳಿಲಿಲ್ಲ ಶೇಷಶಯನ ಮಮ ಶ್ರೀಶ ಶ್ರೀರಾಮನ ದಾಸನಾಗಿ ಭವಪಾಶ ಗೆಲಿಯಲಿಲ್ಲ 3
--------------
ರಾಮದಾಸರು